ನಾಯಕರ ಬೆಟ್ಟದಲ್ಲಿ ಪ್ರಾಚಿನ ವಿಗ್ರಹಗಳ ಸಂರಕ್ಷಣೆ

ಹೊನ್ನಾಪುರ ನಾಯಕರ ಬೆಟ್ಟದಲ್ಲಿ ಸಂರಸಲ್ಪಟ್ಟ ವಿಗ್ರಹಗಳು.
ಹೊನ್ನಾಪುರ ನಾಯಕರ ಬೆಟ್ಟದಲ್ಲಿ ಸಂರಸಲ್ಪಟ್ಟ ವಿಗ್ರಹಗಳು.
Published on
ಕುದೂರು: ಹೊನ್ನಾಪುರ ಗ್ರಾಮದ ನಾಯಕರ ಬೆಟ್ಟದಲ್ಲಿ ಸನಾತನ ಬ್ರಿಗೇಡ್​ ತಂಡ ಮತ್ತು ಶ್ರೀ ಕಂಬದ ನರಸಿಂಹ ಸ್ವಾಮಿ ಸೇವಾ ಸಮಿತಿಯಿಂದ ಬೆಟ್ಟದ ಬುಡದಲ್ಲಿ ಮಣ್ಣಿನಲ್ಲಿ ಹುದುಗಿದ್ದ ದೇಗುಲದ 16ನೇ ಶತಮಾನದ ಪ್ರಾಚಿನ ವಿಗ್ರಹಗಳನ್ನು ಪತ್ತೆ ಹಚ್ಚಿ ಸಂರಸಲಾಯಿತು.
ಬೆಟ್ಟದ ಮೇಲಿನ ಒಂದು ಭಾಗದಲ್ಲಿದ್ದ ಹೆಚ್ಚಿನ ಪ್ರಮಾಣದ ಮಣ್ಣನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು. ಉತ್ಖನನದ ವೇಳೆ ದೊರೆತ ಗರುಡಗಂಬ ಹಾಗೂ ದ್ವಾರಪಾಲಕ ವಿಗ್ರಹಗಳನ್ನು ಸಂರಸಿ ಬೆಟ್ಟದ ಮುಂಭಾಗದಲ್ಲಿ ಇರಿಸಲಾಗಿದ್ದು, ಬೆಟ್ಟ ಹತ್ತುವ ಮಾರ್ಗದಲ್ಲಿದ್ದ ಬೇಲಿಗಳನ್ನು ತೆರವುಗೊಳಿಸಿ ಭಕ್ತರ ಸಂಚಾರಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಯಿತು.
ಸಂಟಕ ಲಿಖಿತ್​ ಹೊನ್ನಾಪುರ ಮಾತನಾಡಿ, ಧಾರ್ಮಿಕ, ಐತಿಹಾಸಿಕ ಹಾಗೂ ಸಾಂಸತಿಕ ಮಹತ್ವವನ್ನು ಹೊಂದಿರುವ ಪುರಾತನ ೇತ್ರವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಉದ್ದೇಶದಿಂದ ಭಕ್ತರು, ಸೇವಾಕರ್ತರು ಮತ್ತು ವಿವಿಧ ಸಂಟನೆಗಳ ಸಹಕಾರದೊಂದಿಗೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಅದರ ಭಾಗವಾಗಿ ನಡೆದ ಸ್ವಚ್ಛತಾ ಹಾಗೂ ಸೇವಾ ಕಾರ್ಯದಲ್ಲಿ ೇತ್ರದ ಮೂಲ ಸ್ವರೂಪವನ್ನು ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.
ತಿಪ್ಪಸಂದ್ರ & ಸುಗ್ಗನಹಳ್ಳಿ ಮುಖ್ಯ ರಸ್ತೆಯಿಂದ ನಾಯಕರ ಬೆಟ್ಟ ಶ್ರೀಕಂಬದ ನರಸಿಂಹ ಸ್ವಾಮಿ ದೇವಸ್ಥಾನದವರೆಗೆ ನಾಲ್ಕು ಚಕ್ರ ವಾಹನಗಳು ಸುಲಭವಾಗಿ ಸಂಚರಿಸುವಂತೆ ರಸ್ತೆ ದುರಸ್ತಿ ಮಾಡಲಾಗಿದ್ದು, ಇದರಿಂದ ದೂರದ ಊರುಗಳಿಂದ ಆಗಮಿಸುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಸನಾತನ ಬ್ರಿಗೇಡ್​ ತಂಡದ ಮುಖ್ಯಸ್ಥ ಜಿ.ಪುನೀತ್​ , ಶ್ರೇಯಸ್​, ಪುನೀತ್​, ಚಂದ್ರಶೇಖರ್​, ಚೇತನ್​, ಮಲ್ಲಿಕಾರ್ಜುನ್​, ಮಂಜುನಾಥ್​, ರಾಜಶೇಖರ್​, ರುಚಿತ್​, ಭುವನ್​, ಮಂಜುನಾಥ್​, ಪಲ್ಲವಿ, ಅಭಿಲಾಷ್​, ಚೈತ್ರಾ, ದೀತ್​, ಅನಿಲ್​, ದುಷ್ಯಂತ್​, ಹೇಮಂತ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net