ಒಡವೆ ಸಿಕ್ಕಿದೋ... ಆದರೆ ಕಳ್ಳರೇ ಸಿಗಲಿಲ್ಲ

ಚಿನ್ನಾಭರಣ
ಚಿನ್ನಾಭರಣ
Published on

ಪ್ರಮುಖ ಮುಖ್ಯಾಂಶಗಳು

  • ಕಳೆದ ಎರಡು ತಿಂಗಳ ಹಿಂದೆ ದಾಖಲಾಗಿದ್ದ ಪ್ರಕರಣ
  • ಆಂಧ್ರ ಪ್ರದೇಶ ಮೂಲಕ ಕಳ್ಳರ ಕೈ ಚಳಕ
  • ಒಡವೆ ಸಿಕ್ಕರೂ ತಪ್ಪಿಸಿಕೊಂಡು ಖದೀಮರು
ರಾಮನಗರ: ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಸೇರಿದ್ದ ಚಿನ್ನವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುವ ರಾಮನಗರ ಗ್ರಾಮಾಂತರ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ.
ಕಳೆದ ಅಕ್ಟೋಬರ್ .17ರಂದು ರಾಮನಗರಕ್ಕೆ ಕಾರ್ಯನಿಮಿತ್ತ ಬಂದಿದ್ಧ ಅವ್ವೇರಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರ ಹೋಂಡಾ ಆ್ಯಕ್ಟೀವಾದಲ್ಲಿ ಇದ್ದ 15.20 ಲಕ್ಷ ರೂ ಮೌಲ್ಯದ ಚಿನ್ನಭಾರಣ ಮತ್ತು 2 ಲಕ್ಷ ನಗದು ಕಳವಾಗಿತ್ತು. ಈ ಸಂಬಂಧ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿದ್ದ ಗ್ರಾಮಾಂತರ ಪೊಲೀಸರು ಆರೋಪಿಗಳ ಜಾಡು ಹಿಡಿದು ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕಾವಲ ತಾಲೂಕಿನ ಕಪ್ಪರಾಲ ತಿಪ್ಪ ಗ್ರಾಮಕ್ಕೆ ತೆರಳಿದ್ರೆದರು.

ಒಡವೆ ಸಿಕ್ಕವು

ಜಾಡು ಹಿಡಿದು ಕಪ್ಪರಾಲ ತಿಪ್ಪ ಗ್ರಾಮಕ್ಕೆ ತೆರಳಿದ ಕಳ್ಳರ ಮನೆ ಬಾಗಿಲು ತಟ್ಟಿದಾಗ ಎದುರಿಗೆ ಬಂದಿದ್ದು, ಮೇಕಲ ದಾಸ್ (35) ಮತ್ತು ಪ್ರಶಾಂತ್ (33) ಅವರ ತಾಯಿ ಉಷಾ. ಕಿಟಕಿಯಲ್ಲಿಯೇ ನಿಂತು ಮಾತನಾಡಿದ ಆಕೆ ಪೊಲೀಸರು ಬಂಧಿರುವ ಮಾಹಿತಿಯನ್ನು ತನ್ನ ಮಕ್ಕಳಿಗೆ ನೀಡಿದ್ದಾಳೆ. ಈ ವೇಳೆ ಒಡವೆ ಕಳ್ಳತವನ್ನು ಒಪ್ಪಿಕೊಂಡ ಕಳ್ಳರು, ಒಡವೆಗಳನ್ನು ವಾಪಾಸ್ ನೀಡುವಂತೆ ಸೂಚನೆ ನೀಡಿದ್ದಾರೆ. ಆದರೆ 2 ಲಕ್ಷ ರೂ ನಗದು ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅನಿವಾರ್ಯವಾಗಿ ಒಡವೆಗಳನ್ನು ಮಾತ್ರ ಪಡೆದುಕೊಳ್ಳುವಂತೆ ಅಗಿದೆ

ಸ್ಥಳೀಯ ಪೊಲೀಸರ ಸಹಕಾರ

ಒಡವೆ ಪತ್ತೆಯಾದ ನಂತರ ಅವಗಳನ್ನು ಅಕ್ಕಸಾಲಿಗರಿಂದ ಒಡವೆಗಳನ್ನು ಪರೀಕ್ಷೆ ಮಾಡಿಸಿದ್ದಾರೆ. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ 189.45 ಗ್ರಾಂ ಚಿನ್ನಭಾರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಆರೋಪಿಗಳು ಪತ್ತೆಯಾಗಿಲ್ಲ. ಕಾರ್ಯಚರಣೆಯಲ್ಲಿ ರಾಮನಗರ ಗ್ರಾಮಾಂತರ ಸಿಪಿಐ ಮುರಳೀ, ಎಸ್‌ಐ ಅಲ್ಲಾವುದ್ದೀನ್, ಸಿಬ್ಬಂದಿ ಮಹೇಶ್, ಲೋಕೇಶ್, ಸುಜಾತ, ರವಿ, ಆಸೀï ಅಲಿ, ಲತಾ, ರಮೇಶ್, ನರೇಶ್, ಕುಮಾರ್ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net