ಕೈಲಾಂಚ: ರಾಮನಗರ ತಾಲೂಕು ಗೌಡಯ್ಯನದೊಡ್ಡಿಯಲ್ಲಿ ಭಾನುವಾರ ಹಾವು ಕಚ್ಚಿ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ಗ್ರಾಮದ ರಮೇಶ್ ಮತ್ತು ಸವಿತಾ ದಂಪತಿ ಪುತ್ರಿ ಆರ್.ಲಾವಣ್ಯಾ (10) ಮೃತೆ. ಶನಿವಾರ ರಾತ್ರಿ ಮನೆ ಬಳಿ ತಿರುಗಾಡುತ್ತಿದ್ದಾಗ ವಿಷಪೂರಿತ ಹಾವು ಕಚ್ಚಿದೆ. ಆದರೆ, ಮಗು ಹಾವನ್ನು ಕತ್ತಲೆಯಲ್ಲಿ ನೋಡಿರದ ಕಾರಣ ಏನೋ ಕಡಿಯಿತು ಎಂದು ಪಾಲಕರ ಬಳಿ ಹೇಳಿದೆ. ಆದರೆ ಇರುವೆ, ಕಡಜ ಕಡಿದಿರಬೇಕು ಎಂದು ಸುಮ್ಮನಾಗಿದ್ದಾರೆ. ಮಧ್ಯರಾತ್ರಿ 12 ಗಂಟೆ ಸಮಯದಲ್ಲಿ ಬಾಲಕಿ ಒದ್ದಾಡಿ ಮೈ ಉರಿಯುತ್ತಿದೆ ಎಂದು ಹೇಳಿದ್ದಾಳೆೆ. ಕೂಡಲೇ ಜಿಲ್ಲಾಸ್ಪತ್ರೆಗೆ ಬಾಲಕಿಯನ್ನು ಕರೆತಂದಿದ್ದಾರೆ. ವೈದ್ಯರು ಪ್ರಥಮಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರೆಗೆ ಹೋಗಲು ತಿಳಿಸಿದ್ದಾರೆ. ಬೆಂಗಳೂರಿಗೆ ಹೋಗುವ ಮಾರ್ಗಮಧ್ಯದಲ್ಲಿಯೇ ಬಾಲಕಿ ಮೃತಪಟ್ಟಿದ್ದಾಳೆ.
ವಾಪಸ್ ಬಾಲಕಿಯ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ತಂದು ವೈದ್ಯರು ಮರಣೋತ್ತರ ಪರೀೆ ನಡೆಸಿ ಭಾನುವಾರ ಸಂಜೆ ಮೃತ ದೇಹವನ್ನು ಪಾಲಕರಿಗೆ ನೀಡಿದರು. ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾವಣ್ಯಾಗೆ ತಮ್ಮ ಇದ್ದಾನೆ.
ಲಾವಣ್ಯಾ ತಂದೆ ರಮೇಶ್ ಮೂಲತ@ ಮಂಡ್ಯ ತಾಲೂಕಿನ ಹನಕೆರೆಯವರು. ಸವಿತಾ ಗೌಡಯ್ಯನದೊಡ್ಡಿಯವರಾಗಿದ್ದು, ರಮೇಶ್ ಮದುವೆಯಾದ ನಂತರ ಪತ್ನಿ ಮನೆಯಲ್ಲೆ ವಾಸವಾಗಿದ್ದರು. ಲಾವಣ್ಯಾ ಗೌಡಯ್ಯನದೊಡ್ಡಿ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದಳು. ಶವ ಸಂಸ್ಕಾರ ಭಾನುವಾರ ಸಂಜೆ ಬಾಲಕಿಯ ತಂದೆ ಸ್ವಗ್ರಾಮ ಮಂಡ್ಯ ತಾಲೂಕಿನ ಹನಕೆರೆಯಲ್ಲಿ ನಡೆಯಿತು. ಶಾಲೆಯಲ್ಲಿ ಲವಲವಿಕೆಯಿಂದ ಇದ್ದು ಬಾಲಕಿ ನಗುತ್ತಲೇ ಮನೆಗೆ ಹೋಗಿದ್ದಳು. ವಿಧಿ ಹಾವಿನ ರೂಪದಲ್ಲಿ ಬಂದು ಪುಟ್ಟ ಕಂದಮ್ಮನನ್ನು ಬಲಿ ಪಡೆದಿದೆ ಎಂದು ಗೌಡಯ್ಯನದೊಡ್ಡಿ ಸರ್ಕಾರಿ ಶಾಲೆ ಶಿಕ್ಷಕಿ ಪ್ರತಿಭಾ, ರೀಟಾ ದು@ಖಿತರಾದರು.