ನಿವೃತ್ತ ಉಪ ಪ್ರಾಂಶುಪಾಲ ಚ.ಶಿ.ವೆಂಕಟೇಗೌಡ ಮಾತನಾಡಿ, ರೈಲ್ವೆ ಸಚಿವ ಸೋಮಣ್ಣ ಹಾಗೂ ಸಂಸದ ಡಾ. ಸಿ.ಎನ್.ಮಂಜುನಾಥ್ ಈ ಯೋಜನೆಯನ್ನು ಕೂಡಲೇ ರದ್ದು ಮಾಡಬೇಕು. ಇಲ್ಲವೇ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇವರ ಮಾತಿಗೆ ಕುವೆಂಪು ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಮೇಶ್, ನಗರಸಭಾ ಮಾಜಿ ಸದಸ್ಯ ಮಧು, ಮುಖಂಡರಾದ ಉಮೆಶ್ ಶ್ಯಾಂಸುಂದರ್, ಪೊಲೀಸ್ ನಾಗಣ್ಣ, ಕೇಬಲ್ ರವಿ, ನಾಗೇಶ್, ಮನು, ಲೋಕೇಶ್ ಹಾಗೂ ಹಲವರು ಧ್ವನಿಗೂಡಿಸಿದರು.