ಕನಕಪುರ: ತಾಲೂಕಿನ ದೊಡ್ಡಆಲಹಳ್ಳಿ ಸಮೀಪದ ನಾಯ್ಕನಹಳ್ಳಿಯಲ್ಲಿ ಬುಧವಾರ ಆಯೋಜಿಸಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಕೊಂಡೋತ್ಸವದಲ್ಲಿ ಅರ್ಚಕ ಚಿಕ್ಕತಮ್ಮಯ್ಯ(60)ಆಯತಪ್ಪಿ ಕೊಂಡದ ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ಕಳೆದ 7 ವರ್ಷಗಳಿಂದ ನಿರಂತರವಾಗಿ ಕೊಂಡ ಹಾಯುತ್ತಿದ್ದ ಚಿಕ್ಕತಮ್ಮಯ್ಯ ಈ ಬಾರಿ ಆಯಾ ತಪ್ಪಿ ಕೆಂಡ ಮೇಲೆ ಬಿದ್ದರು. ಕೂಡಲೇ ಅವರನ್ನು ಸ್ಥಳದಲ್ಲಿದ್ದವರು ಮೇಲೆತ್ತಿ ರಸಿ, ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.