ಕುರಿ, ಮೇಕೆ ಕಳವು ಮಾಡಿದ್ದವರ ಬಂಧನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬಿಡದಿ: ಕುರಿ ಹಾಗೂ ಮೇಕೆಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ.
ಬಿಡದಿಯ ರಂಗೇಗೌಡನದೊಡ್ಡಿ ಗ್ರಾಮದ ರಾಕೇಶ್​ (19) ಹಾಗೂ ಇನ್ನೊಬ್ಬ ಕಾನೂನು ಸಂರ್ಷಕ್ಕೆ ಒಳಗಾದ ಬಾಲಕ ಬಂಧಿತರು.
ಮಾ.5ರಂದು ರಾತ್ರಿ ತಾಳಗುಪ್ಪೆ ಗ್ರಾಮದ ಲಕ್ಷ$್ಮಮ್ಮ ಅವರ ತೋಟದಲ್ಲಿನ ಮೇಕೆ ಫಾಮ್​ರ್ ಬೀಗ ಮುರಿತು ಕಳ್ಳರು 7 ಮೇಕೆ ಹಾಗೂ 7 ಕುರಿಗಳನ್ನು ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಬಿಡದಿ ಪೊಲೀಸ್​ ಠಾಣೆಯಲ್ಲಿ ಮಾ.6ರಂದು ದೂರು ದಾಖಲಾಗಿತ್ತು. ಸಿಪಿಐ ವಿಜಯ ಕುಮಾರ್​ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಬಿಡದಿ ಠಾಣೆ ಪಿಎಸ್​ಐ ದೇವರಾಜ್​, ಸಿಬ್ಬಂದಿ ಶ್ರೀನಿವಾಸ್​, ಪ್ರಜ್ವಲ್​, ನಂದೀಶ್​ ಕುಮಾರ್​, ಹುಸೇನ್​ ಸಾಬ್​, ಜಿಲ್ಲಾ ತಾಂತ್ರಿಕ ವಿಭಾಗದ ಮಹದೇವ್​ ಆರೋಪಿಗಳನ್ನು ಬಂಧಿಸಿ ಕುರಿ, ಮೇಕೆಗಳು ಹಾಗೂ ತಾವರೆಕೆರೆ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ 2 ಬೈಕ್​ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net