ಮಾಗಡಿಯಲ್ಲಿ ಬಿಡಾಡಿ ದನಗಳ ಹಾವಳಿ

ಮಾಗಡಿಯ ಬಿಕೆ ರಸ್ತೆಯ ತುಂಬ ಬಿಡಾಡಿ ದನಗಳಿಂದ ವಾಹನ ಸವಾರರಿಗೆ ಕಿರಿಕಿರಿ.
ಮಾಗಡಿಯ ಬಿಕೆ ರಸ್ತೆಯ ತುಂಬ ಬಿಡಾಡಿ ದನಗಳಿಂದ ವಾಹನ ಸವಾರರಿಗೆ ಕಿರಿಕಿರಿ.
Published on
ಮಾಗಡಿ: ತಿರುಮಲೆ ರಸ್ತೆಯಲ್ಲಿ ಬಿಡಾಡಿ ದನಗಳ ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ.
ಆರ್​.ಆರ್​ ರಸ್ತೆ. ಬಿಕೆ ರಸ್ತೆ, ತಿರುಮಲೆ ರಸ್ತೆ ಸದಾ ವಾಹನಗಳ ಸಂಚಾರದಿಂದ ಗಿಜಿಗುಡುತ್ತಿರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ರಸ್ತೆಯ ಮಧ್ಯಭಾಗದಲ್ಲೇ ಹತ್ತಾರು ಬಿಡಾಡಿ ದನಗಳು, ಎತ್ತುಗಳು ಹಿಂಡುಹಿಂಡಾಗಿ ಬೀಡು ಬಿಡುತ್ತಿವೆ. ರಾತ್ರಿ ವೇಳೆ ಈ ದನಗಳು ವಾಹನ ಸವಾರರಿಗೆ ತಕ್ಷಣಕ್ಕೆ ಕಾಣಿಸದೆ ಅಪಘಾತಗಳು ಸಂಭವಿಸುವ ಜತೆಗೆ ಮಕ್ಕಳು, ವೃದ್ಧರು ಹಾಗೂ ಮಹಿಳೆಯರ ಮೇಲೂ ನುಗ್ಗುತ್ತಿವೆ. ಸ್ವಲ್ಪ ಗಮನ ತಪ್ಪಿದರೂ ಪ್ರಾಣಕ್ಕೆ ಅಪಾಯ ಗ್ಯಾರಂಟಿ ಎನ್ನುವಂತಾಗಿದೆ ಇಲ್ಲಿನ ಪರಿಸ್ಥಿತಿ.
ಈ ಬಗ್ಗೆ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ಪುರಸಭೆ ಅಧಿಕಾರಿಗಳು ಮತ್ತು ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ರ್ನಿಲಕ್ಷ$್ಯ ತಾಳುತ್ತಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಸ್ತೆಗಿಳಿಯುವ ದನಗಳನ್ನು ಗೋಶಾಲೆಗಳಿಗೆ ಸೇರಿಸಿ ಅಥವಾ ಅವುಗಳ ಮಾಲೀಕರಿಗೆ ದಂಡ ವಿಧಿಸಿ ಎಂದು ನಾಗರಿಕರು ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರು ಸಮಸ್ಯೆ ತಂದಾಗಲೆಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿ ಕೈತೊಳೆದುಕೊಳ್ಳುವ ಅಧಿಕಾರಿಗಳು, ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಯಾವುದಾದರೂ ದೊಡ್ಡ ಅನಾಹುತ ನಡೆದು ಪ್ರಾಣಹಾನಿಯಾದ ಮೇಲಷ್ಟೇ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಪ್ರತಿಭಟನೆ ಎಚ್ಚರಿಕೆ
ಪುರಸಭೆ ಉದಾಸೀನ ಬಿಟ್ಟು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು. ಬಿಡಾಡಿ ದನಗಳನ್ನು ಹಿಡಿದು ಸುರತವಾಗಿ ಗೋಶಾಲೆಗಳಿಗೆ ರವಾನಿಸಬೇಕು. ಹಸುಗಳನ್ನು ಬೀದಿಗೆ ಬಿಡುವ ಬೇಜವಾಬ್ದಾರಿ ಮಾಲೀಕರನ್ನು ಪತ್ತೆ ಹಚ್ಚಿ ಅವರಿಗೆ ದಂಡ ವಿಧಿಸಬೇಕು. ಬಿಕೆ, ಆರ್​. ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದಿದ್ದರೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಜನ ಎಚ್ಚರಿಸಿದ್ದಾರೆ.
"

ಬಿಡಾಡಿ ದನಗಳ ಹಾವಳಿಗೆ ಪುರಸಭೆ ಕಡಿವಾಣ ಹಾಕಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದರೆ ರೈತ ಸಂಕ್ಕೆ ಈ ಬಿಡಾಡಿದನಗಳನ್ನು ನೀಡಿದರೆ ರೈತರಿಗೆ ನೀಡುತ್ತೇವೆ. ಇದು ಸಾಧ್ಯವಿಲ್ಲ ಎನ್ನುವುದಾದರೆ ಗೋ ಶಾಲೆಗಳಿಗೆ ಸೇರಿಸಲಿ.

— > ಹೊಸಪಾಳ್ಯ ಲೋಕೇಶ್​ ಮಾಗಡಿ ತಾಲೂಕು ರೈತಸಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net