ನೆಲಮಂಗಲ ತಾಲೂಕಿನ ಮಹದೇವಪುರ ಗ್ರಾಮದ ಅಮರಯ್ಯ, ಕೆಂಪತಿಮ್ಮೇಗೌಡ, ಭೂಸಂದ್ರ ಗ್ರಾಮದ ಭೈಲೇಗೌಡ, ಗುಡೇಮಾರನಹಳ್ಳಿಯ ಮಹೇಶ, ಅಂಬೇಡ್ಕರ್ ನಗರದ ಪ್ರವಿಣ್, ಕೂಡ್ಲೂರು ಗ್ರಾಮದ ರಮೇಶ್ ಬಂಧಿತರು. ಸೋಲೂರು ಹೋಬಳಿಯ ಕೂಡ್ಲೂರು ಗ್ರಾಮದ ಬಳಿಯ ಮಾವಿನ ತೋಟವೊಂದರಲ್ಲಿ ಜೂಜಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಸಬ್ಇನ್ಸ್ಪೆಕ್ಟರ್ ಭೀಮೇಶಯ್ಯ ಮತ್ತು ಸಿಬ್ಬಂದಿ ಸೂರ್ಯಕುಮಾರ್, ನಾಗರಾಜು, ಸತೀಶ್, ಶಿವರಾಜು, ಅಭಿಷೇಕ್, ಮಾರುತೇಶ್ ಕುಂಬಾರ, ವಿನಯ್, ಶರಣ ಬಸು ದಾಳಿ ನಡೆಸಿದ್ದರು. ಪ್ರಕರಣ ಸಂಬಂಧ ಕುದೂರು ಠಾಣೆಯಲ್ಲಿ ದೂರು ದಾಖಲಾಗಿದೆ.