ರಸ್ತೆ ಗುಂಡಿಮಯ ಸಂಚಾರ ಅಯೋಮಯ!

ರಾಮನಗರ ತಾಲೂಕು ಮಾಯಗಾನಹಳ್ಳಿಯ ಐಟಿಐ ಕಾಲೇಜು ರಸ್ತೆ ಹಳ್ಳ ದಿಣ್ಣೆಗಳಿಂದ ಸಂಪೂರ್ಣ ಹದಗೆಟ್ಟಿರುವುದು.
ರಾಮನಗರ ತಾಲೂಕು ಮಾಯಗಾನಹಳ್ಳಿಯ ಐಟಿಐ ಕಾಲೇಜು ರಸ್ತೆ ಹಳ್ಳ ದಿಣ್ಣೆಗಳಿಂದ ಸಂಪೂರ್ಣ ಹದಗೆಟ್ಟಿರುವುದು.
Published on
ರಾಮನಗರ: ಮಾಯಗಾನಹಳ್ಳಿ ಸರ್ಕಾರಿ ಐಟಿಐ ಕಾಲೇಜು ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಗುಂಡಿ ಬಿದ್ದು, ಸಂಪೂರ್ಣ ಹದಗೆಟ್ಟಿದ್ದು, ಮಾರ್ಗದ ದುರಸ್ತಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬೆಂಗಳೂರು&ಮೈಸೂರು ರಾಷ್ಟ್ರೀಯ ಹೆದ್ದಾರಿ ಸರ್ವೀಸ್​ ರಸ್ತೆಯಿಂದ ಸರ್ಕಾರಿ ವೃತ್ತಿಪರ ಕೋರ್ಸ್​ಗಳ (ಐಟಿಐ) ಕಾಲೇಜು ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು, ಹಲವು ವರ್ಷಗಳಿಂದ ದುರಸ್ತು ಇಲ್ಲದೆ ಸಂಪೂರ್ಣ ಹಾಳಾಗಿದೆ. ಡಾಂಬರು ಕಿತ್ತುಹೋಗಿ ಮಣ್ಣಿನ ರಸ್ತೆಯಾಗಿದೆ. ರಸ್ತೆ ಪಕ್ಕದಲ್ಲಿ ಕಾಲುವೆ ವ್ಯವಸ್ಥೆ ಇಲ್ಲದ ಕಾರಣ ಮಳೆನೀರು ನೇರವಾಗಿ ರಸ್ತೆಯಲ್ಲಿ ಹರಿದು ಕೊರಕಲು ಉಂಟಾಗಿದೆ.
ನಿತ್ಯ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ಶಿಕ್ಷಕರುಗಳು, ಸಾರ್ವಜನಿಕರು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ರಸ್ತೆ ಹಳ್ಳದಿಣ್ಣೆಗಳಿಂದ ಕೂಡಿ ಅಧ್ವಾನಗೊಂಡಿದ್ದು, ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ದಶಕದ ಹಿಂದೆ ನಿರ್ಮಾಣ: ರಸ್ತೆ ಕಳೆದ 10 ವರ್ಷಗಳ ಹಿಂದೆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ ಈವರೆಗೂ ಯಾವುದೇ ನಿರ್ವಹಣೆ ಮಾಡದ ಕಾರಣ ಮಳೆ ಬಂದಾಗ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಮಾಡಿಕೊಂಡಿರುವ ನಿದರ್ಶನಗಳಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net