ವಡೇರಹಳ್ಳಿಯಲ್ಲಿರುವ ಗೋದಾಮಿನಲ್ಲಿ ವಿಕಲಾಂಗರಿಗೆ ನೀಡಲು ನಾಲ್ಕು ಚಕ್ರದ 32 ಸ್ಕೂಟರ್ಗಳನ್ನು ಇರಿಸಲಾಗಿತ್ತು. ಬಯಲು ಪ್ರದೇಶದಲ್ಲಿ ಇರುವ ಈ ಗೋದಾಮು ಬೋಜರಾಜ್ ಎಂಬುವರಿಗೆ ಸೇರಿದ್ದಾಗಿದ್ದು, ಗುರುವಾರ ರಾತ್ರಿ ಕಿಡಿಗೇಡಿಗಳು ಗೋದಾಮಿಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಜೋರಾಗಿ ಉರಿಯುತ್ತಿರುವುದನ್ನು ಕಂಡ ಸ್ಥಳಿಯರು ಮಾಲೀಕರಿಗೆ ಸುದ್ದಿಮುಟ್ಟಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರಾದರೂ 10 ಸ್ಕೂಟರ್ಗಳು ಹಾನಿಯಾಗಿವೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.