ಗಂಧದ ಮರಗಳು ಕಳವು

ಸಾಂದಂಭಿರ್ಕ ಚಿತ್ರ
ಸಾಂದಂಭಿರ್ಕ ಚಿತ್ರ
Published on
ಕನಕಪುರ: ತಾಲೂಕಿನ ಹೊಳರಗಲ್ಲು ಗ್ರಾಮದ ಗೊಟ್ಟಿಗೆರೆ ರಾಮಕೃಷ್ಣ ಭಟ್​ ಅವರ ಶ್ರೀಗಂಧದ ತೋಟದಲ್ಲಿ 20 ಗಂಧದ ಮರಗಳನ್ನು ಖದೀಮರು ಇತ್ತೀಚೆಗೆ ಕಳ್ಳತನ ಮಾಡಿದ್ದಾರೆ.
ರಾಮಕೃಷ್ಣ ಭಟ್​ ಅವರು ಗಂಧದ ತೋಟದ ಸುತ್ತ ಕಾಂಪೌಂಡ್​ ನಿರ್ಮಿಸಿ, ಸಿಸಿ ಟಿವಿ ಅಳವಡಿಸಿದ್ದಾರೆ. ಅಲ್ಲದೆ ಮರಗಳ ರಕ್ಷಣೆಗೆ ಕಾರ್ಮಿಕರನ್ನೂ ನೇಮಿಸಿದ್ದಾರೆ. ಆದರೂ ರಾತ್ರೋರಾತ್ರಿ ಗಂಧದ ಮರಗಳು ಕಳ್ಳತನವಾಗಿವೆ ಎಂದು ಗ್ರಾಮಾಂತರ ಪೋಲಿಸ್​ ಠಾಣೆಯಲ್ಲಿ ನ.28ರಂದು ರಾಮಕೃಷ್ಣ ಭಟ್​ ಅವರು ದುರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬಳಿಕ ಪೋಲಿಸರು ಸ್ಥಳ ಪರಿಶೀಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net