ಅಂಗಡಿ ಬಾಗಿಲು ಮುರಿದು ಕಳ್ಳತನ

ಮಾಗಡಿ ತಾಲೂಕಿನ ಕಾಳಾರಿ ಗೇಟ್​ ಬಳಿಯ ಪ್ರಾವಿಜನ್​ ಸ್ಟೋರ್​ ಹಾಗೂ ಪಶು ಆಹಾರ ಅಂಗಡಿ ಬಾಗಿಲು ಮುರಿದಿರುವುದು.
ಮಾಗಡಿ ತಾಲೂಕಿನ ಕಾಳಾರಿ ಗೇಟ್​ ಬಳಿಯ ಪ್ರಾವಿಜನ್​ ಸ್ಟೋರ್​ ಹಾಗೂ ಪಶು ಆಹಾರ ಅಂಗಡಿ ಬಾಗಿಲು ಮುರಿದಿರುವುದು.
Published on
ಮಾಗಡಿ: ಬಾಗಿಲು ಒಡೆದು ಅಂಗಡಿ ಒಳ ನುಗ್ಗಿದ ಕಳ್ಳರು ನಗದು, ಲಾಂತರ ರೂ. ಮೌಲ್ಯದ ಸಿಗರೇಟ್​, ತಂಬಾಕು ಹಾಗೂ ದೋಚಿದ್ದಾರೆ.
ತಾಲೂಕಿನ ಕಾಳಾರಿ ಗೇಟ್​ನ ನಂಜಪ್ಪ ಅವರ ಮಾಲೀಕತ್ವದ ಪ್ರಾವಿಜನ್​ ಸ್ಟೋರ್​ ಹಾಗೂ ಪಶು ಆಹಾರ ಅಂಗಡಿಗಳ ಬಾಗಿಲು ಮುರಿದ ಕಳ್ಳರು ಪ್ರಾವಿಜನ್​ ಸ್ಟೋರ್​ನ ಹುಂಡಿಯಲ್ಲಿದ್ದ 40 ಸಾವಿರ ರೂ. ನಗದು, ಬೀಡಿ, ಸಿಗರೇಟ್​, ತಂಬಾಕು, ಪಶು ಆಹಾರದ ಅಂಗಡಿಯಲ್ಲಿದ್ದ 2 ಸಾವಿರ ರೂ. ನಗದು ಹಾಗೂ ಲಾಂತರ ರೂ. ಮೌಲ್ಯದ ವಸ್ತುಗಳು ಕದ್ದಿದ್ದಾರೆ. ಇನ್ನು ಕಳ್ಳರ ಕೃತ್ಯದ ದೃಶ್ಯಗಳು ಅಂಗಡಿ ಮುಂಭಾಗ ಹಾಗೂ ಒಳಗಿನ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net