ಬಿಡದಿ ಆಸ್ಪತ್ರೆ ಹೆರಿಗೆ ವಿಭಾಗಕ್ಕೆ ಆಪರೇಷನ್

ಬಿಡದಿ ಸಮೂದಾಯ ಆರೋಗ್ಯ ಕೇಂದ್ರ
ಬಿಡದಿ ಸಮೂದಾಯ ಆರೋಗ್ಯ ಕೇಂದ್ರ
Published on

ಪ್ರಮುಖ ಮುಖ್ಯಾಂಶಗಳು

  • ಆತಂಕ ತಂದ ಸರ್ಕಾದ ಆದೇಶ
  • ಹೆರಿಗೆಗೂ ಸಂಖ್ಯೆ ನಿಗಧಿ
  • ಕಡಿಮೆ ಆದರೆ ಹುದ್ದೇಗಳೇ ಬಂದ್
ಚೇತನ್ ಚಕ್ಕೆರೆ
ಬಿಡದಿ: ಸರ್ಕಾರದ ಆದೇಶವೊಂದು ಬಿಡದಿ ಸೇರಿದಂತೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಸ್ಥಳೀಯವಾಗಿಯೇ ಮಕ್ಕಳು ಮತ್ತು ಮಹಿಳೆಯರಿಗೆ ದೊರೆಯುತ್ತಿದ್ದ ಆರೋಗ್ಯ ಸೇವೆಯ ಮೇಲೆ ಕರಿ ನೆರಳು ಬೀಳುವಂತೆ ಮಾಡಿದೆ. 
ಹೌದು ಬಿಡದಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಲ್ಲಾ ರೀತಿಯ ರೋಗಗಳಿಗೆ ಚಿಕಿತ್ಸೆ ದೊರೆಯುತಿತ್ತು. ಅದರಲ್ಲೂ ಹೆರಿಗೆ, ಮಕ್ಕಳ ತಜ್ಞ ವೈದ್ಯರ ತಂಡ ಸಕ್ರಿಯವಾಗಿ ಕೆಲಸ ವಾಡುತಿದ್ದರು. ಹೆರಿಗೆ ಪ್ರಮಾಣವನ್ನು ಆಧರಿಸಿ ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು ಹಾಗೂ ಅರಿವಳಿಕೆ ತಜ್ಞರನ್ನ ಮುಂದುವರಿಸುವ ಇಲ್ಲವೇ, ತಾಲೂಕು ಆಸ್ಪತ್ರೆಗೆ ವರ್ಗಾಯಿಸುವ ಆದೇಶವೊಂದು ಹೊರ ಬಿದ್ದಿದೆ. 

ಆದೇಶದಲ್ಲಿ ಏನಿದೆ? 

ಇತ್ತೀಚಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತಾಯಲದಿಂದ ಬಂದ ಆದೇಶವೊಂದರಲ್ಲಿ ಒಂದು ತಿಂಗಳಲ್ಲಿ 30ಕ್ಕಿಂತ ಕಡಿಮೆ ಹೆರಿಗೆ ಆಗುವ ಸಮೂದಾಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸೀ ರೋಗ ತಜ್ಞರು ಮತ್ತು ವೈದ್ಯರು, ಮಕ್ಕಳ ವೈದ್ಯರು ಹಾಗೂ ಅರಿವಳಿಕೆ ನೀಡುವ ವೈದ್ಯರನ್ನ ತಾಲೂಕು ಕೇಂದ್ರದ ಆಸ್ಪತ್ರೆಗೆ ವರ್ಗಾವಣೆ ವಾಡುವ ಬಗ್ಗೆ ಆರೋಗ್ಯ ಇಲಾಖೆಯಲ್ಲಿ ರಾಜ್ಯ ವ್ಯಾಪಿ ಆದೇಶವಾಗಿರುವ ಬಗ್ಗೆ ಮಾಹಿತಿ ಬಂದಿದೆ. 
ಪ್ರಸ್ತುತ ಬಿಡದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಿಂಗಳು ಸರಾಸರಿ 20-25 ರ ವರೆಗೆ ಹೆರಿಗೆಗಳು ನಡೆಯುತ್ತಿವೆ. ಇದೀಗ ಆರೋಗ್ಯ ಇಲಾಖೆಯ ಆದೇಶವೇನಾದರು ಜಾರಿಯಾದರೆ ಬಿಡದಿ ಹೋಬಳಿಯ ಮಕ್ಕಳು, ಗರ್ಭಿಣಿಯರು ರಾಮನಗರದ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಇರಬೇಕಾಗುತ್ತದೆ. 

ಸುಸಜ್ಜಿತ ಕಟ್ಟಡ ನಿರ್ವಾಣ

ಈ ಹಿಂದೆ ಹಳೆಯ ಕಟ್ಟಡದಲ್ಲಿ ಸಮುದಾಯ ಆಸ್ಪತ್ರೆ ಇದ್ದು ಚಿಕಿತ್ಸೆಗಳು ನಡೆಯುತ್ತಿದ್ದವು. ಈ ಹಿಂದೆ ಶಾಸಕರಾಗಿದ್ದ ಎ.ಮಂಜುನಾಥ್ ಟೊಯೋಟಾ ಸಂಸ್ಥೆಯ ಸಿಎಸ್.ಎರ್ ಅಡಿಯಲ್ಲಿ ಸುಸಜ್ಜಿತ ಹಾಗೂ ಹೈಟೆಕ್ ಕಟ್ಟಡ ನಿರ್ವಾಣ ವಾಡಿಸಿದ್ದರು. ಟೊಯೋಟಾ ಸಂಸ್ಥೆಯವರು ಕೇವಲ ಕಟ್ಟಡ ನಿರ್ವಾಣ ವಾಡಿದ್ದಲ್ಲದೆ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನ ಸಹ ನೀಡಿದ್ದರು. 

ಬಿಡದಿ ಭಾಗದ ಜನರಲ್ಲಿ ಆತಂಕ

 ತಮ್ಮ ಮಕ್ಕಳಿಗೆ ಅನಾರೋಗ್ಯವಾದರೆ ಗರ್ಭಿಣಿಯರು ತಿಂಗ ತಿಂಗಳು ತಪಾಸಣೆಗಾಗಿ ತಮ್ಮ ತಮ್ಮ ಗ್ರಾಮಕ್ಕೆ ಹತ್ತಿರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ತಪಾಸಣೆ ವಾಡಿಸಿಕೊಳ್ಳುತ್ತಿದ್ದರು. ಇದೀಗ ಆರೋಗ್ಯ ಇಲಾಖೆಯ ಆದೇಶ ಹೊರ ಬರುತ್ತಿದಂತೆ ಹೆಚ್ಚಾಗಿ ಮಹಿಳೆಯರಲ್ಲಿ ಆತಂಕ ಮನೆ ವಾಡಿದೆ. ದೂರದ ಊರುಗಳಿಂದ ಬಿಡದಿಗೆ ಬಂದು ತಪಾಸಣೆ ಹಾಗೂ ಮಕ್ಕಳನ್ನ ವೈದ್ಯರಿಗೆ ತೋರಿಸಿಕೊಂಡು ಹೋಗುತ್ತಿದ್ದರು. ಒಂದು ವೇಳೆ ಆರೋಗ್ಯ ಇಲಾಖೆಯ ಆದೇಶವೇನಾದರು ಜಾರಿಯಾದರೆ ದೂರದ ರಾಮನಗರಕ್ಕೆ ಹೊತ್ತಿಲ್ಲದ ಹೊತ್ತಿನಲ್ಲಿ ಗರ್ಭಿಣಿಯರನ್ನ , ಮಕ್ಕಳನ್ನ ಕರೆದುಕೊಂಡು ಹೋಗಬೇಕಲ್ಲ ಎನ್ನುವ ಆತಂಕ ಆವರಿಸಿದೆ.
ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚು: ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರವಾಗಿ ಅತ್ಯಾಧುನಿಕ ಸಲಕರಣೆಗಳು ಆಸ್ಪತ್ರೆಯಲ್ಲಿರುವ ಕಾರಣ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಹೇಳಿ ಕೇಳಿ ಬಿಡದಿ ಕೈಗಾರಿಕಾ ಪ್ರದೇಶ ವಿಸ್ತಾರವಾಗುತ್ತಿದೆ. ಕೂಲಿ ಕೆಲಸಗಳನ್ನ ಅರಸಿಕೊಂಡು ಹೊರ ರಾಜ್ಯದಿಂದ ಕೂಲಿ ಕಾರ್ಮಿಕರು ಸಹ ಬರುತ್ತಿದ್ದಾರೆ. ಇವರಿಗೇನಾದರು ಆರೋಗ್ಯ ಸಮಸ್ಯೆಯಾದರೆ ದಿಢೀರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದಾರೆ. ಇದರ ಜೊತೆಗೆ ಬಿಡದಿ ಅಕ್ಕಪಕ್ಕದ ಜನರು ಸಹ ಹೆಚ್ಚಾಗಿ ಇದೇ ಆಸ್ಪತ್ರೆಗೆ ಬರುತ್ತಿದ್ದಾರೆ.
ವೈದ್ಯರ ಉಳಿವಿಗಾಗಿ ಹೋರಾಟ: ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಆದೇಶ ವಾಗುತ್ತಿದಂತೆ ಸವಾಜಿಕ ಹೋರಾಟಗಾರು ಬಿಡದಿಯ ಸಮುದಾಯ ಆರೋಗ್ಯ ಕೇಂದ್ರದಲ್ಲೆ ಸ್ತ್ರೀ ರೋಗ ವೈದ್ಯರು, ಮಕ್ಕಳ ವೈದ್ಯರು ಹಾಗೂ ಅರಿವಳಿಕೆ ವೈದ್ಯರನ್ನ ಉಳಿಸಿಕೊಳ್ಳವ ಬಗ್ಗೆ ಹೋರಾಟಕ್ಕೆ ಇಳಿದಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರಿಗೆ , ಸಂಸದರಿಗೆ ಹಾಗೂ ಸಂಬಂಧಿಸಿದ ಆರೋಗ್ಯ ಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ. ವೈದ್ಯರನ್ನ ಸ್ಥಳಾಂತರ ವಾಡುವುದರಿಂದ ಉಂಟಾಗುವ ದುಫ್ಪಿರಿಣಾಮಗಳ ಬಗ್ಗೆ ಪತ್ರದಲ್ಲಿ ಉಲ್ಲೇಖ ವಾಡಿದ್ದಾರೆ.

 ಆದೇಶಕ್ಕೆ ತಾತ್ಕಾಲಿಕ ತಡೆ?

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಳೆದ ಒಂದು ವಾರದ ಹಿಂದೆ 30 ಕ್ಕಿಂತ ಕಡಿಮೆ ಹೆರಿಗೆ ಹೋಗುತ್ತಿರು ಆಸ್ಪತ್ರೆಗಳ ಮೂರು ಮಂದಿ ವೈದ್ಯರನ್ನ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರ ವಾಡುವ ಆದೇಶ ವಾಗಿತ್ತು. ಇದೀಗ ಈ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಆದೇಶದಲ್ಲಿ ಕೆಲ ತಾಂತ್ರಿಕ ದೋಷ ಇದೆ ಎನ್ನುವ ಕಾರಣ ಹೇಳಿ ತಡೆ ಹಿಡಿಯಲಾಗಿದೆ ಎನ್ನಲಾಗಿದೆ. 
"

ಬಿಡದಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆ ಸಿಗುತಿತ್ತು. ಬಿಡದಿ ಸುತ್ತಮುತ್ತಲಿನ ಗ್ರಾಮಗಳ ರೈತರ ಹೆಣ್ಣು ಮಕ್ಕಳು ಹೆರಿಗೆ ವಾಡಿಸಿಕೊಳ್ಳಲು ಸಮುದಾಯ ಆರೋಗ್ಯ ಕೇಂದ್ರ ಉಪಯುಕ್ತವಾಗಿದೆ. ಬಿಡದಿ ಅಕ್ಕ ಪಕ್ಕದ ಗ್ರಾಮದವರು ಈ ಆಸ್ಪತ್ರೆಗೆ ಬಂದು ಹೋಗಲು ಅನುಕೂಲವಿತ್ತು. ಹೆರಿಗೆ ಹಚ್ಚಾಗುತ್ತಿಲ್ಲ ಎಂದು ನೆಪ ಹೇಳಿ ಮೂವರು ವೈದ್ಯರನ್ನ ವರ್ಗಾವಣೆ ವಾಡಲು ಮುಂದಾಗಿದೆ. ಇದರ ವಿರುದ್ಧ ನಾವು ಹೋರಾಟ ಪ್ರಾರಂಭಿಸಿದ್ದೇವೆ. ಶಾಸಕರಿಗೆ, ಸಂಸದರಿಗೆ ಆರೋಗ್ಯ ಮಂತ್ರಿಗಳಿಗೆ ಪತ್ರ ಬರೆದು ಸ್ಥಳಾಂತರ ವಾಡದಂತೆ ಮನವಿ ವಾಡಿದ್ದೇವೆ. 

 ರಾಜಶೇಖರ್, ರಾಜ್ಯ ಸಮಾಜಿಕ ಕಾರ್ಯಕರ್ತರ ಒಕ್ಕೂಟದ ಜಿಲ್ಲಾಧ್ಯಕ್ಷ

"

ಬಿಡದಿ ಪಟ್ಟಣ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಹೊರ ರಾಜ್ಯಗಳಿಂದ ಕೂಲಿಗಾಗಿ ಇಡೀ ಕುಟುಂಬಗಳೆ ಬಿಡದಿಗೆ ಬಂದು ವಾಸ ವಾಡುತ್ತಿದ್ದಾರೆ. ಇದರ ಜೊತೆಗೆ ನಮ್ಮ ಬಿಡದಿ ಅಕ್ಕಪಕ್ಕದ ಗ್ರಾಮದ ಗರ್ಭಿಣಿ ಮಹಿಳೆಯರು ಹೆಚ್ಚಾಗಿ ಬರುತ್ತಿದ್ದಾರೆ. ಇದೀಗ ಸರ್ಕಾರ ಇಲ್ಲಿನ ಹೆರಿಗೆ ವೈದ್ಯರು, ಮಕ್ಕಳ ವೈದ್ಯರನ್ನ ರಾಮನಗರಕ್ಕೆ ಸ್ಥಳಾಂತರ ವಾಡಿದರೆ ಮಹಿಳೆಯರಿಗೆ ಸಮಸ್ಯೆ ಯಾಗುತ್ತದೆ. ಕೂಡಲೇ ಜನವಿರೋಧಿ ಸರ್ಕಾರದ ಈ ಆದೇಶ ಬದಲಾಗಬೇಕಿದೆ. 

 ಮುತ್ತಣ್ಣ, ಸಮಾಜಿಕ ಹೋರಾಟಗಾರ ಬಿಡದಿ

ನಾಲ್ಕು ಆಸ್ಪತ್ರೆಗಳಿಗೆ ಆತಂಕ 

ಜಿಲ್ಲೆಯಲ್ಲಿ ಬಿಡದಿಯ ಜತೆಗೆ, ಸೋಲೂರು, ಹಾರೋಹಳ್ಳಿ ಮತ್ತು ಸಾತನೂರುಗಳಲ್ಲಿ ಸಮೂದಾಯ ಆರೋಗ್ಯ ಕೇಂದ್ರಗಳು ಇವೆ. ಇಲ್ಲಿ ಪ್ರತಿ ತಿಂಗಳು ಸರಾಸರಿ 20-25 ಹೆರಿಗೆಗಳು ನಡೆಯುತ್ತಿವೆ ಎನ್ನುವ ಮಾಹಿತಿ ಇದೆ. ಇಲಾಖೆ ಆದೇಶದಂತೆ ಈ ಆಸ್ಪತ್ರೆಗಳಲ್ಲಿ ಮಹಿಳೆ, ಮಕ್ಕಳು ಮತ್ತು ಅರೆವಳಿಕೆ ತಜ್ಞರು ತಾಲೂಕು ಆಸ್ಪತ್ರೆಗಳಿಗೆ ವರ್ಗಾವಣೆಗೊಳ್ಳಬೇಕಿದೆ. 
ಆದರೆ, ಹಾರೋಹಳ್ಳಿ ತಾಲೂಕು ಕೇಂದ್ರವಾಗಿರುವ ಕಾರಣ, ಈ ಆಸ್ಪತ್ರೆ ತಾಲೂಕು ಆಸ್ಪತ್ರೆ ಆಗಿ ಮೇಲ್ದರ್ಜೆಗೆ ಏರುವ ಸಾಧ್ಯತೆ ಇರುವ ಕಾರಣ, ಸರ್ಕಾರದ ಆದೇಶದಿಂದ ಇದು ತಪ್ಪಿಸಿಕೊಳ್ಳಲಿದೆ.ಉಳಿದಂತೆ ಮೂರು ಆಸ್ಪತ್ರೆಗಳ ವೈಧ್ಯರು ವರ್ಗಾವಣೆಗೊಳ್ಳುವುದು ಬಹುತೇಕ ಖಚಿತ. 
"

ನಿಗಧಿತ ಸಂಖ್ಯೆಗಿಂತ ಕಡಿಮೆ ಹೆರಿಗೆ ಆಗುವ ಸಮೂದಾಯ ಆರೋಗ್ಯ ಕೇಂದ್ರ ಮಹಿಳೆ, ಮಕ್ಕಳು ಮತ್ತು ಅರವಳಿಗೆ ತಜ್ಞರನ್ನು ತಾಲೂಕು ಆಸ್ಪತ್ರೆಗಳಿಗೆ ವರ್ಗಾವಣೆ ಮಾಡುವ ಆದೇಶ ಇಲಾಖೆಯಿಂದ ಬಂದಿದೆ. ಆದರೆ ಸದ್ಯಕ್ಕೆ ಇದನ್ನು ತಡೆಹಿಡಿಯಲಾಗಿದೆ. 

 ಡಾ.ಬಿ.ಎಸ್.ನಿರಂಜನ್, ಡಿಎಚ್‌ಓ, ಬೆಂಗಳೂರು ದಕ್ಷಿಣ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net