ವಾರಕ್ಕೊಮ್ಮೆ ಮನೆಯಲ್ಲಿರುವ ಸೀಮೆಎಣ್ಣೆ ಡ್ರಮ್ಗಳು, ತೊಟ್ಟಿಗಳು, ಏರ್ ಕೂಲರ್ಗಳು, ಸಿಂಪ್ ಹಾಗೂ ನೀರಿನ ಪಾತ್ರೆಗಳನ್ನು ಖಾಲಿ ಮಾಡಿ, ತೊಳೆದು ಒಣಗಿಸಬೇಕು. ಕುಡಿಯುವ ಮತ್ತು ಬಳಸುವ ನೀರಿನ ಪಾತ್ರೆಗಳು, ಡ್ರಮ್ಗಳನ್ನು ಬಿಗಿಯಾಗಿ ಮುಚ್ಚಿರಬೇಕು. ತೆಂಗಿನ ಬೊಂಬೆಗಳು, ಹಳೆಯ ಬಾಟಲಿಗಳು ಮತ್ತು ಒಡೆದ ಕುಂಡಗಳಲ್ಲಿ ನೀರು ನಿಲ್ಲದಂತೆ ತಕ್ಷಣ ವಿಲೇವಾರಿ ಮಾಡಬೇಕು. ಹಗಲಿನಲ್ಲೂ ಮೈತುಂಬಾ ಬಟ್ಟೆಗಳನ್ನು ಧರಿಸಿ, ಕಿಟಕಿ ಮತ್ತು ಬಾಗಿಲುಗಳಿಗೆ ಸೊಳ್ಳೆ ಬಾರದಂತೆ ಜಾಲರಿ ಅಳವಡಿಸಿ. ಮಲಗುವಾಗ ಸೊಳ್ಳೆಪರದೆ ಹಾಗೂ ಸೊಳ್ಳೆ ನಿವಾರಕ ಕ್ರೀಮ್ಗಳನ್ನು ಬಳಸಿ ಎಂದರು. ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಸೊಳ್ಳೆ ಸಂತಾನೋತ್ಪತ್ತಿ ತಾಣಗಳ ತಪಾಸಣೆ ನಡೆಸಿದಾಗ ಸಾರ್ವಜನಿಕರು ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಇಲಾಖೆ ಫಾಗಿಂಗ್ ಮಾಡಿದಾಗ ಪೂರ್ಣ ಪ್ರಮಾಣದ ಬೆಂಬಲ ನೀಡಬೇಕು ಎಂದರು.