ಬಾಲಕನಿಗೆ ಲೈಂಗಿಕ ಕಿರುಕುಳ ಅಪರಾಧಿಗೆ 20 ವರ್ಷ ಜೈಲು

ಕೋರ್ಟ್
ಕೋರ್ಟ್
Published on

ಪ್ರಮುಖ ಮುಖ್ಯಾಂಶಗಳು

  • 2022ರಲ್ಲಿ ನಡೆದಿದ್ದ ಘಟನೆ
  • 7 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ
  • ಭಯದಿಂದ ಪಾಲಕರಿಗೆ ವಿಷಯ ತಿಳಸದೇ ಇದ್ದ ಬಾಲಕ
ರಾಮನಗರ: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ ಅಪರಾಧಿಗೆ 20 ವರ್ಷ ಜೈಲು ಮತ್ತು 10 ಸಾವಿರ ರೂ ದಂಡ ವಿಧಿಸಿ ರಾಮನಗರದ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
2022ರಲ್ಲಿ ನಡೆದ ಪ್ರಕರಣದಲ್ಲಿ ಚನ್ನಪಟ್ಟಣ ತಾಲೂಕಿನ ಗ್ರಾಮವೊಂದರ ಅಪರಾಧಿಗೆ ನಾಗೇಂದ್ರ ಶಿಕ್ಷೆಗೆ ಒಳಗಾದವನು.
ಘಟನೆ ವಿವರ: 2022ರ ಜನವರಿ 8ರಂದು ಚನ್ನಪಟ್ಟಣ ತಾಲೂಕಿನ ಗ್ರಾಮವೊಂದರಲ್ಲಿ 7 ವರ್ಷ ಬಾಲಕ ತನ್ನ ಅಜ್ಜಿ ಮನೆಗೆ ತೆರಳಿದ್ದ . ಈ ವೇಳೆ ಜೋಳವನ್ನು ಬೇಯಿಸಿಕೊಳ್ಳಲು, ಅಪರಾಧಿ ನಾಗೇಂದ್ರ ಅವರ ನೀರಿನ ಒಲೆ ಇದ್ದ ಶೆಡ್​ಗೆ ತೆರಳಿದ್ದ, ಈ ವೇಳೆ ನಾಗೇಂದ್ರ, ಬಾಲಕನ ಬಾಯಿಗೆ ಬಲವಂತವಾಗಿ ತನ್ನ ಮರ್ಮಾಂಗವನ್ನು ಹಾಕಿ ಅಸಭ್ಯವಾಗಿ ವರ್ತಿಸಿದ್ದ.
ಈ ಘಟನೆಯಿಂದ ಬಾಲಕ ತೀವ್ರ ಆಘಾತಕ್ಕೆ ಒಳಗಾಗಿದ್ದ, ಮತ್ತು ನೋವಿನಿಂದಾಗಿ ಸರಿಯಾಗಿ ಊಟ ಮಾಡಿರಲಿಲ್ಲ. ನಂತರ ವಿಚಾರ ಮಾಡಲಾಗಿ ಪಾಲಕರಿಗೆ ವಿಷಯ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ನೊಂದ ಬಾಲಕನ ತಂದೆ ನಾಗೇಂದ್ರ ವಿರುದ್ಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.
ನಂತರ ತನಿಖೆ ಕೈಗೊಂಡಿದ್ದ ಸಿಪಿಐ ಶಿವಕುಮಾರ್ ಮತ್ತು ಪ್ರಕಾಶ್​ ನೇತೃತ್ವದ ತಂಡ ಆರೋಪಿ ನಾಗೇಂದ್ರನನ್ನು ಬಂಧಿಸಿ, ನಂತರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ನಂತರ ವಿಚಾರಣೆ ನಡೆಸಿದರ ರಾಮನಗರ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಪಂಚಾಕ್ಷರಿ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ನಾಗೇಂದ್ರಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂ.ಗಳ ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಒಂದು ವೇಳೆ ದಂಡ ಮೊತ್ತವನ್ನು ಪಾವತಿಸಲು ವಿಫಲವಾದರೆ 2 ತಿಂಗಳು ಹೆಚ್ಚುವರಿ ಶಿಕ್ಷೆಯನ್ನು ನೀಡಿದ್ದಾರೆ.
ಸರ್ಕಾರಿ ವಿಶೇಷ ಅಭಿಯೋಜಕರಾಗಿ ಮೀನಾ ಕುಮಾರಿ ಎನ್​ ವಾದ ಮಂಡಿಸಿದ್ದರು. ತನಿಖಾಧಿಕಾರಿಗಳಾಗಿ ಟಿ.ಬಿ.ಶಿವಕುಮಾರ್​, ಬಿ.ಕೆ.ಪ್ರಕಾಶ್​, ಪಿಎಸ್​ಐ ಮನೋಹರ್​, ಸಿಬ್ಬಂದಿ ನಾಗಯ್ಯ ಹಿರೇಮಠ, ವಿರೇಶ್​ ಗಂಡ್ಲುಮನಿ ಕಾರ್ಯನಿರ್ವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net