ಬೆಂಗ್ಳೂರು-ಮೈಸೂರು ಹೆದ್ದಾರಿಯಲ್ಲಿ ಕೊಳಚೆ Sewage on the Highway
ಬಿಡದಿ ಪಟ್ಟಣದ ಬೈರಮಂಗಲ ಕ್ರಾಸ್ ಬಳಿಯ ಹೋಟೆಲ್ವೊಂದರ ಮುಂದೆ ಕೊಳಚೆ ನೀರು ಹೊರ ಬರುತ್ತಿದೆ.
Published on:
Copied
Follow Us
ಬಿಡದಿ: ಪಟ್ಟಣದ ಬೈರಮಂಗಲ ಕ್ರಾಸ್ನ ಹೆದ್ದಾರಿಯಲ್ಲಿ ತ್ಯಾಜ್ಯ ನೀರು ಹರಿಯುತ್ತಿರುವ ಪರಿಣಾಮ ಸಾರ್ವಜನಿಕರು, ವಾಹನ ಸವಾರರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು.. ಬೈರಮಂಗಲ ಕ್ರಾಸ್ ಬಳಿಯ ಹೋಟೆಲ್ಗಳ ಮುಂದೆ ಕಲುಷಿತ ನೀರು ಹೊರ ಬಂದು ಬೆಂಗಳೂರು&ಮೈಸೂರು ಹೆದ್ದಾರಿಯಲ್ಲಿ ಹರಿಯುತ್ತಿದೆ. ಅದರ ದುರ್ವಾಸನೆಯಿಂದ ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಅದರಲ್ಲೂ ಬೈಕ್ ಸವಾರರಿಗೆ ಹೆಚ್ಚಿನ ಕಿರಿಕಿರಿಯಾಗುತ್ತಿದ್ದು, ಮೂಗು ಮುಚ್ಚಿಕೊಂಡೇ ಓಡಾಡುವ ಅನಿವಾರ್ಯತೆ ಎದುರಾಗಿದೆ. ಸತತ 3&4 ದಿನಗಳಿಂದ ನೀರು ಹೊರ ಬಂದು ಹೆದ್ದಾರಿಯಲ್ಲೇ ಮಡುಗಟ್ಟಿದ್ದರೂ ಅಧಿಕಾರಿಗಳು ಯಾವುದೇ ಕ್ರಮವಹಿಸುತ್ತಿಲ್ಲ.
ಹೆದ್ದಾರಿ ಪಕ್ಕದಲ್ಲಿನ ಚರಂಡಿ ಬ್ಲಾಕ್ ಆಗಿ ನೀರು ಹೊರಬರುತ್ತಿದೆಯೋ?, ಹೋಟೆಲ್ಗಳ ತ್ಯಾಜ್ಯ ನೀರಿನ ಪೈಪ್ ಒಡೆದು ನೀರು ಹೊರ ಬರುತ್ತಿದೆಯೋ ಮಾಹಿತಿ ಇಲ್ಲ. ಆದರೆ ಇದನ್ನು ಕಂಡು ಕಾಣದಂತೆ ಅಲ್ಲಿನ ಹೋಟೆಲ್ ಮಾಲೀಕರು ಹಾಗೂ ಸಂಬಂಧಿತ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಹೀಗೇ ಬಿಟ್ಟರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಂದು, ಹೆದ್ದಾರಿಯುದ್ದಕ್ಕೂ ಹರಿಯಲಿದೆ.
"
ಬೆಂಗಳೂರು&ಮೈಸೂರು ಹೆದ್ದಾರಿಯಲ್ಲಿ ತ್ಯಾಜ್ಯ ನೀರು ಹರಿಯುತ್ತಿರುವ ಪರಿಣಾಮ ಸಾರ್ವಜನಿಕರು ಬಾಯಿಗೆ ಬಟ್ಟೆ ಕಟ್ಟಿಕೊಂಡು ಸಂಚರಿಸಬೇಕಿದೆ. ಅದರಲ್ಲೂ ದ್ವಿಚಕ್ರ ವಾಹನಗಳಲ್ಲಿ ಹೋಗುವಾಗ ಪಕ್ಕದಲ್ಲಿ ವೇಗವಾಗಿ ವಾಹನಗಳು ಬಂದರೆ ಕೊಳಚೆ ನೀರು ಸಿಡಿಯುತ್ತಿದೆ.