ಶತಮಾನದ ಶಾಲೆಯ ನೂರೆಂಟು ನೆನಪು!

ಶತಮಾನದಷ್ಟುಹಳೆ ಕುದೂರು ಶಾಲೆ
ಶತಮಾನದಷ್ಟುಹಳೆ ಕುದೂರು ಶಾಲೆ
Published on

ಪ್ರಮುಖ ಮುಖ್ಯಾಂಶಗಳು

  • ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕಿನ ದಾರಿ ತೋರಿದ ಶತಮಾನದ ಶಾಲೆಗೆ ಬೀಗ
  • ಅಕ್ಷರ ಕಲಿಸಿದ ಅಂಗಳವಿಂದು ಅನಾಥ
  • ಮಕ್ಕಳ ಕಲರವವಿಲ್ಲದೆ ಮೌನವಾಗಿರುವ ಶಾಲಾ ಕಟ್ಟಡ

ಕುದೂರು

ನನ್ನ ಅಂಗಳದಲ್ಲಿ ಒಮ್ಮೆ ಮಕ್ಕಳ ಕಲರವ ಮೊಳಗುತ್ತಿತ್ತು. ಚಿಣ್ಣರ ನಗು, ಶಿಕ್ಷಕರ ಪಾಠ, ಪ್ರಾರ್ಥನೆಯ ಧ್ವನಿ, ಪರೀಕ್ಷೆಯ ಆತಂಕ, ಗೆಲುವಿನ ಸಂಭ್ರಮ... ಇವೆಲ್ಲವೂ ನನ್ನ ದಿನನಿತ್ಯದ ಬದುಕಾಗಿತ್ತು. ಆದರೆ, ಇಂದು ನನ್ನ ಬಾಗಿಲಿಗೆ ಬೀಗ ಬಿದ್ದಿದೆ. ನನ್ನನ್ನು ನೆಚ್ಚಿಕೊಂಡು ಬಂದಿದ್ದ

ಮಕ್ಕಳ ಹೆಜ್ಜೆಗುರುತುಗಳೇ ಕಾಣುತ್ತಿಲ್ಲ. ನೂರಾರು ವರ್ಷಗಳ ನನ್ನ ನೆನಪುಗಳೊಂದಿಗೆ ನಾನು ಒಂಟಿಯಾಗಿ ನಿಂತಿದ್ದೇನೆ.

ಹೌದು... ಇದು ಯಾವುದೋ ವ್ಯಕ್ತಿಯ ವ್ಯಥೆಯಲ್ಲ. ತಲೆಮಾರುಗಳ ಬದುಕಿಗೆ ಅಕ್ಷರದ ಬೆಳಕು ನೀಡಿದ ಶತಮಾನ ಪೂರೈಸಿದ ಕುದೂರು ಕೆಪಿಎಸ್ ಹಳೆ ಶಾಲೆಯ ಮೂಕವೇದನೆ. ಕಟ್ಟಡ ಸುಸಜ್ಜಿತವಾಗಿಯೇ ಇರುವ

`ಒಂದು ಕಾಲದಲ್ಲಿ ಶಾಲೆಯ ಅಂಗಳಕ್ಕೆ ಕಾಲಿಟ್ಟರೆ ಸಾಕು, ಮಕ್ಕಳ ಕಲರವ ಕಿವಿಗೆ ಬೀಳುತ್ತಿತ್ತು. ಕೊಠಡಿಗಳಲ್ಲಿ ಶಿಕ್ಷಕರ ಪಾಠದ ಧ್ವನಿ ಮೊಳಗುತ್ತಿತ್ತು. ಕಪ್ಪು ಹಲಗೆ ಮೇಲೆ ಮೂಡುತ್ತಿದ್ದ ಅಕ್ಷರಗಳು, ವಿದ್ಯಾರ್ಥಿಗಳ ವಿವಿಧ ಚಟುವಟಿಕೆಗಳು ಶಾಲೆಯ ಜೀವಂತಿಕೆಗೆ ಸಾಕ್ಷಿಯಾಗಿದ್ದವು. ನನ್ನ ಆವರಣದಲ್ಲಿ ಓಡಾಡಿದ ಮಕ್ಕಳು ಬೆಳೆದು ದೊಡ್ಡವರಾಗಿ ವಿವಿಧ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಕೆಲವರು ತಮ್ಮ ಮಕ್ಕಳನ್ನೂ ನನ್ನ ಬಳಿಗೆ ಕರೆತಂದರು. ಒಂದೇ ಕುಟುಂಬದ ಎರಡು-ಮೂರು ತಲೆಮಾರುಗಳಿಗೆ ನಾನು ಅಕ್ಷರ ಕಲಿಸಿದ್ದೇನೆ. ಅವರ ಬಾಲ್ಯದ ನೆನಪುಗಳಲ್ಲಿ ನಾನು ಇದ್ದೇನೆ ಆದರೆ, ಇಂದು ನನ್ನ ಅಂಗಳದಲ್ಲಿ ಮಕ್ಕಳಿಲ್ಲ. ತರಗತಿಗಳಲ್ಲಿ ಪಾಠವಿಲ್ಲ. ಗಂಟೆಯ ಸದ್ದು ಇಲ್ಲ. ಬಾಗಿಲು ತೆರೆದು ಒಳಗೆ ಬರುವ ಶಿಕ್ಷಕರ ಹೆಜ್ಜೆಯೂ ಇಲ್ಲ ಎಂಬ ನೋವು ಶಾಲೆಯ ಪ್ರತಿ ಗೋಡೆಯಲ್ಲೂ ಮೂಡಿದಂತಿದೆ.

ನನ್ನ ಬಾಗಿಲು ಮುಚ್ಚಿದಾಗ ಕೇವಲ ಒಂದು ಕಟ್ಟಡದ ಬಾಗಿಲು ಮುಚ್ಚಲಿಲ್ಲ. ಅನೇಕ ನೆನಪುಗಳ ಬಾಗಿಲು ಮುಚ್ಚಿತು.

ನಿಜ, ನಾನು ಪೀಳಿಗೆಗಳನ್ನು ಬೆಳೆಸಿದ ಅಕ್ಷರದ ದೇಗುಲವಾಗಿದ್ದೆ. ಶಾಲೆ ಎಂದರೆ ಕೇವಲ ಕಟ್ಟಡವಲ್ಲ. ಅದು ಮಕ್ಕಳ ಕನಸುಗಳಿಗೆ ರೂಪ ನೀಡುವ ದೇಗುಲ ಎಂಬುದನ್ನು ಸಾಬೀತು ಮಾಡಿದ್ದೆ. ಒಮ್ಮೆ ಮಕ್ಕಳಿಂದ ತುಂಬಿ ತುಳುಕುತ್ತಿದ್ದ ತರಗತಿಗಳು ಇಂದು ಮೌನವಾಗಿವೆ. ನನ್ನ ಅಂಗಳದಲ್ಲಿ ಮತ್ತೆ ಮಕ್ಕಳ ಹೆಜ್ಜೆಗಳು ಮೂಡಬೇಕು. ಪ್ರಾರ್ಥನೆಯ ಧ್ವನಿ ಕೇಳಬೇಕು. ಶಿಕ್ಷಕರ ಪಾಠ ಮೊಳಗಬೇಕು. ಮಕ್ಕಳ ನಗುವಿನಿಂದ ನನ್ನ ಗೋಡೆಗಳು ಮತ್ತೆ ಜೀವಂತವಾಗಬೇಕು...'

-ಇದು ಈ ಶಾಲೆಯ ಮೂಕ ರೋದನ. ಮೌನ ಮನವಿ.

ಮಕ್ಕಳ ಕಲರವ ಕೇಳಲಿ

ಶತಮಾನದ ಇತಿಹಾಸ ಹೊಂದಿರುವ, ಸಾವಿರಾರು ವಿದ್ಯಾರ್ಥಿಗಳಿಗೆ ಅP್ಷÀರ ದಾನ ಮಾಡಿದ ಇಂತಹ ಶಾಲೆಗೆ ಬೀಗಹಾಕುವುದೆಂದರೆ ಅದು ಬಾಗಿಲಿಗೆ ಬಿದ್ದ ಬೀಗವಲ್ಲ, ತಲೆಮಾರುಗಳ ನೆನಪುಗಳಿಗೆ ಬಿದ್ದ ಬೀಗ. ಹೊಸ ಕಟ್ಟಡದ ನೆಪವೊಡ್ಡಿ ಪಾಳು ಬೀಳದಂತೆ ಬಿಡದೆ, ಶಾಲೆಯನ್ನು ಪುನಶ್ಚೇತನಗೊಳಿಸಿ ಶಾಲೆ ಅಂಗಳದಲ್ಲಿ ಮತ್ತೊಮ್ಮೆ ಮಕ್ಕಳ ಕಲರವ ಕೇಳುವಂತೆ ಮಾಡುವ ಅಗತ್ಯವಿದೆ. ಮಕ್ಕಳ ಚಟುವಟಿಕೆಯ ಕೇಂದ್ರವಾಗಿಯಾದರೂ ಈ ಶಾಲೆಯನ್ನು ರೂಪಿಸುವ ಅಗತ್ಯವಿದೆ ಎಂಬುದು ಹಳೆಯ ವಿದ್ಯಾರ್ಥಿಗಳು, ಪಾಲಕರು, ನಿವೃತ್ತ ಶಿP್ಷÀಕರು ಹಾಗೂ ಗ್ರಾಮಸ್ಥರ ಒಕ್ಕೊರಲಿನ ಆಶಯ.

ಕುದೂರಿನ ಕೆಪಿಎಸ್ ಶಾಲೆಯ ಹಳೆಯ ಕಟ್ಟಡದಲ್ಲಿ 20ಕ್ಕೂ ಹೆಚ್ಚು ಕೊಠಡಿಗಳು ಪಾಳು ಬೀಳುತ್ತಿರುವ ವಿಷಯ ಗಮನಕ್ಕೆ ಬಂದಿದೆ. ತಕ್ಷಣವೇ ಕ್ಷೇತ್ರ ಶಿಕ್ಷಣಾಧಿಕಾರಿ ಜತೆ ಚರ್ಚಿಸಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

| ಸ್ವಾಮಿ, ಡಿಡಿಪಿಐ, ಬೆಂಗಳೂರು ದಕ್ಷಿಣ ಜಿಲ್ಲೆ.

====

ಶತಮಾನ ಪೂರೈಸಿದ ಈ ಶಿಕ್ಷಣ ಸಂಸ್ಥೆಯ ಐತಿಹಾಸಿಕ ಕಟ್ಟಡವನ್ನು ಹಾಳಾಗಲು ಬಿಡಬಾರದು. ಶಿಕ್ಷಣ ಇಲಾಖೆಯು ತಕ್ಷಣವೇ ಗಮನಹರಿಸಿ ಕಟ್ಟಡವನ್ನು ರಕ್ಷಿಸಿ, ಮತ್ತೆ ಮಕ್ಕಳ ಕಲರವ ಮೊಳಗುವಂತೆ ಕ್ರಮ ಕೈಗೊಳ್ಳಬೇಕು.

| ಪದ್ಮನಾಭ, ಸ್ಥಳೀಯ ನಾಗರಿಕ, ಕುದೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net