

ಗ್ರಾಮದ ಕೂಗಳತೆ ದೂರದಲ್ಲಿ ಡಾಂಬರೀಕರಣ ಟಕಗಳು ಯಾವುದೇ ಕಾನೂನು ಅನುಸರಿಸದೇ ಕಾರ್ಯನಿರ್ವಹಿಸುತ್ತಿವೆ. ಟಕಗಳಿಂದ ಹೊರಬರುವ ಟಾರ್ ಮಿಶ್ರಿತ ಧೂಳು ಬೆಳೆಗಳ ಮೇಲೆ ಕುಳಿತುಕೊಳ್ಳುತ್ತಿದ್ದು, ಬೆಳೆಗಳು ನಾಶವಾಗುತ್ತಿವೆ. ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಈ ಬಗ್ಗೆ ಹೋರಾಟ ಮಾಡಿ ಕೆಲ ಟಕಗಳಿಗೆ ಬೀಗ ಹಾಕಿಸಿದ್ದೆವು. ಆದರೆ ಎರಡು ಟಕಗಳ ಮಾಲೀಕರು ಪ್ರಭಾವ ಬೀರಿ ಟಕಗಳನ್ನು ಮುಂದುರೆಸಿದ್ದಾರೆ. ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಸಂಬಂಧಿತ ಅಧಿಕಾರಿಗಳು ಟಕಗಳ ವಿರುದ್ಧ ಕ್ರಮ ಜರುಗಿಸಬೇಕಿದೆ.