ಶುಕ್ರುವಾರ ಸಂಜೆ ಕಲ್ಲಹಳ್ಳಿ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದ ಉಪಲೋಕಾಯುಕ್ತರು, ಪಂಚಾಯಿತಿ ಸುತ್ತಮುತ್ತಲಿನ ಅನಧಿಕೃತ ಕಟ್ಟಡ ಮತ್ತು ಅಕ್ರಮ ಬಡಾವಣೆಗಳಿಗೆ ಕಡಿವಾಣ ಹಾಕಲು ವಿಫಲವಾಗಿರುವುದು, ತೆರಿಗೆ ವಸೂಲಿ, ದಾಖಲೆ ನಿರ್ವಹಣೆಯಲ್ಲಿನ ರ್ನಿಲಕ್ಷ$್ಯ ಕಂಡು, ತೆರಿಗೆ ವಸೂಲಿ ಹಾಗೂ ಫಲಾನುಭವಿಗಳಿಗೆ ನೀಡಿರುವ ಸವಲತ್ತುಗಳ ಬಗ್ಗೆ ಉತ್ತರವಿಲ್ಲ, ಗ್ರಾಪಂ ವ್ಯಾಪ್ತಿಯಲ್ಲಿ 3 ಅನಧಿಕೃತ ಕಟ್ಟಡಗಳು, ಅಕ್ರಮ ಬಡಾವಣೆಗಳು ತಲೆ ಎತ್ತಿವೆ ಎನ್ನುತ್ತಿರಿ, ಹಾಗಾದರೆ ಅವುಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ? ನಿಮ್ಮ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸುತ್ತೇವೆ ಎಂದು ಪಿಡಿಒ ಮುನಿಮಾರೇಗೌಡಗೆ ತರಾಟೆಗೆ ತೆಗೆದುಕೊಂಡರು. ಆಗ ನೋಟಿಸ್ ನೀಡಿದ್ದೇವೆ, ಪೊಲೀಸರಿಗೆ ದೂರು ನೀಡುತ್ತೇವೆ ಎಂಬ ಪಿಡಿಒ ಉತ್ತರಕ್ಕೆ ಸಿಡಿಮಿಡಿಗೊಂಡ ನ್ಯಾಯಮೂರ್ತಿಗಳು ನೀವು ಪಂಚಾಯತ್ ರಾಜ್ ಕಾಯ್ದೆಯನ್ನು ಸರಿಯಾಗಿ ಓದಿಕೊಂಡಿಲ್ಲ, ಕಚೇರಿಯಲ್ಲಿ ಕಳೆದ 6 ತಿಂಗಳಿನಿಂದ ಬ್ಯಾಂಕ್ ವಹಿವಾಟಿನ ಸಮರ್ಪಕ ಮಾಹಿತಿ ಇಲ್ಲ, ತೆರಿಗೆ ವಸೂಲಿ, ಖರ್ಚು&ವೆಚ್ಚ, ಬರಬೇಕಾದ ಆದಾಯದ ವಿವರ ಸಮರ್ಪಕವಾಗಿಲ್ಲ. 30 ಲಕ್ಷ ರೂ. ಬಾಕಿ ಬರಬೇಕೆಂದು ದಾಖಲೆ ತೋರಿಸಿದ್ದೀರಿ, ಇದನ್ನು ವಸೂಲಿ ಮಾಡುವವರು ಯಾರು? ನಿಮಗೆ ಸಂಬಳ ಕೊಡುವುದು ಹೇಗೆ? ಸರ್ಕಾರ ನಡೆಸುವುದು ಹೇಗೆ? ನಿಮ್ಮ ವಿರುದ್ಧ ಮೊಕದಮ್ಮೆ ದಾಖಲಿಸಿ ತನಿಖೆನಡೆಸಿ, ಕ್ರಮಕೈಗೊಳ್ಳುತ್ತೇವೆ. ಜಿಪಂ ಸಿಇಒ ಹಾಗೂ ತಾಪಂ ಇಒ ಇಬ್ಬರೂ ಇದೊಂದು ಉತ್ತಮ ಪಂಚಾಯಿತಿ ಎಂದುಕೊಂಡು ಕರೆತಂದರು, ಆದರೆ ಇಲ್ಲಿ ಅಕ್ರಮವಾಗಿ ಲೇಔಟ್ಗಳು ನಿರ್ಮಾಣಗೊಂಡಿವೆ. ದಾಖಲಾತಿ ನಿರ್ವಹಣೆಯೂ ಸಮರ್ಪಕವಾಗಿಲ್ಲ. ಇದೊಂದೇ ಪಂಚಾಯಿತಿಯಲ್ಲಿ ಹೀಗಾದರೆ ಉಳಿದ ಪಂಚಾಯಿತಿಗಳ ಕಥೆ ಏನು? ಹತ್ತಾರು ಅಕ್ರಮಗಳು ನಡೆದಿರುವ ಸಂಶಯವಿದ್ದು, ಲೋಕಾಯುಕ್ತರಿಂದ ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ನೀಡುವುದಾಗಿ ಉಪಲೋಕಾಯುಕ್ತರು ಎಚ್ಚರಿಸಿದರು.