ಕೈಲಾಂಚ ಹೋಬಳಿಯ ವಿಭೂತಿಕೆರೆ ಗ್ರಾಮದಲ್ಲಿ ಆನೆಗಳು ತೆಂಗಿನಮರ ನಾಶಪಡಿಸಿರುವುದು.
Published on:
Copied
Follow Us
ಕೈಲಾಂಚ: ಹೋಬಳಿಯ ವಿಭೂತಿಕೆರೆ ಗ್ರಾಮದಲ್ಲಿ ನಾಲ್ಕು ಆನೆಗಳ ತಂಡ ಸೋಮವಾರ ರಾತ್ರಿ ದಾಳಿ ನಡೆಸಿ ಮರಿಮಾದಯ್ಯ, ಸಿದ್ದಯ್ಯ, ಬಸವರಾಜು, ನವೀನ್ ಅವರ ತೆಂಗಿನಮರ, ಬಾಳೆತೋಟ, ಹಲಸಿನಮರ, ಜಾನುವಾರು ಮೇವು, ಜೋಳ, ನೀರಾವರಿ ಪರಿಕರ ನಾಶಪಡಿಸಿವೆ.
ಚಿಕ್ಕಮಣ್ಣುಗುಡ್ಡೆ ಅರಣ್ಯದಿಂದ ಅಚ್ಚಲು ಅರಣ್ಯ ಸೇರುವ ಸಂದರ್ಭದಲ್ಲಿ ಸೋಮವಾರ ರಾತ್ರಿ ದಾಳಿ ನಡೆಸಿವೆ. ಮೂರು ಆನೆಗಳ ಜತೆ ಮರಿಯೂ ಇದೆ ಎನ್ನಲಾಗಿದೆ. ಆನೆಗಳು ಅಚ್ಚಲು ಅರಣ್ಯದಲ್ಲಿ ಬೀಡು ಬಿಟ್ಟಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಬೇರೆ ಕಡೆ ಹೋಗದಂತೆ ಕಾವಲು ಕಾಯುತ್ತಿದ್ದು,ರಾತ್ರಿ ಚಿಕ್ಕಮಣ್ಣುಗುಡ್ಡೆಗೆ ಕಾರ್ಯಾಚರಣೆ ನಡೆಸಲಾಗುತ್ತದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು. ಅರಣ್ಯ ಇಲಾಖೆ ಅವುಗಳ ಸ್ವಸ್ಥಾನ ಸೇರಿಸಲು ಮುಂದಾಗಬೇಕು ಎನ್ನುತ್ತಾರೆ ವಿಭೂತಿಕೆರೆ ರೈತ ಶಿವಲಿಂಗಪ್ರಸಾದ್.
"
ಚಿಕ್ಕಮಣ್ಣುಗುಡ್ಡೆಯಿಂದ ಬಂದಿರುವ ನಾಲ್ಕು ಆನೆಗಳು ಅಚ್ಚಲು ಅರಣ್ಯದಲ್ಲಿವೆ. ಮಾಯಾಗಾನಹಳ್ಳಿ ಕಡೆ ಬಂದ ಆನೆಗಳು ಕೇತೋಹಳ್ಳಿ ಅರಣ್ಯದಲ್ಲಿವೆ. ಅಣ್ಣಹಳ್ಳಿ ಭಾಗದಲ್ಲಿ ಒಂಟಿ ಆನೆ ಇದೆ. ಇಂದು ರಾತ್ರಿ ಆನೆ ಕಾರ್ಯಪಡೆಯೊಂದಿಗೆ ನಮ್ಮ ಸಿಬ್ಬಂದಿ ಸೇರಿ ಅವುಗಳ ಮೂಲಸ್ಥಾನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತದೆ.