ಬಿಸ್ಕೂರು ಕೆರೆಯಲ್ಲಿ ಮಣ್ಣು ಮಾಫಿಯಾ

ಕುದೂರು ಹೋಬಳಿಯ ಬಿಸ್ಕೂರಿನ ಕೆರೆಯ ಮಣ್ಣನ್ನು ನಂಬರ್​ ಪ್ಲೇಟ್​ ಇಲ್ಲದ ಟ್ರಾ$್ಯಕ್ಟರ್​ನಲ್ಲಿ ತುಂಬಿಕೊಂಡು ಹೋಗುತ್ತಿರುವುದು.
ಕುದೂರು ಹೋಬಳಿಯ ಬಿಸ್ಕೂರಿನ ಕೆರೆಯ ಮಣ್ಣನ್ನು ನಂಬರ್​ ಪ್ಲೇಟ್​ ಇಲ್ಲದ ಟ್ರಾ$್ಯಕ್ಟರ್​ನಲ್ಲಿ ತುಂಬಿಕೊಂಡು ಹೋಗುತ್ತಿರುವುದು.
Published on

ದಂಧೆ ಅವ್ಯಾಹತವಾಗಿದ್ದರೂ ಇಲ್ಲ ಕ್ರಮ > ಅಸ್ತಿತ್ವ ಕಳೆದುಕೊಳ್ಳುತ್ತಿದೆ ಜಲಮೂಲ

ಕುದೂರು: ಹೋಬಳಿಯ ಬಿಸ್ಕೂರು ಕೆರೆಯಲ್ಲಿ ಮಣ್ಣು ಮಾಫಿಯಾ ಅವ್ಯಾಹತವಾಗಿದ್ದು, ಸಂಬಂಧಿತ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ.
ರೈತರ ಜಮೀನು, ಹೊಲಗಳನ್ನು ಸಮ ಮಾಡಿಕೊಳ್ಳಲೆಂದು ಸುಳ್ಳು ಹೇಳಿ ಪ್ರಭಾವಿಗಳು ಯಾವುದೇ ಅನುಮತಿ ಪಡೆಯದೆ ಇಟ್ಟಿಗೆ ಕಾರ್ಖಾನೆಗಳಿಗೆ, ಖಾಸಗಿ ಜಾಗಗಳಿಗೆ ಎರಡು ಮೂರು ಜೆಸಿಬಿ ಬಳಸಿ 10&15 ಟ್ರಾ$್ಯಕ್ಟರ್​ಗಳನ್ನು ಬಳಸಿಕೊಂಡು ಕೆರೆ ಒಡಲನ್ನು ಅಗೆದು, ಮಣ್ಣನ್ನು ಸಾಗಿಸುತ್ತಿದ್ದಾರೆ. ಬಿಸ್ಕೂರು ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಈಗಾಗಲೇ ಕೆರೆಯ ಹಲವು ಕಡೆ ಒತ್ತುವರಿಯಾಗಿದೆ. ಕೆಲವರು ರೈತರ ಹೆಸರಿನಲ್ಲಿ ಕೆರೆಯ ಮಣ್ಣನ್ನು ಲೂಟಿ ಮಾಡುತ್ತಿದ್ದಾರೆ. ಈ ಸಂಬಂಧ ತಹಸೀಲ್ದಾರ್​ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಿಯಮ ಹೇಳುವುದೇನು?
ಕಂದಾಯ ಇಲಾಖೆ ನಿಯಮಗಳ ಪ್ರಕಾರ ಕೆರೆಗಳಲ್ಲಿ 3ರಿಂದ 4 ಅಡಿಗಿಂತ ಹೆಚ್ಚು ಆಳವಾಗಿ ಹಾಗೂ ನೇರವಾಗಿ ಮಣ್ಣು ತೆಗೆಯುವಂತಿಲ್ಲ. ಇದಕ್ಕೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಅನುಮತಿ ಹಾಗೂ ಪರವಾನಗಿ ಕಡ್ಡಾಯ. ಅನುಮತಿ ಪಡೆಯದೆ ಜೆಸಿಬಿಯಂತಹ ಭಾರಿ ಯಂತ್ರಗಳನ್ನು ಕೆರೆಗಳಿಗೆ ಇಳಿಸುವಂತಿಲ್ಲ. ಇಷ್ಟೆಲ್ಲ ನಿಯಮಗಳಿದ್ದರೂ ಪ್ರಭಾವಿಗಳಿಂದ ಅವ್ಯಾಹತವಾಗಿ ಮಣ್ಣು ದಂಧೆ ನಡೆಯುತ್ತಿದೆ.

ನೋಂದಣಿ ಸಂಖ್ಯೆ ಇಲ್ಲದ ವಾಹನ ಬಳಕೆ

ನಂಬರ್​ ಪ್ಲೇಟ್​ ಇಲ್ಲದ ಟ್ರಾ$್ಯಕ್ಟರ್​ಗಳನ್ನು ದಂಧೆಗೆ ಬಳಸಿಕೊಳ್ಳಲಾಗುತ್ತಿದೆ. ಜೆಸಿಬಿ ಮತ್ತು ಟ್ರಾ$್ಯಕ್ಟರ್​ ಮೂಲಕ ಅವೈಾನಿಕವಾಗಿ ಮಣ್ಣು ತೆಗೆಯಲಾಗುತ್ತಿದೆ. ಇದರಿಂದ ಕೆರೆ ಒಡ್ಡು, ತಳಭಾಗಕ್ಕೆ ಹಾನಿಯಾಗುತ್ತಿದ್ದು, ಜಲಮೂಲಕ್ಕೆ ಧಕ್ಕೆ ಉಂಟಾಗುತ್ತಿದೆ. ಕೆರೆಯಲ್ಲಿ ಮಣ್ಣು ತೆಗೆಯುತ್ತಿರುವ ಆಳವು ವೈಾನಿಕ ಮಿತಿಯನ್ನು ಮೀರಿದೆ. ಇದರಿಂದ ಕೆರೆಯ ಸ್ವರೂಪವೇ ನಾಶವಾಗುತ್ತಿದೆ. ಸುತ್ತಮುತ್ತಲಿನ ರೈತರ ಬೋರ್​ವೆಲ್​ಗಳಲ್ಲಿ ಅಂತರ್ಜಲಮಟ್ಟ ಕುಸಿಯುತ್ತಿದೆ. ಇದು ಪರಿಸರಕ್ಕೆ ಸರಿಪಡಿಸಲಾಗದ ಹಾನಿ ಉಂಟು ಮಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಶ್ರೀಘ್ರವೇ ಕಾನೂನು ಕ್ರಮ
ರೈತರು ಜಮೀನಿಗೆ ಮಣ್ಣನ್ನು ಹೊಡೆಸಿಕೊಳ್ಳುವ ನೆಪದಲ್ಲಿ ಮುತ್ತಸಾಗರದ ಇಟ್ಟಿಗೆ ಕಾರ್ಖಾನೆಯವರು ಯಾರ ಅನುಮತಿ ಪಡೆಯದೆ ಅಕ್ರಮವಾಗಿ ಮಣ್ಣನ್ನು ಹೊಡೆಸಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಸದ್ಯಕ್ಕೆ ಇದನ್ನು ನಿಲ್ಲಿಸಲಾಗಿದೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ದಂಧೆಕೋರರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಸ್ಕೂರು ಗ್ರಾಮ ಲೆಕ್ಕಾಧಿಕಾರಿ ವೀರೇಶ್​ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net