ನಾರಾಯಣಿ ಪಾಳ್ಯದಲ್ಲಿರುವ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಜಯಮ್ಮ ಎಂದಿನಂತೆ ಬುಧವಾರ ಬೆಳಗ್ಗೆ ಮನೆಯಿಂದ ಅಂಗನವಾಡಿಗೆ ನಡೆದುಕೊಂಡು ಹೋಗುತ್ತಿದ್ದಾಗ ಸೂರಪ್ಪನಹಳ್ಳಿ ಬಸ್ ನಿಲ್ದಾಣದ ಬಳಿ ನೆಲಮಂಗಲ ಕಡೆಯಿಂದ ಬೈಕ್ನಲ್ಲಿ ಬಂದ ಇಬ್ಬರು ವೃದ್ಧೆಯನ್ನು ನಿಲ್ಲಿಸಿ, ನಾವು ಪೊಲೀಸರು ಎಂದು ಹೇಳಿ ಸರ ಹಾಕಿಕೊಂಡು ನಡೆದುಕೊಂಡು ಹೋದರೆ ಕಳ್ಳರು ಬಂದು ನಿಮ್ಮ ಸರವನ್ನು ಕಿತ್ತುಕೊಂಡು ಹೋಗುತ್ತಾರೆ. ಹಾಗಾಗಿ ಅದನ್ನು ತೆಗೆದು ಬ್ಯಾಗಿನಲ್ಲಿಟ್ಟುಕೊಳ್ಳುವಂತೆ ಸೂಚಿಸಿದ್ದಾರೆ.