ತರಬೇತಿ ನೆಪದಲ್ಲಿ ಅಥ್ಲೀಟ್​ಗೆ ಲೈಂಗಿಕ ಕಿರುಕುಳ?

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಕುದೂರು: ಟ್ರಸ್ಟ್​ ಒಂದಕ್ಕೆ ಸೇರಿಸಿ ಬೇರೆಬೇರೆ ಕ್ರೀಡೆಗಳಲ್ಲಿ ಅವಕಾಶ ಕೊಡಿಸುವುದಾಗಿ ಯುವಕನಿಂದ 7 ಖಾಲಿ ಚೆಕ್​ ಹಾಗೂ ಅಗ್ರಿಮೆಂಟ್​ ಪೇಪರ್​ಗೆ ಸಹಿ ಹಾಕಿಸಿಕೊಂಡು ಬ್ಲಾ$್ಯಕ್​ಮೇಲ್​ ಮಾಡಿದ್ದಲ್ಲದೇ ಆತನನ್ನು ಸಲಿಂಗಕಾಮಕ್ಕೆ ಒತ್ತಾಯಿಸಿ, ಹಿಂಸಿಸಿರುವ ಆರೋಪ ಕೇಳಿಬಂದಿದ್ದು, ಕುದೂರು ಪೊಲೀಸ್​ ಠಾಣೆಯಲ್ಲಿ ದೂರು&ಪ್ರತಿದೂರು ದಾಖಲಾಗಿದೆ.

ಪಟ್ಟಣದ ನವಗ್ರಾಮದ 24 ವರ್ಷದ ಯುವಕ ಸಂತ್ರಸ್ತ. ತೊರೆರಾಮನಹಳ್ಳಿ ನಿವಾಸಿ, ಹಾಪ್​ ಕಾಮ್ಸ್​ ಮಾಜಿ ನಿರ್ದೇಶಕ ಮಂಜೇಶ್​ ಕಿರುಕುಳ ನೀಡಿರುವ ಆರೋಪಿ.
ಏನಿದು ಘಟನೆ?:
ರಾಜ್ಯಮಟ್ಟದ ಪವರ್​ ಲಿಫ್ಟಿಂಗ್​ ಚಾಂಪಿಯನ್​ ಆಗಿರುವ ಸಂತ್ರಸ್ತ, ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ತಯಾರಿಯಲ್ಲಿದ್ದರು. ಈ ಮಧ್ಯೆ ಯುವಕನ ತಂದೆ ಮೇಲೆ ಸವರ್ಣೀಯರು ಹಲ್ಲೆ ಮಾಡಿದ ಪ್ರಕರಣದಲ್ಲಿ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಹೇಳಿದ ಮಂಜೇಶ್​, ಕುಟುಂಬಕ್ಕೆ ಧನಸಹಾಯ ನೀಡಿ, ಬಳಿಕ ಯುವಕನನ್ನು ಟ್ರಸ್ಟ್​ ಒಂದಕ್ಕೆ ಸೇರಿಸಿಕೊಂಡು ಅವಕಾಶ ಕೊಡಿಸುವುದಾಗಿ ನಂಬಿಸಿ 7 ಖಾಲಿ ಚೆಕ್​ ಹಾಗೂ ಅಗ್ರಿಮೆಂಟ್​ ಪೇಪರ್​ಗಳಿಗೆ ಸಹಿ ಹಾಕಿಸಿಕೊಂಡಿದ್ದ. ದಿನಗಳು ಕಳೆದರೂ ಟ್ರಸ್ಟ್​ಗೆ ಸೇರಿಸಿಕೊಳ್ಳದ ಬಗ್ಗೆ ಯುವಕ ಪ್ರಶ್ನಿಸಿದಾಗ, ಶ್ರೀದಲ್ಲೇ ತರಬೇತಿಗೆ ಕಳುಹಿಸುವುದಾಗಿ ನಂಬಿಸಿ, ಅಲ್ಲಿಯವರೆಗೆ ಕಾರು ಚಾಲಕನಾಗಿ ಕೆಲಸ ಮಾಡುವಂತೆ ತಿಳಿಸಿದ್ದ.
ಕಾರು ಚಾಲಕನಾಗಿ 6 ತಿಂಗಳು ಕಳೆದರೂ ಯಾವುದೇ ಟ್ರಸ್ಟಿಗೂ ಸೇರಿಸದ ಮಂಜೇಶ್​, ವಾಹನ ಚಲಾಯಿಸುವಾಗ ಚುಂಬಿಸುವುದು, ಗುಪ್ತಾಂಗ ಸ್ಪರ್ಶಿಸುವುದು ಇತ್ಯಾದಿ ಚೇಷ್ಟೆಗಳ ಮೂಲಕ ಸಲಿಂಗಕಾಮಕ್ಕೆ ಪ್ರಚೋದಿಸಿದ್ದ. ಇದನ್ನು ವಿರೋಧಿಸಿದಾಗ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸುತ್ತಿದ್ದುದಲ್ಲದೇ ಪೊಲೀಸರಿಗೆ ದೂರು ನೀಡಿದರೆ ಖಾಲಿ ಚೆಕ್​ ಮತ್ತು ಅಗ್ರಿಮೆಂಟ್​ಅನ್ನು ಕೋರ್ಟ್​ಗೆ ಸಲ್ಲಿಸಿ ಕೇಸ್​ ದಾಖಲಿಸುವುದಾಗಿ ಬೆದರಿಸುತ್ತಿದ್ದ. ಮಂಜೇಶ್​ ಸಲಿಂಗಕಾಮಿಯಂತೆ ಫೋನ್​ ಸಂಭಾಷಣೆಯಲ್ಲಿ ಮಾತನಾಡಿರುವುದಕ್ಕೆ ದಾಖಲೆಗಳಿವೆ ಎಂದು ಯುವಕ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದು, ಈ ಸಂಬಂಧ ಕುದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ಸಂತ್ರಸ್ತ ಪ್ರಕರಣ ದಾಖಲಿಸುವುದಕ್ಕೂ ಮುನ್ನವೇ ಮಂಜೇಶ್​ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದ್ದು, ಸಂತ್ರಸ್ತನ ಕುಟುಂಬಕ್ಕೆ ಧನಸಹಾಯವಾಗಿ ನೀಡಿದ್ದ 2.5 ಲಕ್ಷ ರೂ.ಅನ್ನು ಈವರೆಗೂ ಮರಳಿಸಿಲ್ಲ. ಹಣ ಕೇಳಿದರೆ ಯುವಕನ ಕುಟುಂಬದವರು ಅವಾಚ್ಯವಾಗಿ ನಿಂದಿಸುತ್ತಾರೆ ಎಂದು ಮಂಜೇಶ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net