ನಗರದ ನಿವಾಸಿ ಯೋಗೇಶ್ (41) ಹತ್ಯೇಗಿಡಾದವರು. ಚನ್ನಪಟ್ಟಣ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ವಿಭಾಗದ ಎಫ್ಡಿಎ ಆಗಿದ್ದ ಯೋಗೇಶ್ ಪ್ರತಿನಿತ್ಯ ಕಾಲೇಜು ಪಕ್ಕದ ಖಾಲಿ ಜಾಗದಲ್ಲಿ ಸ್ನೇಹಿತರೊಂದಿಗೆ ಮದ್ಯಸೇವನೆಗೆ ಬರುತ್ತಿದ್ದರು. ಭಾನುವಾರ ರಾತ್ರಿಯೂ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ವೇಳೆ ಜಗಳ ಶುರುವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ, ಮದ್ಯದ ಮತ್ತಿನಲ್ಲಿದ್ದ ಯೋಗೇಶ್ ಮೇಲೆ ಸ್ನೇಹಿತರೇ ಕಲ್ಲು ಎತ್ತಿಹಾಕಿದ್ದಾರೆ ಎನ್ನಲಾಗಿದೆ. ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಐಜೂರು ಠಾಣೆ ಪೊಲೀಸರು, ಮರಣೋತ್ತರ ಪರೀೆಗೆ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಪರೀೆ ರವಾನಿಸಿದರು. ಬಳಿಕ ವಾರಸುದಾರರಿಗೆ ಹಸ್ತಾಂತರಿಸಿದರು. ಶ್ವಾನದಳ ಸೇರಿದಂತೆ ವಿಧಿ ವಿಜ್ಞಾನ ತರು ಸ್ಥಳ ಪರಿಶೀಲಿಸಿ, ಸಾಕ್ಷ$್ಯ ಸಂಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.