ಶ್ವಾನಗಳ ಉಪಟಳಕ್ಕೆ ಜನ ಹೈರಾಣ

ಚನ್ನಪಟ್ಟಣ ಕುವೆಂಪುನಗರದ 1ನೇ ಅಡ್ಡರಸ್ತೆಯಲ್ಲಿರುವ ಖಾಸಗಿ ಶಾಲೆ ಮುಂಭಾಗ ಬೀಡುಬಿಟ್ಟಿರುವ ಬೀದಿನಾಯಿಗಳ ಗುಂಪು.
ಚನ್ನಪಟ್ಟಣ ಕುವೆಂಪುನಗರದ 1ನೇ ಅಡ್ಡರಸ್ತೆಯಲ್ಲಿರುವ ಖಾಸಗಿ ಶಾಲೆ ಮುಂಭಾಗ ಬೀಡುಬಿಟ್ಟಿರುವ ಬೀದಿನಾಯಿಗಳ ಗುಂಪು.
Published on

ಚನ್ನಪಟ್ಟಣದಲ್ಲಿ ಮಿತಿ ಮೀರಿದ ಬೀದಿ ನಾಯಿಗಳ ಹಾವಳಿ > ಆತಂಕ ತಂದ ರೋಗಗ್ರಸ್ತ ಡಾಗ್ಸ್​

ಚನ್ನಪಟ್ಟಣ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಅದರಲ್ಲೂ ರೋಗಗ್ರಸ್ತ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಹೌದು... ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಬೀದಿನಾಯಿಗಳ ಉಪಟಳ ಇಂದು, ನಿನ್ನೆಯ ವಿಚಾರವಲ್ಲ. ನಗರಸಭೆ ವ್ಯಾಪ್ತಿ ಸೇರಿ ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಬೀದಿನಾಯಿಗಳ ಸಮಸ್ಯೆ ಸಾಮಾನ್ಯ. ಇವುಗಳ ನಿಯಂತ್ರಣಕ್ಕೆ ಸಂಬಂಧಿಸಿದ ಸ್ಥಳಿಯ ಸಂಸ್ಥೆಗಳು ವಿಫಲವಾಗಿರುವ ಕಾರಣ, ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹೈರಾಣಾಗುವಂತಾಗಿದೆ. ಬೀದಿನಾಯಿಗಳು ರಸ್ತೆಯಲ್ಲಿ ಸಂಚರಿಸುವ ವಾಹನಗಳು ಹಾಗೂ ಪಾದಚಾರಿಗಳ ಮೇಲೆ ಎರಗುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಲವಾರು ವರ್ಷಗಳಿಂದಲೂ ಈ ಸಮಸ್ಯೆಗೆ ಸಂಬಂಧಿಸಿದವರು ಮುಕ್ತಿ ನೀಡದಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಮಾರಣಾಂತಿಕ ದಾಳಿ
ನಗರದ ಮೂಲೆಮೂಲೆಯಲ್ಲೂ ಬೀದಿನಾಯಿಗಳ ಸಂಖ್ಯೆ ಗಣನೀಯವಾಗಿದ್ದು, ಅದರಲ್ಲೂ ರೋಗಗ್ರಸ್ತ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ನಗರವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಜೊಲ್ಲು ಸುರಿಸುವ, ಮೈ ತುಂಬ ಕಜ್ಜಿ ಗಾಯಗಳಾಗಿರುವ ನಾಯಿಗಳನ್ನು ಕಂಡು ಜನ ಭಯದಿಂದ ಸಂಚರಿಸುವಂತಾಗಿದೆ. ನಗರ ಪ್ರದೇಶದ ಹಲವಾರು ಕಡೆ ಬೀದಿನಾಯಿಗಳು ಮಕ್ಕಳು ಸೇರಿ ಸಾರ್ವಜನಿಕರ ಮೇಲೆ ಮಾರಣಾಂತಿಕ ದಾಳಿ ನಡೆಸಿರುವ ಹಲವಾರು ನಿದರ್ಶನಗಳಿವೆ.
ಎಬಿಸಿ ಯಾವಾಗ?
ನಗರ ಪ್ರದೇಶದಲ್ಲಿ 2 ಸಾವಿರಕ್ಕೂ ಅಧಿಕ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಈ ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ನೀಡಿ, ಸುರತವಾಗಿ ಅದೇ ಸ್ಥಳದಲ್ಲಿ ಬಿಡಲು ನಗರಸಭೆಯಿಂದ ಹಲವಾರು ಬಾರಿ ಟೆಂಡರ್​ ಕರೆದರೂ ಯಾರೂ ಟೆಂಡರ್​ನಲ್ಲಿ ಭಾಗವಹಿಸಿರಲಿಲ್ಲ. ಕೊನೆಗೂ ಎಬಿಸಿ ( ಅನಿಮಲ್​ ರ್ಬತ್​ ಕಂಟ್ರೋಲ್​) ಟೆಂಡರ್​ ಪ್ರಕ್ರಿಯೆ ಮುಗಿದಿದ್ದು, ಪಬ್ಲಿಕ್​ ವಾಯ್ಸ್​ ಎಂಬ ಏಜೆನ್ಸಿ ಈ ಟೆಂಡರ್​ ಪಡೆದುಕೊಂಡಿದೆ. ಪ್ರತಿನಾಯಿಯ ಸಂತಾನಶಕ್ತಿ ಹರಣ ಚಿಕಿತ್ಸೆಗೆ 1,670 ರೂ. ನಿಗದಿಯಾಗಿದ್ದು, ಇದರಲ್ಲಿ ಸಂತಾನಶಕ್ತಿ ಹರಣ, ವ್ಯಾಕ್ಸಿನೇಷನ್​, ಜಿಪಿಎಸ್​ ಅಳವಡಿಕೆ, ಚಿಕಿತ್ಸೆ ವೇಳೆ ಉಟೋಪಚಾರ ಸೇರಿದೆ. ಇದರೊಂದಿಗೆ, ಯಾವ ಜಾಗದಲ್ಲಿ ನಾಯಿಯನ್ನು ಸೆರೆ ಹಿಡಿಯುತ್ತಾರೋ ಅದೇ ಸ್ಥಳಕ್ಕೆ ಪುನ@ ಬಿಡುವ ನಿಯಮವೂ ಸಹ ಇದೆ. ಈ ಎಲ್ಲ ಕಾರ್ಯಗಳಿಗೆ ಸೂಕ್ತ ಜಾಗದ ಕೊರತೆ ಸದ್ಯ ಕಾಡುತ್ತಿದೆ.
ಗ್ರಾಮಾಂತರ ಪ್ರದೇಶದಲ್ಲೂ ಬೇಕು ಕಡಿವಾಣ!
ನಗರಸಭೆಯಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಣ ದಿಕ್ಕಿನಲ್ಲಿ ಪ್ರಯತ್ನವಾದರೂ ನಡೆಯುತ್ತಿದೆ. ಆದರೆ, ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಳಿಯ ಗ್ರಾಪಂಗಳು ಇದಕ್ಕೂ, ನಮಗೂ ಸಂಬಂಧವೇ ಇಲ್ಲದಂತೆ ಜಾಣ ಕುರುಡು ಪ್ರದರ್ಶಿಸುತ್ತಿವೆ. ನಗರದಂತೆ ಗ್ರಾಮೀಣ ಪ್ರದೇಶದ ಹಲವಾರು ಕಡೆ ಜನತೆ ನಾಯಿಗಳ ಹಾವಳಿಯಿಂದ ನಲುಗುವಂತಾಗಿದೆ. ವಾಹನಗಳನ್ನು ಹಿಮ್ಮೆಟ್ಟಿಸಿಕೊಂಡು ಬರುವ ಕೆಲ ಬೀದಿಗಳ ನಡಾವಳಿಕೆಯಿಂದ ಅದೆಷ್ಟೋ ಮಂದಿ ಅಪಘಾತಕ್ಕೆ ಈಡಾಗಿದ್ದಾರೆ. ಪ್ರತಿಯೊಂದು ಬೀದಿ ನಾಯಿಯ ಚಿಕಿತ್ಸೆ ಹಾಗೂ ಸಂತಾನ ಶಕ್ತಿ ಹರಣಕ್ಕೆ ಸಾವಿರಾರು ರೂ. ರ್ಖಚಾಗುವುದು ವಾಸ್ತವ. ಈ ವೆಚ್ಚವನ್ನು ಸ್ಥಳಿಯ ಸಂಸ್ಥೆಗಳು ತಮ್ಮ ನಿಧಿಯಿಂದಲೇ ಬಳಸಬೇಕಿದೆ. ಸದ್ಯ ನಗರಸಭೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಉಪಟಳ ಅತಿಯಾದ ಹಿನ್ನೆಲೆಯಲ್ಲಿ ನಗರಸಭೆಯಿಂದ ಎಬಿಸಿಗೆ ಕಾರ್ಯಾದೇಶ ಪ್ರತಿ ನೀಡಿದೆ. ಆದರೆ, ಗ್ರಾಮಾಂತರ ಪ್ರದೇಶದಲ್ಲಿ ಬೀಡುಬಿಟ್ಟಿರುವ ಬೀದಿನಾಯಿಗಳ ನಿಯಂತ್ರಣ ಮಾಡುವವರು ಯಾರು? ಎಂಬುದೇ ಯ ಪ್ರಶ್ನೆಯಾಗಿದೆ.
ಶಾಸಕರೇ, ಗಮನಿಸಿ!
ಅರೇ... ಇದೇನು ಬೀದಿನಾಯಿಗಳ ಸಮಸ್ಯೆಗೂ ಶಾಸಕರು ಗಮನ ನೀಡಬೇಕೇ ಎನ್ನಬಹುದು. ಆದರೆ, ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಬೀದಿನಾಯಿಗಳ ಉಪಟಳದಿಂದ ಜನ ಪರಿತಪಿಸುವಂತಾಗಿರುವ ಹಿನ್ನೆಲೆಯಲ್ಲಿ ಈ ವಿಚಾರದ ಬಗ್ಗೆ ಸ್ಥಳಿಯ ಶಾಸಕ ಸಿ.ಪಿ.ಯೋಗೇಶ್ವರ್​ ಗಮನಹರಿಸಿ, ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡುವ ಅಗತ್ಯವಿದೆ. ಸ್ಥಳಿಯ ಸಂಸ್ಥೆಗಳು ಹಾಗೂ ಸಂಬಂಧಿಸಿದವರು ಬೀದಿನಾಯಿಗಳ ಸಮಸ್ಯೆಯನ್ನು ಲುವಾಗಿ ಪರಿಗಣಿಸಿರುವುದೇ ಸಮಸ್ಯೆಯ ಮೂಲವಾಗುತ್ತಿದ್ದು, ಈ ಸಮಸ್ಯೆ ಪರಿಹಾರಕ್ಕೆ ಶಾಸಕರು ಗಮನ ನೀಡಬೇಕು.
"

ನಗರದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗುತ್ತಿದೆ. ಗುಂಪುಗುಂಪಾಗಿ ಬರುವ ನಾಯಿಗಳು ಮಕ್ಕಳು ಸೇರಿ ದೊಡ್ಡವರ ಮೇಲೆ ಎರಗಿ ಗಾಯಗೊಳಿಸುತ್ತಿವೆ. ರಸ್ತೆಯಲ್ಲಿ ಓಡಾಡುವುದಕ್ಕೆ ಭಯದ ವಾತಾವರಣ ನಿರ್ಮಾಣವಾಗಿದೆ. ಶಾಲಾ&ಕಾಲೇಜುಗಳ ಬಳಿಯೂ ನಾಯಿಗಳ ಗುಂಪು ಹೆಚ್ಚಾಗುತ್ತಿದೆ. ಅದರಲ್ಲೂ ರೋಗಗ್ರಸ್ಥ ನಾಯಿಗಳು ಹೆಚ್ಚಾಗಿ ಕಾಣಿಸುತ್ತಿರುವುದು ಆತಂಕ ತಂದೊಡ್ಡಿದೆ. ನಗರಸಭೆ ಕೂಡಲೇ ಶ್ವಾನಗಳ ಸಂಖ್ಯೆ ಏರಿಕೆಗೆ ಕಡಿವಾಣ ಹಾಕಬೇಕು.

"

ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆಗೆ ಈಗಾಗಲೇ ಸಾಕಷ್ಟು ಬಾರಿ ಟೆಂಡರ್​ ಕರೆಯಲಾಗಿತ್ತು. ಆದರೆ, ಯಾರೂ ಸಹ ಭಾಗವಹಿಸಿರಲಿಲ್ಲ. ಇದೀಗ, ಟೆಂಡರ್​ ಪ್ರಕ್ರಿಯೆ ಮುಗಿದಿದೆ. ಗುತ್ತಿಗೆ ಸಂಸ್ಥೆಗೆ ಕಾರ್ಯಾದೇಶ ಪ್ರತಿ ಸಹ ನೀಡಲಾಗಿದೆ. ಆದಷ್ಟೂ ಬೇಗ ಬೀದಿನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲಾಗುವುದು. ಬೀದಿನಾಯಿಗಳ ಹಾವಳಿ ತಡೆಗಟ್ಟುವುದಕ್ಕೆ ನಗರಸಭೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net