ಭಾರತ ವಿಕಾಸ ಪರಿಷತ್​ ಕಣ್ವ ಶಾಖೆಗೆ ಆಯ್ಕೆ

ಚನ್ನಪಟ್ಟಣದ ವಿವೇಕಾನಂದನಗರದ ಚಾನಲ್​ ರಸ್ತೆಯಲ್ಲಿರುವ ಭಾರತ ವಿಕಾಸ ಪರಿಷತ್​ ಕಚೇರಿಯಲ್ಲಿ ಭಾವಿಪ ಪದಾಧಿಕಾರಿಗಳಾದ ಆಯ್ಕೆ ಸಭೆ ನಡೆಯಿತು. ಅಧ್ಯ ಪುಟ್ಟಸ್ವಾಮಿಗೌಡ, ಕಾರ್ಯದರ್ಶಿ ಯೋಗೇಶ್​ ಚಕ್ಕೆರೆ, ಖಜಾಂಚಿ ವಿ.ಟಿ.ರಮೇಶ್​ ಸೇರಿದಂತೆ ಹಲವರು ಇದ್ದರು.
ಚನ್ನಪಟ್ಟಣದ ವಿವೇಕಾನಂದನಗರದ ಚಾನಲ್​ ರಸ್ತೆಯಲ್ಲಿರುವ ಭಾರತ ವಿಕಾಸ ಪರಿಷತ್​ ಕಚೇರಿಯಲ್ಲಿ ಭಾವಿಪ ಪದಾಧಿಕಾರಿಗಳಾದ ಆಯ್ಕೆ ಸಭೆ ನಡೆಯಿತು. ಅಧ್ಯ ಪುಟ್ಟಸ್ವಾಮಿಗೌಡ, ಕಾರ್ಯದರ್ಶಿ ಯೋಗೇಶ್​ ಚಕ್ಕೆರೆ, ಖಜಾಂಚಿ ವಿ.ಟಿ.ರಮೇಶ್​ ಸೇರಿದಂತೆ ಹಲವರು ಇದ್ದರು.
Published on
ಚನ್ನಪಟ್ಟಣ: ಭಾರತ ವಿಕಾಸ ಪರಿಷತ್​ ಕಣ್ವ ಶಾಖೆಯ 2026&27ನೇ ಸಾಲಿನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಅಧ್ಯರಾಗಿ ಪುಟ್ಟಸ್ವಾಮಿಗೌಡ, ಕಾರ್ಯದರ್ಶಿಯಾಗಿ ಯೋಗೇಶ್​ ಚಕ್ಕೆರೆ , ಖಜಾಂಚಿಯಾಗಿ ವಿ.ಟಿ. ರಮೇಶ್​ ಸರ್ವಾನುಮತದಿಂದ ಪುನರ್​ ಆಯ್ಕೆಯಾದರು.
ನಗರದ ವಿವೇಕಾನಂದನಗರದ ಚಾನಲ್​ ರಸ್ತೆಯಲ್ಲಿರುವ ಭಾರತ ವಿಕಾಸ ಪರಿಷತ್​ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸರ್ವಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಎರಡನೇ ಅವಧಿಗೆ ಅಧ್ಯರಾಗಿ ಆಯ್ಕೆಯಾದ ಪುಟ್ಟಸ್ವಾಮಿಗೌಡ ಮಾತನಾಡಿ, ಪರಿಷತ್​ನ ಸಂಪರ್ಕ, ಸಹಯೋಗ, ಸಂಸ್ಕಾರ, ಸೇವೆ ಮತ್ತು ಸಮರ್ಪಣೆ ತತ್ವಗಳಡಿ ಕಳೆದ ಅವಧಿಯಲ್ಲಿ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸದಸ್ಯರ ವಿಶ್ವಾಸದಿಂದ ಮತ್ತೆ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ
ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು. ಕಾರ್ಯದರ್ಶಿ ಯೋಗೇಶ್​ ಚಕ್ಕೆರೆ ಮಾತನಾಡಿ, ದೇಶಭಕ್ತಿ, ಸಂಸತಿ ಸಂರಣೆ ಮತ್ತು ಸಾಮಾಜಿಕ ಸೇವೆಯ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣದ ದಿಸೆಯಲ್ಲಿ ಸಂಸ್ಥೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಸದಸ್ಯರ ಸಹಕಾರದೊಂದಿಗೆ ಸೇವಾ ಚಟುವಟಿಕೆಗಳನ್ನು ವಿಸ್ತರಿಸಲಾಗುವುದು ಎಂದರು.
ಖಜಾಂಚಿ ವಿ.ಟಿ. ರಮೇಶ್​, ವಸಂತಕುಮಾರ್​ (ಪ್ರಾಂತ ಪದಾಧಿಕಾರಿ), ಗುರುಮಾದಯ್ಯ (ಪ್ರಾಂತ ಪದಾಧಿಕಾರಿ), ಬಿ.ಎನ್​. ಕಾಡಯ್ಯ (ಗೌರವಾಧ್ಯ), ಕರಿಯಪ್ಪ (ಉಪಾಧ್ಯ), ಜಯಲ್ಮಮ್ಮ ನಂಜಪ್ಪ (ಉಪಾಧ್ಯೆ), ಕೃಷ್ಣಕುಮಾರ್​ (ಸಹ ಕಾರ್ಯದರ್ಶಿ), ಬಸವರಾಜು (ಸಂಟನಾ ಕಾರ್ಯದರ್ಶಿ) ಸೇರಿದಂತೆ ಹಲವಾರು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net