ಹೌದು.... ಕೋತಿಗಳ ಹಾವಳಿಯಿಂದಾಗಿ ಬೀದಿಯಲ್ಲಿ ಓಡಾಡಲು ಭಯ, ಮನೆಯೊಳಗೆ ನಿರಾಳವಾಗಿರಲು ಆತಂಕ. ಇದು ಸದ್ಯ ಇಲ್ಲಿನ ನಿವಾಸಿಗಳ ದೈನಂದಿನ ಕಟುವಾಸ್ತವವಾಗಿದೆ. ಮಕ್ಕಳನ್ನು ಆಟವಾಡಲು ಹೊರಗೆ ಬಿಡಲಾಗದೆ, ಹೆತ್ತವರು ಅವರನ್ನು ಕತ್ತಲ ಕೋಣೆಯೊಳಗೆ ಕೂಡಿಹಾಕುವ ಪರಿಸ್ಥಿತಿ ಎದುರಾಗಿದೆ. ಪಟ್ಟಣದ ಓವರ್ಹೆಡ್ ಟ್ಯಾಂಕ್ ಕಾಮಗಾರಿ ಪೂರ್ಣಗೊಂಡಿಲ. ಈ ಟ್ಯಾಂಕ್ ಬಳಿ ನೂರಾರು ಕೋತಿಗಳು ನೆಲೆಸಿವೆ. ಟ್ಯಾಂಕ್ ಮೇಲಿಂದ ಇಡೀ ಬಡಾವಣೆ ಮೇಲೆ ಕಣ್ಣಿಡುವ ಕೋತಿಗಳ ಹಿಂಡು, ಒಂಟಿಯಾಗಿ ಸಿಗುವ ಸಾರ್ವಜನಿಕರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುತ್ತಿವೆ. ಒಂದಲ್ಲ, ಎರಡಲ್ಲ...ನೂರಾರು ಕೋತಿಗಳು ಏಕಕಾಲಕ್ಕೆ ಜನರ ದಾಳಿ ಮಾಡುತ್ತವೆ.