ಮದ್ಯದಲ್ಲಿ ಎಳನೀರು ಬೆರೆಸಲೆಂದು ವಿನೋದನನ್ನು ಸ್ನೇಹಿತರಾದ ಸುದೀಪ್ ಮತ್ತು ಪ್ರಜ್ವಲ್ ತೆಂಗಿನ ಮರ ಹತ್ತಿಸಿದರು. ಈ ವೇಳೆ ಮರದಿಂದ ಜಾರಿ ಬಿದ್ದು ವಿನೋದನ ಬೆನ್ನು ಮೂಳೆ ಮುರಿದಿತ್ತು. ವಿನೋದಗೆ ಚಿಕಿತ್ಸೆ ಕೊಡಿಸಿದರೆ ಹತ್ತಾರು ಲಕ್ಷ ರೂ. ರ್ಖಚಾಗುತ್ತದೆಂದು ಆತನನ್ನು ಕೊಲೆ ಮಾಡಿ, ಬಾವಿಗೆ ಎಸೆದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.