ಸಿದ್ಧಗಂಗೆ ಶ್ರೀಗಳಿಗೂ ಸಿಗಬೇಕಿತ್ತು ನೊಬೆಲ್​ ಪ್ರಶಸ್ತಿ!

ಮಾಗಡಿ ತಾಲೂಕಿನ ಗುಡೇಮಾರನಹಳ್ಳಿಯಲ್ಲಿ ಗ್ರಾಮಾಂತರ ಬಸವ ಜಯಂತಿ, ಪಾರ್ವತಿ ಪರಮೇಶ್ವರ, ಶ್ರೀಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಶ್ರೀ ಶಿವಕುಮಾರ ಸ್ವಾಮೀಜಿ ಸಮುದಾಯದ ಭವನದ 5ನೇ ವಾರ್ಷಿಕೋತ್ಸವವನ್ನು ಮೇಲಣಗವಿ ಮಠದ ಶ್ರೀಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಶಾಸಕ ಶ್ರೀನಿವಾಸ್​, ತಮ್ಮಡಿಹಳ್ಳಿ ಮಠದ ಸಿದ್ದಲಿಂಗ ಸ್ವಾಮೀಜಿ, ಕೆ.ಪಿ.ಬೃಂಗೇಶ್​, ನಾಗರುದ್ರ ಶರ್ಮ, ವೀರಶೈವ ಲಿಂಗಾಯತ ಸೇವಾಟ್ರಸ್ಟ್​ ಅಧ್ಯಕ್ಷ ಶಾಂತರಾಜು, ಕಾರ್ಯದರ್ಶಿ ಜಿ.ಎಂ.ರೇಣುಕಾರಾಧ್ಯ ಇದ್ದರು.

Published on
ಮಾಗಡಿ: ಮದರ್​ ಥೆರೆಸಾಗೆ ನೊಬೆಲ್​ ಲಭಿಸಿದೆ. ಅವರಿಗಿಂತ ದೊಡ್ಡ ಕಾಂತ್ರಿ ಮಾಡಿದ ಸಿದ್ಧಗಂಗಾ ಶ್ರೀಗಳಿಗೂ ಇಡೀ ವಿಶ್ವವೇ ಮೆಚ್ಚುವ ಪಾರಿತೋಷಕ ಸಿಗಬೇಕಿತ್ತು. ಆದರೆ ಪ್ರಾದೇಶಿಕವಾಗಿ ಉಳಿದ ಕಾರಣ ಅವರನ್ನು ಗುರುತಿಸಲಿಲ್ಲ ಎಂದು ಮೇಲಣಗವಿ ಮಠದ ಶ್ರೀಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ಹೊರಹಾಕಿದರು.
ಗುಡೇಮಾರನಹಳ್ಳಿಯಲ್ಲಿ ಗ್ರಾಮಾಂತರ ಬಸವ ಜಯಂತಿ, ಶ್ರೀಪಾರ್ವತಿ ಪರಮೇಶ್ವರ, ಶ್ರೀ ಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಶ್ರೀ ಶಿವಕುಮಾರ ಸ್ವಾಮೀಜಿ ಸಮುದಾಯದ ಭವನದ 5ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಶಿವಕುಮಾರ ಸ್ವಾಮೀಜಿ ಅವರು ಕ್ರಿಶ್ಚಿಯನ್​ ಧರ್ಮದಲ್ಲಿ ಜನಿಸಿದ್ದರೆ ಅವರಿಗೆ ನೊಬೆಲ್​ ಪಾರಿತೋಷಕ ಸಿಗುತ್ತಿತ್ತೇನೋ? ನೊಬೆಲ್​ ಪಾರಿತೋಷಕದಿಂದ ಶ್ರೀಗಳಿಗೆ ಏನೂ ಆಗಬೇಕಿಲ್ಲ. ಪಾರಿತೋಷಕ ಲಭಿಸಿದ್ದರೆ ಅದಕ್ಕೆಯೇ ಮತಷ್ಟು ಗೌರವ ಸಿಗುತಿತ್ತು. ಭಗವಂತ ಮೆಚ್ಚುವ ಸೇವೆ ಮಾಡಬೇಕೇ ಹೊರತು ಜನ ಮೆಚ್ಚಲು ಮಾಡಬಾರದು ಎಂದು ಶ್ರೀಗಳು ತೋರಿಸಿಕೊಟ್ಟಿದ್ದಾರೆ. ಅವರ ತತ್ವ,ಆದರ್ಶಗಳನ್ನು ಆಳವಡಿಸಿಕೊಂಡಾಗ ಸಾರ್ಥಕ ಜೀವನ ಸಾಗಿಸಬಹುದು ಎಂದರು.
ಬಸವ ಜಯಂತಿಯನ್ನು ಗ್ರಾಮಾಂತರ ಬಸವ ಜಯಂತಿ ಎಂದು ಆಚರಿಸುವ ಮೂಲಕ ಹೆಚ್ಚು ಮೆರಗು ನೀಡಿದ್ದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಎಲ್ಲರಲ್ಲೂ ಅಭಿರುಚಿ ಇರಲಿ, ಪ್ರತಿ ಅಮಾವಾಸ್ಯೆ, ಪೌರ್ಣಮಿಯಂದು ಜಗಣ್ಣಯ್ಯನ ಮಠದ ಶ್ರೀಗಳ ನೇತೃತ್ವದಲ್ಲಿ ಈ ಸ್ಥಳದಲ್ಲಿ ಶಿವಾನುಭವ ಗೋಷ್ಠಿ ನಡೆಯುವ ಮೂಲಕ ಈ ಜಾಗಕ್ಕೆ ಜ್ಞಾನ ಸಂಪತ್ತು, ಜ್ಞಾನ ದಾಸೋಹ ಹೆಚ್ಚಲಿದೆ ಎಂದರು.
ಸಿದ್ದಲಿಂಗೇಶ್ವರ ನಾಟಕ ಮಂಡಳಿ ಕಲಾವಿದರಿಂದ ಜಗಜ್ಯೋತಿ ಬಸವೇಶ್ವರ ಐತಿಹಾಸಿಕ ನಾಟಕ ಪ್ರದರ್ಶನ ನಡೆಯಿತು. ತಾ.ಪಂ.ಮಾಜಿ ಸದಸ್ಯರಾದ ಶಂಕರಪ್ಪ, ಅನಸೂಯ ಕಾಂತರಾಜು, ಗೀತಾ ಗಂಗರಂಗಯ್ಯ, ಶಿಕ್ಷಕ ಆರಾಧ್ಯ, ರೇಣುಕಪ್ಪ, ಚಂದ್ರಶೇಖರ್​, ಎಸ್​ಸಿಬಿಎಸ್​ ಮಂಜುನಾಥ್​ ಇದ್ದರು.
"

ಜಾತಿ ಮತದ ಭೇಧವಿಲ್ಲದ ಸಮ ಸಮಾಜದ ಕನಸು ಕಂಡಿದ್ದ ವಿಶ್ವಗುರು ಬಸವಣ್ಣನವರ ತತ್ವಗಳನ್ನು ಸ್ಮರಿಸಿಕೊಳ್ಳಬೇಕು. ಈ ಭವನಕ್ಕೆ ಸಿದ್ಧಗಂಗಾಶ್ರೀಗಳು ಅಡಿಪಾಯ ಹಾಕಿದರಿಂದ ಸಾವಿರಾರು ಮಂದಿಗೆ ಅನುಕೂಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net