ಭಾನುವಾರ ಹೊಸದುರ್ಗದಿಂದ ಕೋಡಿಹಳ್ಳಿಗೆ ಬರುವ ವೇಳೆ ತಾವರೆಗಟ್ಟೆ ಕ್ರಾಸ್ ಬಳಿ ಖಾಸಗಿ ಬಸ್ ಹಾಗೂ ಬೈಕ್ನಡುವೆ ಅಪಘಾತ ಸಂಭವಿಸಿತ್ತು, ಜತೆಯಲ್ಲಿದ್ದ ತಂದೆ ವೀರಭದ್ರೇಗೌಡ ಅವರು ಹಾರೋಹಳ್ಳಿ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಪಾದಚಾರಿ ಬೊಮ್ಮಸಂದ್ರದ ಲಿಂಗೇಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಹಾರೋಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.