ಸಾಲ ಕೊಟ್ಟವರನ್ನೇ ಕೊಂದವರು ಅಂದರ್

ಕ್ರೈಂ
ಕ್ರೈಂ
Published on

ಪ್ರಮುಖ ಮುಖ್ಯಾಂಶಗಳು

  • ಸಾಲ ಕೇಳಿದ್ದೇ ತಪ್ಪಾಯ್ತು
  • ಬಡ್ಡಿ ಹಣ ಕೇಳಲು ಹೋದವಳನ್ನೇ ಕೊಂದರು
  • ರೈಲ್ವೆ ಟ್ರ್ಯಾಕ್ ಮೇಲೆ ಎಸೆದಿದ್ದ ಆರೋಪಿಗಳು
ರಾಮನಗರ: ಸಾಲ ಕೊಟ್ಟಿದ್ದ ಮಹಿಳೆಯನ್ನೇ ಉಸಿರುಗಟ್ಟಿಸಿ ಸಾಯಿಸಿ ನಂತರ ಆಕೆಯ ಮೈಮೇಲಿದ್ದ ಒಡವೆಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ರಾಮನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ರಾಮನಗರ ತಾಲೂಕು ಸಂಗಬಸವನದೊಡ್ಡಿ ಗ್ರಾಮದ ಸುಶೀಲಮ್ಮ ಕೊಲೆ ಆದ ಮಹಿಳೆ. ಇದೇ ಗ್ರಾಮದ ಗಿರಿಜಾ (36) ಮತ್ತು ಮಹೇಶ (42) ಬಂಧಿತ ಆರೋಪಿಗಳು.
ಸುಶೀಲಮ್ಮ ಅವರು ತಮ್ಮದೇ ಗ್ರಾಮದ ಗಿರಿಜಾ ಅವರಿಗೆ 20 ಸಾವಿರ ರೂ ಸಾಲ ನೀಡಿದ್ದರು. ಇದರ ಬಡ್ಡಿ ಆಗ್ಗಾಗ್ಗೆ ತೆರಳಿ ಪಡೆದುಕೊಂಡು ಬರುತ್ತಿದ್ದರು. ಆದರೆ ಜೂನ್ 15ರ ಮಧ್ಯಾಹ್ನ ಮನೆಯಿಂದ ತೆರಳಿದ್ದ ಸುಶೀಲಮ್ಮ ನಂತರ ನಾಪತ್ತೆ ಆಗಿದ್ದರು. ಈ ಸಂಭಂಧ ಸುಶೀಲಮ್ಮ ಪುತ್ರ ಮಹದೇವಯ್ಯ ರಾಮನಗರ ಮಹಿಳಾ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ ಜೂ.21ರಂದು ತಮ್ಮ ಮನೆಯ ಹಿಂದೆಯೇ ಹಾಗು ಹೋಗುವ ರೈಲ್ವೆ ಹಳಿಯ ಮೇಲೆ ಸುಶೀಲಮ್ಮ ಅವರ ಮೃತದೇಹ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಈ ವೇಳೆ ಈಕೆಯ ಮೈಮೇಲಿದ್ದ ಯಾವುದೇ ಒಡವೆಗಳು ಇಲ್ಲದಿರುವುದನ್ನು ಗಮನಿಸಿದ್ದ ಮಹದೇವಯ್ಯ ತಮ್ಮ ತಾಯಿಯನ್ನು ಕೊಲೆ ಮಾಡಲಾಗಿದೆ. ಗ್ರಾಮದ ಗಿರಿಜಾ ಅವರೇ ಈ ಕೃತ್ಯ ನಡೆಸಿದ್ದಾರೆ ಎಂದು ಅನುಮಾನ ವ್ಯಪ್ತಿಪಡಿಸಿ ರಾಮನಗರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ಕೈಗೊಂಡು ಗ್ರಾಮಾಂತರ ಪೊಲೀಸರು ದೂರುದಾರರು ನೀಡಿದ ಸುಳಿವಿನ ಮೇರೆಗೆ ಗಿರಿಜಾ ಮತ್ತು ಮಹೇಶ್ ಇಬ್ಬರೂ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಆಗಿರುವುದು ತಿಳಿದು ಬಂದಿದೆ.
ಗ್ರಾಮಾಂತರ ಸಿಪಿಐ ಮುರಳಿ ಅವರ ನೇತೃತ್ವದಲ್ಲಿ ತನಿಖೆ ನಡೆಸಿದ್ದು, ಪಿಎಸ್‌ಐ ಸಿದ್ದರಾಜು, ನರಸಿಂಹಯ್ಯ, ಅರ್ಜುನ್ ಸಿಬ್ಬಂದಿಯಾದ ಸುಜಾತ, ಗಿರಿಯಮ್ಮ, ವೀಣಾ, ರವಿ, ಲತಾ, ಸುನೀತ ಭಾಗವಹಿಸಿದ್ದರು.
ಹೊಸ ಒಡವೆ ಖರೀದಿ
ಬಂಧಿತ ಆರೋಪಿಗಳಿಬ್ಬರೂ ತಮ್ಮ ಮನೆಗೆ ಹಣ ಕೇಳಲು ಬಂದ ಸುಶೀಲಮ್ಮ ಅವರ ಉಸಿರುಗಟ್ಟಿಸಿ ಕೊಲೆ ಮಾಡಿ ಆಕೆಯ ಮೈಮೇಲೆ ಇದ್ದ ಓಲೆಗಳು, ಮಾಂಗಲ್ಯ ಸರವನ್ನು ಕಸಿದುಕೊಂಡಿದ್ದಾರೆ. ನಂತರ ರಾಮನಗರ ಒಡವೆ ಅಂಗಡಿಯೊಂದರಲ್ಲಿ ಮಾರಾಟ ಮಾಡಿ, ನಂತರ ಹೊಸ ಒಡವೆಗಳನ್ನು ಗಿರಿವಿ ಸಹ ಇಟ್ಟಿದ್ದಾರೆ. ಗಿರವಿ ಇಟ್ಟಿದ್ದ 9.26 ಗ್ರಾಂ ತೂಕದ ಓಲೆಗಳು 29.93 ಗ್ರಾಂ ತೂಕದ ಚಿನ್ನದ ಸರ ಮತ್ತು ಪಾಟ್ ಒಂದರಲ್ಲಿ ಉದುಗಿಸಿಟ್ಟಿದ್ದ ಸುಶೀಲಮ್ಮ ಅವರ ಮಾಂಗಲ್ಯವನ್ನು ವಶಪಡಿಸಿಕೊಂಡಿದ್ದಾರೆ.
ಫೋಟೋ: ಮಹೇಶ್, (29-06-ರಾಮ-ಮಹೇಶ್)
ಗಿರಿಜಾ (29-06-ರಾಮ-ಗಿರಿಜಾ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net