ರಾಷ್ಟ್ರೀಯ ಹೆದ್ದಾರಿ&75 ಸಾವಿನ ರಹದಾರಿ

ಕುದೂರು ಹೋಬಳಿಯ ಮರೂರು ಹ್ಯಾಂಡ್​ ಪೋಸ್ಟ್​ ಬಳಿ ಹೆದ್ದಾರಿ ಬದಿಯಲ್ಲಿಯೇ ವ್ಯಾಪಾರ ಮಾಡುತ್ತಿರುವುದು.
ಕುದೂರು ಹೋಬಳಿಯ ಮರೂರು ಹ್ಯಾಂಡ್​ ಪೋಸ್ಟ್​ ಬಳಿ ಹೆದ್ದಾರಿ ಬದಿಯಲ್ಲಿಯೇ ವ್ಯಾಪಾರ ಮಾಡುತ್ತಿರುವುದು.
Published on
ಕುದೂರು: ಇಲ್ಲಿನ ಬೆಂಗಳೂರು&ಮಂಗಳೂರು ರಾಷ್ಟ್ರೀಯ ಹೆದ್ದಾರಿಯ 30 ಕಿ.ಮೀ. ವ್ಯಾಪ್ತಿಯಲ್ಲಿ ನಾಲ್ಕು ತಿಂಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 24 ಮಂದಿ ಮೃತಪಟ್ಟಿದ್ದು, 62ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡು, ಶಾಶ್ವತ ಅಂಗವಿಕಲರಾಗಿದ್ದಾರೆ. ಮಾರ್ಗವು ದಿನೇದಿನೆ ಸಾವಿನ ರಹದಾರಿಯಾಗಿ ಮಾರ್ಪಡುತ್ತಿದೆ.
ಹೌದು... ರಾಷ್ಟ್ರೀಯ ಹೆದ್ದಾರಿ&75ಯ ಕುದೂರು ಠಾಣೆ ವ್ಯಾಪ್ತಿಯಲ್ಲಿ(30 ಕಿ.ಮೀ.) ವರ್ಷದ ಆರಂಭದಿಂದ ಈವರೆಗೆ 25ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಹೆಚ್ಚಾಗಿ ಹದಿಹರೆಯದವರೇ ಉಸಿರು ಚೆಲ್ಲಿದ್ದಾರೆ. ಇತ್ತೀಚೆಗೆ ಮರೂರು ಹ್ಯಾಂಡ್​ ಪೋಸ್ಟ್​ ಬಳಿಯ ಭೀಕರ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದರು.
ಸವಾರರಿಗೂ ಪ್ರಜ್ಞೆ ಬೇಕು...
ಮಾಗಡಿ ಉಪ ವಿಭಾಗದ ಡಿವೈಎಸ್ಪಿ ರವಿ ನಿರ್ದೇಶನಲ್ಲಿ ಹೆದ್ದಾರಿಯ ಅಪಘಾತ ವಲಯ ಗುರುತಿಸಿ, ವಾಹನಗಳ ವೇಗ ನಿಯಂತ್ರಣಕ್ಕಾಗಿ ಬ್ಯಾರೆಲ್​ಗಳನ್ನು ಜಿಗ್​ಜಾಗ್​ ಮಾದರಿಯಲ್ಲಿ ಅಳವಡಿಸಲಾಗಿದೆ. ಇದರೊಂದಿಗೆ ಹಲವು ಸಂಚಾರ ಸುರಾ ಕ್ರಮಗ ಕೈಗೊಳ್ಳಲಾಗಿದೆ. ಆದರೂ ಅಪಘಾತಗಳು ಸಂಭವಿಸುತ್ತಿದ್ದು, ಆತಂಕ ಮೂಡಿಸಿದೆ. ಚಾಲಕರಲ್ಲಿ ಸ್ವಯಂ ಶಿಸ್ತು ಮತ್ತು ಸುರತಾ ಪ್ರೆ ಇಲ್ಲದಿರುವುದೂ ಅಪಘಾತಗಳಿಗೆ ಕಾರಣ ಎಂಬ ಆರೋಪವೂ ಇದೆ.
ಹೆದ್ದಾರಿ ಬದಿಯೇ ವ್ಯಾಪಾರ
ಮರೂರು ಹ್ಯಾಂಡ್​ ಪೋಸ್ಟ್​ ಬಳಿ ಬೆಂಗಳೂರು ಕಡೆಗೆ ತೆರಳುವ ಹೆದ್ದಾರಿ ಬದಿಯಲ್ಲೆ ಕೆಲ ವ್ಯಾಪಾರಿಗಳು ಟೆಂಟ್​ ಹಾಕಿಕೊಂಡು ಕಡಿಮೆ ಬೆಲೆಗೆ ತರಕಾರಿ, ಹಣ್ಣು ಮಾರುವುದರಿಂದ ವಾಹನ ಸವಾರರು ಹೆದ್ದಾರಿ ಬದಿಯಲ್ಲಿಯೇ ವಾಹನ ನಿಲ್ಲಿಸಿ ಖರೀದಿಗಿಳಿಯುತ್ತಾರೆ. ಇದರಿಂದ ಅಪಘಾತಗಳ ಸಂಭವ ಹೆಚ್ಚುತ್ತಿದ್ದು, ಸ್ಥಳಿಯ ಆಡಳಿತ ವ್ಯಾಪಾರಕ್ಕಾಗಿಯೇ ಪ್ರತ್ಯೇಕ ಜಾಗ ನಿಗದಿಪಡಿಸಬೇಕಿದೆ.
ಜಂನ್​ಗಳಲ್ಲಿ ಸುರತಾ ಕ್ರಮಕೈಗೊಳ್ಳಿ
ಅಪಘಾತಗಳ ಹಾಟ್​ ಸ್ಪಾಟ್​ ಆಗಿರುವ ಮರೂರು ಹ್ಯಾಂಡ್​ ಪೋಸ್ಟ್​ ಬಳಿ ಬಾಗೇಪಲ್ಲಿ&ಹಲಗೂರು (ಎಸ್​ಎಚ್​&94), ಗುಡೇಮಾರನಹಳ್ಳಿ ಹ್ಯಾಂಡ್​ ಪೋಸ್ಟ್​ ಬಳಿ ಮಾಗಡಿ&ದಾಬಸ್​ಪೇಟೆ (ಎಸ್​ಎಚ್​&3), ತಾಳೇಕೆರೆ ಹ್ಯಾಂಡ್​ ಪೋಸ್ಟ್​ ಬಳಿಯ ಮಾಗಡಿ&ಬೆಂಗಳೂರು ಹೆದ್ದಾರಿ ಹಾದುಹೋಗಿದ್ದು, ಈ ಜಂನ್​ಗಳಲ್ಲಿ ಟ್ರಾಫಿಕ್​ ಸಿಗ್ನಲ್​, ಹಂಪ್ಸ್​ ಸೇರಿ ಇತರ ಸುರತಾ ಕ್ರಮ ಕೈಗೊಳ್ಳಬೇಕಿದೆ. ಹೆದ್ದಾರಿಗಳಲ್ಲಿ ಸಂಚಾರ ಸಿಕ್ಕು ಆದರೆ ವಾಹನಗಳು ಸರ್ವೀಸ್​ ರಸ್ತೆಗಿಳಿಯುವುದರಿಂದ ಪಾದಚಾರಿಗಳು ಹಾಗೂ ಇತರ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ ಎಂಬುದು ಸ್ಥಳಿಯರ ವಾದ.
ಕುತ್ತು ತರುವ ಜಾಲಿರೈಡ್​
ಹೆದ್ದಾರಿಗಳಲ್ಲಿ ರಾತ್ರಿ ಲಾರಿ, ಸ್ಲೀಪರ್​ ಬಸ್​ಗಳು ಹೆಚ್ಚಾಗಿ ಸಂಚರಿಸುವುದರಿಂದ ಈ ವೇಳೆ ಬೈಕ್​ ಸವಾರಿ ಒಳಿತಲ್ಲ ಎಂಬುದು ಪೊಲೀಸರ ಮಾತು. ಆದರೂ ಕೆಲ ಯುವಕರು ಮದ್ಯ ಸೇವಿಸಿ, ಹೆಲ್ಮೆಟ್​ ಧರಿಸದೆ ಜಾಲಿ ರೈಡ್​ ಹೋಗಿ ಸಾವಿನ ದವಡೆಗೆ ಸಿಲುಕುತ್ತಿದ್ದಾರೆ ಎಂದು ಸ್ವತ@ ಪೊಲೀಸ್​ ಅಧಿಕಾರಿಗಳೇ ಬೇಸರ ವ್ಯಕ್ತಪಡಿಸುತ್ತಾರೆ.
ರೂಲ್ಸ್​ ಅನ್ವಯಿಸಲ್ಲ!
ರಾಷ್ಟ್ರೀಯ ಅಥವಾ ರಾಜ್ಯ ಹೆದ್ದಾರಿಯ ಹೊರ ಅಂಚಿನಿಂದ ಅಥವಾ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೀಸ್​ ರಸ್ತೆಯಿಂದ ಕನಿಷ್ಠ 500ಮೀ ಅಂತರದಲ್ಲಿ ಮದ್ಯದ ಅಂಗಡಿ ಇರಬೇಕು ಎಂದು ಸರ್ಕಾರದ ಮಾನದಂಡವಿದೆ. ಆದರೆ, ಹೆದ್ದಾರಿ ಬದಿಯ ಕೆಲ ರೆಸ್ಟೋರೆಂಟ್​, ಪೆಟ್ಟಿಗೆ ಅಂಗಡಿ, ಡಾಬಾಗಳಲ್ಲಿ ಮದ್ಯ ಅಕ್ರಮವಾಗಿ ಸಿಗುತ್ತಿರುವುದರಿಂದ ಡ್ರಿಂಕ್​ ಆ್ಯಂಡ್​ ಡೆವ್​ ಪ್ರಕರಣ ಹೆಚ್ಚುತ್ತಿದೆ.
ಕೈಗೊಳ್ಳಬೇಕಿರುವ ಕ್ರಮಗಳು
* ಹೆದ್ದಾರಿಯ ಪ್ರಮುಖ ಜಂನ್​ಗಳಲ್ಲಿ ರಾತ್ರಿ ದೃಷ್ಟಿ ಗೋಚರತೆ ಹೆಚ್ಚಿಸಲು ಬ್ಲಿಂಕರ್​ ಲೈಟ್​ ಮತ್ತು ರಿಫ್ಲೆಕ್ಟರ್​ಗಳ ಅಳವಡಿಕೆ.
* ಅಪಘಾತ ನಡೆಯುವ ಸ್ಥಳಗಳನ್ನು ಗುರುತಿಸಿ, ಅಂತಹ ಕಡೆ ಹಂಪ್ಸ್​ ನಿರ್ಮಾಣ, ರಸ್ತೆ ವಿಸ್ತರಣೆ ಇಲ್ಲವೇ ಸೂಚನಾ ಫಲಕ ಹಾಕಬೇಕು.
* ಲಾರಿ ಮತ್ತು ಬಸ್​ಗಳು ಹೆದ್ದಾರಿಯ ಎಡಭಾಗದ ಲೇನ್​ನಲ್ಲೆ ಚಲಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಬೇಕು, ಉಲ್ಲಂಸುವವರಿಗೆ ದಂಡ ವಿಧಿಸಬೇಕು.
* ಮದ್ಯ ಸೇವಿಸಿ ವಾಹನ ಚಲಾವಣೆ ನಿಯಂತ್ರಣಕ್ಕೆ ರಾತ್ರಿ ಮತ್ತು ವಾರಾಂತ್ಯಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಬೇಕಿದೆ.
ಅಪಘಾತಕ್ಕೆ ಪ್ರಮುಖ ಕಾರಣ
* ವಾಹನ ಚಲಾಯಿಸುವಾಗ ಮೊಬೈಲ್​ ಬಳಕೆ
* ಹಿಂಬದಿ ವಾಹನ ಗಮನಿಸದೆ ಓವರ್​ಟೇಕ್​ ಮಾಡುವುದು
* ಹಠಾತ್ತಾಗಿ ಅಡ್ಡ ಬರುವ ಜಾನುವಾರು, ಕಾಡುಪ್ರಾಣಿಗಳು
* ರಾತ್ರಿ ಹೈ&ಬೀಮ್​ ಲೈಟ್​ ಹಾಕುವುದು
* ಅತಿ ವೇಗ, ಸೀಟ್​ ಬೆಲ್ಟ್​ ಮತ್ತು ಹೆಲ್ಮೆಟ್​ ಧರಿಸದಿರುವುದು
ಬಳಕೆಗಿಲ್ಲ ಬಸ್​ ನಿಲ್ದಾಣಗಳು
ರಾಷ್ಟ್ರೀಯ ಹೆದ್ದಾರಿ&75ರ ಸರ್ವೀಸ್​ ರಸ್ತೆಯಲ್ಲಿ ಬಸ್​ ನಿಲ್ದಾಣಗಳಿದ್ದೂ ಕೆಲ ಬಸ್​ಗಳು ಸರ್ವೀಸ್​ ರಸ್ತೆಗೆ ಇಳಿಯದ ಕಾರಣ ಅವು ಪ್ರಯಾಣಿಕರಿಲ್ಲದೆ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಹೆದ್ದಾರಿ ಬದಿಯಲ್ಲಿಯೇ ಬಸ್​ಗಳನ್ನು ಕಾಯುವ ಸ್ಥಿತಿ ಪ್ರಯಾಣಿಕರದು. ಇದು ಅಪಾಯಕ್ಕೆ ಆಹ್ವಾನಿಸುತ್ತಿದೆ.
55 ಪ್ರಕರಣಗಳು ದಾಖಲು
2026ರ ಆರಂಭದಿಂದ ಇಲ್ಲಿಯವರೆಗೆ ಕುದೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 55 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 24 ಮಂದಿ ಮೃತಪಟ್ಟು, 62ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಶೇ.50ರಷ್ಟು ಮಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಪಘಾತಗಳಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಕುದೂರು ಪೊಲೀಸರು ಮಾಹಿತಿ ನೀಡಿದ್ದಾರೆ.
"

ಹೆದ್ದಾರಿಗಳಲ್ಲಿ ವೇಗಮಿತಿ ಮೀರಿ ಬರುವ ವಾಹನಗಳಿಂದ ಪಾದಚಾರಿ ಹಾಗೂ ವಾಹನಗಳು ರಸ್ತೆ ದಾಟುವಾಗ ಅಪಘಾತಕ್ಕೀಡಾಗುತ್ತಿವೆ. ಈಗ ವಾಹನಗಳ ವೇಗಮಿತಿ ಕಡಿಮೆಗೊಳಿಸಲು ಹಾಟ್​ಸ್ಪಾಟ್​ಗಳಲ್ಲಿ ಬ್ಯಾರಿಕೇಡ್​, ಡ್ರಮ್​ಗಳನ್ನು ಅಳವಡಿಸಲಾಗಿದೆ. ಅಪಘಾತಗಳ ಪ್ರಮಾಣದಲ್ಲಿ ಇಳಿಕೆಯಾಗಿದೆ. ತಾಳೇಕೆರೆ ಹಾಗೂ ತಿಪ್ಪಸಂದ್ರ ಹ್ಯಾಂಡ್​ ಪೋಸ್ಟ್​ಗಳಲ್ಲಿ ಸಂಚಾರಸಿಕ್ಕು ಉಂಟಾಗದಂತೆ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.

— > ರವಿ ಡಿವೈಎಸ್ಪಿ, ಮಾಗಡಿ ಉಪ ವಿಭಾಗ

"

ಕೋಟ್​ರಾಷ್ಟ್ರೀಯ ಹೆದ್ದಾರಿ&75ರ ತಿಪ್ಪಸಂದ್ರ ಮತ್ತು ತಾಳೇಕೆರೆ ಹ್ಯಾಂಡ್​ ಪೋಸ್ಟ್​ ಬಳಿ ಹೆದ್ದಾರಿ ಪ್ರಾಧಿಕಾರದಿಂದ ಸೇತುವೆ ಕಾಮಗಾರಿ ನಡೆಯುತ್ತಿದ್ದು, ತಾಳೇಕೆರೆ ರಸ್ತೆ ಪಾಳ್ಯದಿಂದ ಕುಣಿಗಲ್​ ಅಂಚೇಪಾಳ್ಯದವರೆಗೂ ನಿತ್ಯ ವಾಹನ ದಟ್ಟಣೆಯಾಗುತ್ತಿದೆ. ಅಪಘಾತಕ್ಕೆ ಇದು ಸಹ ಕಾರಣವಾಗಿದ್ದು, ವಾಹನ ದಟ್ಟಣೆ ನಿಯಂತ್ರಣಕ್ಕೆ ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಬೇಕು.

— > ಕನ್ನಡ ಕುಮಾರ್​ ಸಾಮಾಜಿಕ ಹೋರಾಟಗಾರ, ಹನುಮಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net