ಚಿನ್ನದ ಕುವರಿ ನಿತ್ಯಶ್ರೀ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​ ಹಾಗೂ ಕೃಷಿ ಸಚಿವ ಎನ್​.ಚೆಲುವರಾಯಸ್ವಾಮಿ ಅವರು ನಿತ್ಯಶ್ರೀಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​ ಹಾಗೂ ಕೃಷಿ ಸಚಿವ ಎನ್​.ಚೆಲುವರಾಯಸ್ವಾಮಿ ಅವರು ನಿತ್ಯಶ್ರೀಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.
Published on
ಚನ್ನಪಟ್ಟಣ: ತಾಲೂಕಿನ ಮಳೂರುಪಟ್ಟಣದ ಬಿ.ಟೆಕ್​ ಕೃಷಿ ಇಂಜಿನಿಯರಿಂಗ್​ ವಿದ್ಯಾರ್ಥಿನಿ ನಿತ್ಯಶ್ರೀ
ಮೂರು ಚಿನ್ನದ ಪದಕ ಪಡೆಯುವ ಮೂಲಕ ಪಾಲಕರು ಹಾಗೂ ಹುಟ್ಟೂರಿಗೆ ಕೀರ್ತಿ ತಂದಿದ್ದಾರೆ.
ಗ್ರಾಮದ ವೀರಭದ್ರೇಗೌಡ&ಪ್ರತಿಭಾ ದಂಪತಿ ಪುತ್ರಿ ನಿತ್ಯಶ್ರೀ ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನ ಗಾಂಧಿ ಕೃಷಿ ವಿಾನ ಕೇಂದ್ರ (ಜಿಕೆವಿಕೆ), ಕೃಷಿ ವಿಶ್ವವಿದ್ಯಾಲಯದ ಬಿ.ಟೆಕ್​ ಕೃಷಿ ಇಂಜಿನಿಯರಿಂಗ್​ ಪದವಿಯಲ್ಲಿ 10,000 ಅಂಕಗಳ ಶ್ರೇಣಿಯಲ್ಲಿ 8,933 ಸರಾಸರಿ ಅಂಕ ಪಡೆದು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಇತ್ತೀಚೆಗೆ ಹಮ್ಮಿಕೊಂಡಿದ್ದ ಕೃಷಿ ವಿಶ್ವವಿದ್ಯಾಲಯದ 60ನೇ ಟಿಕೋತ್ಸವದಲ್ಲಿ ಡಾ.ಎಸ್​.ಜವರೇಗೌಡ ಚಿನ್ನದ ಪದಕ, ಸರ್​ ಎಂ.ವಿಶ್ವೇಶ್ವರಯ್ಯ ಚಿನ್ನದ ಪದಕ, ಹಾಗೂ ಕೃಷಿ ವಿಶ್ವವಿದ್ಯಾಲಯದ ಚಿನ್ನದ ಪದಕವನ್ನು ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​ ಹಾಗೂ ಕೃಷಿ ಸಚಿವ ಎನ್​.ಚೆಲುವರಾಯಸ್ವಾಮಿ ಪ್ರದಾನ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net