ಮರಿ ಸಾವು ಆನೆಗಳ ರೋದನ

ಕನಕಪುರ ತಾಲೂಕು ಹುಣಸನಹಳ್ಳಿ ವ್ಯಾಪ್ತಿಯ ರಾಮದೇವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಆನೆಮರಿ ಮೃತದೇಹಪತ್ತೆ ಹಿನ್ನೆಲೆ ಡಿಸಿಎ್​ ರಾಮಕೃಷ್ಣಪ್ಪ, ಎಸಿಎ್​ ರವಿಕುಮಾರ್​, ವೈದ್ಯ ಶ್ರೀನಾಥ್​, ಡಿಆರ್​ಎಫ್​ಒಗಳಾದ ನಾಗರಾಜು, ಚೇತನ್​ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಪರಿಶೀಲಿಸಿದರು.
ಕನಕಪುರ ತಾಲೂಕು ಹುಣಸನಹಳ್ಳಿ ವ್ಯಾಪ್ತಿಯ ರಾಮದೇವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಆನೆಮರಿ ಮೃತದೇಹಪತ್ತೆ ಹಿನ್ನೆಲೆ ಡಿಸಿಎ್​ ರಾಮಕೃಷ್ಣಪ್ಪ, ಎಸಿಎ್​ ರವಿಕುಮಾರ್​, ವೈದ್ಯ ಶ್ರೀನಾಥ್​, ಡಿಆರ್​ಎಫ್​ಒಗಳಾದ ನಾಗರಾಜು, ಚೇತನ್​ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಪರಿಶೀಲಿಸಿದರು.
Published on
ಕನಕಪುರ: ರಾಮದೇವರ ಬೆಟ್ಟದ ಅರಣ್ಯಪ್ರದೇಶದಲ್ಲಿ ನಾಲ್ಕೆ$ದು ದಿನಗಳಿಂದ ಆನೆಗಳು ಒಂದೇ ಪ್ರದೇಶದಲ್ಲಿದ್ದು ಘೀಳಿಡುತ್ತಿರುವುದೇಕೆಂಬ ಕುತೂಹಲಕ್ಕೆ ಉತ್ತರ ದೊರೆತಿದ್ದು, ಅವುಗಳ ರೋದನಕ್ಕೆ ಮರಿಯೊಂದು ಅಸುನೀಗಿದ್ದೇ ಕಾರಣ ಎನ್ನುವುದು ಪತ್ತೆಯಾಗಿದೆ.
ತಾಲೂಕಿನ ಕೋಡಿಹಳ್ಳಿ ವನ್ಯಜಿವಿವಲಯದ ಹುಣಸನಹಳ್ಳಿ ವ್ಯಾಪ್ತಿಯ ರಾಮದೇವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ತಿಂಗಳ ಆನೆ ಮರಿಯ ಕಳೇಬರ ಗುರುವಾರ ಕಂಡುಬಂದಿದೆ. ಅನುಮಾನಾಸ್ಪದವಾಗಿ ಆನೆಮರಿಯ ಮೃತದೇಹ ಪತ್ತೆಯಾದ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ನಾಲ್ಕುದಿನಗಳ ಹಿಂದೆಯೇ ಮರಿ ಮೃತಪಟ್ಟಿರಬಹುದು ಎಂದು ಶಂಕಿಸಿದ್ದಾರೆೆ.
ಆನೆಗಳ ರೋದನ
ಮೂರ್ನಾಲ್ಕು ಆನೆಗಳು ರಾಮದೇವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ನಾಲ್ಕೆ$ದು ದಿನಗಳಿಂದ ಮೊಕ್ಕಾಂ ಹೂಡಿದ್ದವು. ಅಲ್ಲದೆ ಅವು ಸದ್ದು ಮಾಡುತ್ತಿದ್ದವು. ಇದನ್ನು ಗಮನಿಸಿದ ಸ್ಥಳಿಯರು ಅನುಮಾನಗೊಂಡು ಸ್ಥಳಕ್ಕೆ ಹೋದಾಗ ಆನೆ ಮರಿಯ ಕಳೇಬರ ಪತ್ತೆಯಾಗಿದೆ. ಅವು ಮರಿಯ ಸಾವಿನ ಶೋಕದಿಂದ ಒಂದೇ ಸ್ಥಳದಲ್ಲಿದ್ದವು ಎಂದು ಗೊತ್ತಾದಾಗ ಸ್ಥಳಿಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಸದ್ಯ ಮರಣೋತ್ತರ ಪರೀೆ ನಡೆಸಿ, ಸ್ಥಳದಲ್ಲೇ ಅಂತ್ಯಸಂಸ್ಕಾರ ನಡೆಸಲಾಗಿದೆ. ಬನ್ನೇರುಟ್ಟ ಪಶು ವೈದ್ಯ ಆನಂದ ನೇತೃತ್ವದ ತಂಡ ಮರಣೋತ್ತರ ಪರೀೆ ನಡೆಸಿದ್ದು, ವರದಿ ಬಳಿಕ ಆನೆಮರಿ ಸಾವಿನ ನಿಖರ ಕಾರಣ ತಿಳಿಯಲಿದೆ. ಡಿಸಿಎ್​ ರಾಮಕೃಷ್ಣಪ್ಪ, ಎಸಿಎ್​ ರವಿಕುಮಾರ್​, ವೈದ್ಯ ಶ್ರೀನಾಥ್​, ಡಿಆರ್​ಎಫ್​ಒಗಳಾದ ನಾಗರಾಜು, ಚೇತನ್​ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net