

ರೈತಸೇವಾ ಸಹಕಾರ ಸಂದ ಅವಧಿ ಮುಗಿದಿದ್ದು, ರಾಜಕೀಯ ಪ್ರಭಾವ ಬಳಸಿ ಚುನಾವಣೆ ನಡೆಸಿರಲಿಲ್ಲ. ಇದೀಗ ತಡವಾಗಿಯಾದರೂ ಚುನಾವಣೆ ೂಷಣೆಯಾಗಿದೆ. ಮೈತ್ರಿ ಅಭ್ಯರ್ಥಿಗಳಾಗಿ 12 ಮಂದಿ ಸ್ಪರ್ಧೆಯಲ್ಲಿದ್ದಾರೆ. ಸಂದಲ್ಲಿ ಷೇರು ಹೊಂದಿರುವ ರೈತರು ಜೆಡಿಎಸ್ ಬೆಂಬಲಿತರಾಗಿದ್ದು, ಈ ಬಾರಿಯೂ ನಮ್ಮನ್ನು ಕೈಬಿಡಲ್ಲ ಎನ್ನುವ ವಿಶ್ವಾಸ ನನಗಿದೆ. ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತು ಮುಖಂಡರು ಜೆಡಿಎಸ್ಗೆ ಸೇರ್ಪಡೆಯಾಗುತ್ತಿದ್ದಾರೆ.
ಬಿಡದಿ ರೈತಸೇವಾ ಸಹಕಾರ ಸಂದ ನಿರ್ದೇಶಕರ ಚುನಾವಣೆಗೆ ನಮ್ಮ ಪದಿಂದ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಗೂ ಹಣ ನೀಡುತ್ತಿದೆ. ಹಾಗಾಗಿ ಜನರು ನಮ್ಮನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ.