

ಮಾಗಡಿ ಸೊಗಡಿನ ಅವರೆ ಕಾಯಿಯ ವಾಸನೆ, ರುಚಿ ಬೇರೆ ಅವರೆ ಕಾಯಿಯಿಂದ ಸಿಗುವುದಿಲ್ಲ. ಈ ಬಾರಿ ಮಾಗಡಿ ಸೊಗಡಿನ ಅವರೆಕಾಯಿ ಕಡಿಮೆಯಿದ್ದು, ಹುಣಸೂರು, ಕೋಲಾರದ ಅವರೆ ಹೆಚ್ಚಿದೆ. ಮಾಗಡಿ ಸೊಗಡಿನ ಅವರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯವ ನಿಟ್ಟಿನಲ್ಲಿ ಹೆಚ್ಚು ಅವರೆಕಾಯಿ ಬೆಳೆಯುವ ರೈತರನ್ನು ಸನ್ಮಾನಿಸಲಾಗುವುದು.
ಮಾಗಡಿ ಅವರೆಕಾಯಿ ಸೊಗಡು ಎಲ್ಲೆಲ್ಲೂ ಪಸರಿಸಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಅವರೆಕಾಯಿ ಬೆಳೆಯಲು ಮುಂದಾಗಬೇಕು. ಜತೆಗೆ ಸರ್ಕಾರ ಅವರೆಕಾಯಿಗೆ ಬೆಂಬಲ ಬೆಲೆಯಾಗಿ 10 ಸಾವಿರ ರೂ. ೂಷಿಸಬೇಕು.