ಇದೇ ವೇಳೆ ಡಿ.ಕೆ.ಶಿವಕುಮಾರ್ ಅವರಿಗೆ ಪಂಗನಾಮ ಎಂದಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ತಿರುಗೇಟು ನೀಡಿದ ಶಾಸಕ ಇಕ್ಬಾಲ್ ಹುಸೇನ್, ವಿರೋಧ ಪಕ್ಷದವರು ಇನ್ನೇನು ತಾನೆ ಹೇಳಲು ಸಾಧ್ಯ. ಪಂಗನಾಮ, ಚೊಂಬು ಎಂದು ಹೇಳೋದನ್ನ ಬೆಳೆಸಿಕೊಂಡಿದ್ದಾರೆ ಬೇರೆ ಕೆಲಸ ಇಲ್ಲ, ಹಾಗಾಗಿ ಟೀಕೆ ಮಾಡುತ್ತಾರೆ. ಅಧಿಕಾರಕ್ಕಾಗಿ ನಮ್ಮ ನಾಯಕರು ದೆಹಲಿಗೆ ಹೋಗಿಲ್ಲ ಅವರು ಅವಕಾಶವಾದಿ ಅಲ್ಲ ಶ್ರಮಕ್ಕೆ, ಪ್ರಾರ್ಥನೆಗೆ ಫಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.