ಹಲವು ದಿನಗಳಿಂದ ಚಿಕ್ಕಮಣ್ಣುಗುಡ್ಡೆ ಅರಣ್ಯದಲ್ಲೇ ಬಿಡಾರ ಹೂಡಿರುವ 5 ಆನೆಗಳು ಪದೇಪದೆ ಗ್ರಾಮದ ಕಡೆ ಬಂದು ತೆಂಗು, ಮಾವು, ಭತ್ತ, ರಾಗಿ, ಮುಸುಕಿನ ಜೋಳ, ಸೀಮೆಹುಲ್ಲು ತಿಂದು, ಬೋರ್ವೆಲ್ ಪರಿಕರ ನಾಶಮಾಡುತ್ತಿವೆ. ಉತ್ತಮ ಫಸಲು ಬರುತ್ತಿರುವ ವೇಳೆ ಆನೆಗಳನ್ನು ಪೈರು ತುಳಿದು ನಾಶ ಮಾಡಿವೆ. ಕೂಡಲೇ ಅರಣ್ಯ ಇಲಾಖೆಯು ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡುವ ಜತೆಗೆ ಆನೆಗಳನ್ನು ಸ್ವಸ್ಥಾನಕ್ಕೆ ಅಟ್ಟಬೇಕು ಎಂದು ಆಗ್ರಹಿಸಿದ್ದಾರೆ.