ನಗರಸಭೆ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಹಳೇ ಬಸ್ ನಿಲ್ದಾಣ, ಐಜೂರು ಸರ್ಕಲ್, ಕೆಂಪೇಗೌಡ ಸರ್ಕಲ್, ರಾಯರದೊಡ್ಡಿ, ಮಂಜುನಾಥನಗರ, ರೈಲ್ವೆ ಸ್ಟೇಷನ್ ಸರ್ಕಲ್, ಕಾಮಣ್ಣನಗುಡಿ ಸರ್ಕಲ್, ವಾಟರ್ ಟ್ಯಾಂಕ್ ಸರ್ಕಲ್, ಪಿಡಬ್ಲೂಡಿ ಸರ್ಕಲ್, ವಿಜಯನಗರ ಸರ್ಕಲ್ ಹೀಗೆ ಹತ್ತು ಹಲವು ಸ್ಥಳಗಳಲ್ಲಿ ಡಿಜಿಟಲ್ ಬೋರ್ಡ್ ಅಳವಡಿಸಿದರೆ ಅಸಮರ್ಪಕವಾಗಿ ಎಲ್ಲೆಂದರಲ್ಲಿ ್ಲೆಕ್ಸ್ ಕಟ್ಟುವುದು ತಪು$್ಪತ್ತದೆ. ಜತೆಗೆ ನಗರಸಭೆಯ ಸುಂದರ ನಗರದ ಕನಸಿಗೂ ಡಿಜಿಟಲ್ ಬೋರ್ಡ್ ಅಳವಡಿಕೆ ಪರಿಸರ ಪೂರಕವಾಗುತ್ತದೆ ಎನ್ನುತ್ತಾರೆ ಗಾಂಧೀನಗರದ ಹನುಮಂತಪ್ಪ.