ವ್ಯಾಪಾರಿಗಳ ಮೇಲೆ ಬೀದಿನಾಯಿಗಳ ದಾಳಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಶ್ವಾನಗಳ ಉಪಟಳ ಜನರಲ್ಲಿ ತಳಮಳ > ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ

ಮಾಗಡಿ: ಪಟ್ಟಣದಲ್ಲಿ ಬೀದಿನಾಯಿಗಳ ಉಪಟಳ ಮಿತಿಮೀರಿದ್ದು, ಸಾರ್ವಜನಿಕರು ಆತಂಕದಲ್ಲಿಯೇ ನಡೆದಾಡುವಂತಾಗಿದೆ.
ಪಟ್ಟಣದ ಹೂವು, ತರಕಾರಿ ಮಾರಾಟ ಮಾಡುತ್ತಿದ್ದ ರಾಮಕೃಷ್ಣ, ಹನುಮಂತಯ್ಯ, ರಾಜೇಶ್​, ಗಂಗಮ್ಮ, ಅವೇರಯ್ಯ ಅವರ ಮೇಲೆ ಏಕಾಏಕಿ ಬೀದಿ ನಾಯಿಗಳು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿವೆ. ಅಲ್ಲದೇ, ಸಮೀಪ ಇದ್ದ ಎಮ್ಮೆ, ಕರುಗಳಿಗೂ ಗಾಯಗೊಳಿಸಿವೆ.
ಗಾಯಾಳುಗಳು ಕೂಡಲೇ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ ಇಂತಹ ಪ್ರಕರಣಗಳು ಸಾಮಾನ್ಯವಾಗಿದ್ದು, ಬೀದಿನಾಯಿಗಳ ಉಪಟಳಕ್ಕೆ ತಡೆಇಲ್ಲವೇ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದ ಕಲ್ಯಾಗೇಟ್​ನಿಂದ ತಾಲೂಕು ಕಚೇರಿ ಮುಂಭಾಗದವರೆಗೂ 100ಕ್ಕೂ ಹೆಚ್ಚು ಬೀದಿ ನಾಯಿಗಳು ಹಿಂಡು, ಹಿಂಡಾಗಿ ಒಂದೆಡೆ ಇದ್ದು, ಈ ವೇಳೆ ದ್ವಿಚಕ್ರ ಸವಾರರು ರಸ್ತೆಯಲ್ಲಿ ತೆರಳುತ್ತಿದ್ದರೆ ಓಡಿಸಿಕೊಂಡು ಹೋಗುವುದರಿಂದ ಕೆಲ ದ್ವಿಚಕ್ರವಾಹನ ಸವಾರರು ದ್ವಿ ಚಕ್ರದಿಂದ ಕೆಳಗ್ಗೆ ಬಿದ್ದು ಗಾಯಗೊಂಡಿರುವ ಟನೆ ಪ್ರತಿ ನಿತ್ಯ ನಡೆಯುತ್ತಿದೆ. ಪುರಸಭೆ ಕೂಡಲೇ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕದಿದ್ದರೆ ಸಾರ್ವಜನಿಕರು ರಸ್ತೆಯಲ್ಲಿ ಓಡಾಡದ ಸ್ಥಿತಿ ತಲುಪುವುದಂತೂ ಗ್ಯಾರಂಟಿ.
"

ಪಟ್ಟಣದ ಮಾರುಕಟ್ಟೆಯಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದೆ. ಬೀದಿ ನಾಯಿಗಳನ್ನು ಹಿಡಿದು ನಾಗರಿಕರಿಗೆ ರಣೆ ನೀಡಬೇಕು. ಏಕಾಏಕಿ ಬಂದು ಕಚ್ಚಿರುವುದರಿಂದ ತೊಂದರೆಯಾಗಿದೆ. ಈ ಕೂಡಲೇ ಬೀದಿ ನಾಯಿಗಳ ಸ್ಥಳಾಂತರ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net