ಆರೇ ದಿನದಲ್ಲಿ ಗಣತಿ ಪೂರ್ಣಗೊಳಿಸಿದ ಶಿಕ್ಷಕಿ

ಕೇಂದ್ರ ಸರ್ಕಾರ ಕೈಗೊಂಡಿರುವ ಜನಗಣತಿ ಕಾರ್ಯವನ್ನು ತ್ವರಿತಗಾಗಿ ಪೂರ್ಣಗೊಳಿಸಿದ ಶಿಕ್ಷಕಿ ಭಾರತಿ ಅವರನ್ನು ರಾಮನಗರ ನಗರಸಭೆಯಿಂದ ಅಭಿನಂದಿಸಲಾಯಿತು. ಪೌರಾಯುಕ್ತ ಡಾ.ಜಯಣ್ಣ, ಕಂದಾಯ ನಿರೀಕ್ಷಕ ನಾಗರಾಜು ಮುಂತಾದವರು ಇದ್ದರು.
ಕೇಂದ್ರ ಸರ್ಕಾರ ಕೈಗೊಂಡಿರುವ ಜನಗಣತಿ ಕಾರ್ಯವನ್ನು ತ್ವರಿತಗಾಗಿ ಪೂರ್ಣಗೊಳಿಸಿದ ಶಿಕ್ಷಕಿ ಭಾರತಿ ಅವರನ್ನು ರಾಮನಗರ ನಗರಸಭೆಯಿಂದ ಅಭಿನಂದಿಸಲಾಯಿತು. ಪೌರಾಯುಕ್ತ ಡಾ.ಜಯಣ್ಣ, ಕಂದಾಯ ನಿರೀಕ್ಷಕ ನಾಗರಾಜು ಮುಂತಾದವರು ಇದ್ದರು.
Published on
ರಾಮನಗರ: ಕೇಂದ್ರ ಸರ್ಕಾರ ಕೈಗೊಂಡಿರುವ ಜನಗಣತಿ ಕಾರ್ಯವನ್ನು ಆರೇ ದಿನಗಳಲ್ಲಿ ಪೂರ್ಣಗೊಳಿಸಿದ ಶಿಕ್ಷಕಿಯನ್ನು ರಾಮನಗರ ನಗರಸಭೆಯಿಂದ ಸನ್ಮಾನಿಸಲಾಯಿತು.
ತಾಲೂಕಿನ ಹರೀಸಂದ್ರದ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಡಿ. ಭಾರತಿ ರಾಮನಗರ ನಗರಸಭೆ ವ್ಯಾಪ್ತಿಯ ಬ್ಲಾಕ್​ ಗಣತಿಯನ್ನು ಕೇವಲ ಆರೇ ದಿನದಲ್ಲಿ ಪೂರ್ಣಗೊಳಿಸಿದ್ದಾರೆ. ಭಾರತಿ ಅವರಿಗೆ ನಗರದ 17ನೇ ವಾರ್ಡ್​ನ ಬಾಲಗೇರಿಯ 70ನೇ ಬ್ಲಾಕ್​ನ ಗಣತಿಯ ಹೊಣೆ ವಹಿಸಲಾಗಿತ್ತು. 170 ಕಟ್ಟಡಗಳು ಹಾಗೂ 220 ಮನೆಗಳಿದ್ದ ಬ್ಲಾಕ್​ನ ಗಣತಿಗೆ ಮೇ 15ರವರೆಗೆ ಒಂದು ತಿಂಗಳು ಅವಕಾಶವಿದ್ದರೂ, ಆರೇ ದಿನದಲ್ಲಿ ಮುಗಿಸುವ ಮೂಲಕ ಗಮನ ಸೆಳೆದಿದ್ದಾರೆ.
6 ಗಂಟೆಗೆ ಕೆಲಸ:
ಬಾಲಗೇರಿಯ 70ನೇ ಬ್ಲಾಕ್​ಗಳಿಗೆ ಸಂಬಂಧಿಸಿದಂತೆ ಮೊದಲ ದಿನವೇ ರಸ್ತೆ ಮತ್ತು ಮನೆಗಳನ್ನು ಗುರುತಿಸಿಕೊಂಡು ನೆ ತಯಾರಿಸಿಕೊಂಡಿದ್ದೆ. ನಿತ್ಯ ಬೆಳಗ್ಗೆ 6 ಕ್ಕೆ ಕೆಲಸ ಶುರು ಮಾಡಿ ಆ್ಯಪ್​ನಲ್ಲಿ ಅಪ್ಲೋಡ್​ ಮಾಡುತ್ತಿದ್ದೆ ಎಂದು ಭಾರತಿ ಮಾಹಿತಿ ಹಂಚಿಕೊಂಡರು.
ಗಣತಿಗಾಗಿ ಬೆಳಗ್ಗೆಯೇ ಮನೆಗಳಿಗೆ ಹೋದಾಗ ಕುಟುಂಬದ ಸದಸ್ಯರೆಲ್ಲರೂ ಸಿಗುತ್ತಿದ್ದರು. ಮಧ್ಯಾಹ್ನ 12 ರವರೆಗೆ ಗಣತಿ ಮುಗಿಸಿ ಊಟಕ್ಕೆ ವಿರಾಮ ತೆಗೆದುಕೊಳ್ಳುತ್ತಿದ್ದೆ. ನಂತರ ಮಧ್ಯಾಹ್ನ 2 ರಿಂದ ರಾತ್ರಿ 8ರವರೆಗೆ ಗಣತಿ ಮಾಡುತ್ತಿದ್ದೆ. ಈ ಅವಧಿಯಲ್ಲಿ ಬೀಗ ಹಾಕಿರುತ್ತಿದ್ದ ಮನೆಯವರು ಯಾವಾಗ ಸಿಗುತ್ತಾರೆ ಎಂಬುದನ್ನು ತಿಳಿದುಕೊಂಡು, ಅವರಿದ್ದಾಗಲೇ ಬಂದು ವಿವರ ಕಲೆ ಹಾಕುತ್ತಿದ್ದೆ ಎಂದು ಹೇಳಿದರು.
ಸನ್ಮಾನ
ನಗರಸಭೆಯ ವ್ಯಾಪ್ತಿಯ ಒಟ್ಟು 155 ಬ್ಲಾಕ್​ಗಳ ಪೈಕಿ 70ರಲ್ಲಿ ಮೊದಲಿಗೆ ಗಣತಿ ಕಾರ್ಯ ಮುಗಿದಿದೆ. ತ್ವರಿತವಾಗಿ ಗಣತಿ ಕೆಲಸ ಮುಗಿಸಿರುವ ಭಾರತಿ ಅವರ ಕಾರ್ಯವೈಖರಿಗೆ ನಗರಸಭೆ ಮೆಚ್ಚುಗೆ ವ್ಯಕ್ತಪಡಿಸಿದೆ. ಪೌರಾಯುಕ್ತ ಡಾ.ಜಯಣ್ಣ ಸನ್ಮಾನ ಮಾಡುವ ಮೂಲಕ ಶಿಕ್ಷಕಿಯ ಕಾರ್ಯವೈಖರಿಯನ್ನು ಶ್ಲಾಸಿದ್ದಾರೆ ಎಂದು 70ನೇ ಬ್ಲಾಕ್​ ಮೇಲ್ವಿಚಾರಕರಾದ ನಗರಸಭೆಯ ಕಂದಾಯ ನಿರೀಕ್ಷಕ ಆರ್​. ನಾಗರಾಜು ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net