ಬಿಡದಿಗೆ ತೆರಳಲು ಪ್ರಯಾಣಿಕ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಹತ್ತಿದ್ದ. ಆದರೆ, ಬಿಡದಿಗೆ ಬರುವ ವೇಳೆ ಚಾಲಕ ವೇಗ ಹಾಗೂ ಅಜಾಗರೂಕತೆಯಿಂದ ಬಸ್ ಚಾಲನೆ ಮಾಡಿದ ಪರಿಣಾಮ ಪ್ರಯಾಣಿಕ ಬಸ್ ಒಳಗೆ ಬಿದ್ದು, ಮೂಗಿಗೆ ಪೆಟ್ಟು ಮಾಡಿಕೊಂಡಿದ್ದ. ಇದರಿಂದ ಕುಪಿತಗೊಂಡ ಪ್ರಯಾಣಿಕ ಬಸ್ ಬಿಡದಿ ನಿಲ್ದಾಣಕ್ಕೆ ಬರುತ್ತಿದಂತೆ ಕೆಳಗೆ ಇಳಿದು, ಅಲ್ಲೆ ಇದ್ದ ಕಲ್ಲು ಎತ್ತಿ ಬಸ್ನ ಮುಂಬದಿ ಗಾಜಿಗೆ ಹೊಡೆದಿದ್ದಾನೆ. ಅಲ್ಲದೇ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೂ ಗಲಾಟೆ ಮಾಡಿದ್ದಾನೆ.