ದೇವಾಲಯದಲ್ಲಿ ಚಿನ್ನಾಭರಣ ಕದ್ದವನ ಬಂಧನ

ಕನಕಪುರದ ಕೆಂಕೇರಮ್ಮ ದೇವಾಲಯದಲ್ಲಿ ಕಳವಾಗಿದ್ದ ಚಿನ್ನಾಭರಣಗಳನ್ನು ನಗರ ಪೊಲೀಸರು ವಶಪಡಿಸಿಕೊಂಡಿರುವುದು. ಸರ್ಕಲ್​ ಇನ್​ಸ್ಪೆಕ್ಟರ್​ ಅನಂತರಾಮು, ಪಿಎಸ್​ಐ ರತ್ನಮ್ಮ, ಸಿಬ್ಬಂದಿ ಶಿವಶಂಕರ್​, ಸಿಬ್ಬಂದಿ ಇದ್ದಾರೆ.
ಕನಕಪುರದ ಕೆಂಕೇರಮ್ಮ ದೇವಾಲಯದಲ್ಲಿ ಕಳವಾಗಿದ್ದ ಚಿನ್ನಾಭರಣಗಳನ್ನು ನಗರ ಪೊಲೀಸರು ವಶಪಡಿಸಿಕೊಂಡಿರುವುದು. ಸರ್ಕಲ್​ ಇನ್​ಸ್ಪೆಕ್ಟರ್​ ಅನಂತರಾಮು, ಪಿಎಸ್​ಐ ರತ್ನಮ್ಮ, ಸಿಬ್ಬಂದಿ ಶಿವಶಂಕರ್​, ಸಿಬ್ಬಂದಿ ಇದ್ದಾರೆ.
Published on
ಕನಕಪುರ: ನಗರದ ಕೆಂಕೇರಮ್ಮ ದೇವಾಲಯದಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಅಂತರ ಜಿಲ್ಲಾ ಸರಗಳ್ಳನನ್ನು ಬಂಧಿಸಿರುವ ನಗರ ಠಾಣೆ ಪೋಲಿಸರು, ಬಂಧಿತನಿಂದ 1.18 ಲಕ್ಷ ರೂ. ಮೌಲ್ಯದ 8 ಗ್ರಾಂ. ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಮಸಗಲಾಪುರ ಗ್ರಾಮದ ನಿವಾಸಿ, ತಾಲೂಕಿನ ಎರಗನಹಳ್ಳಿಯಲ್ಲಿ ವಾಸವಿದ್ದ ಮಂಜ (38) ಬಂಧಿತ. 2023ರ ಆಗಸ್ಟ್​ 13ರಂದು ರಾತ್ರಿ ದೇವಾಲಯದ ಬಾಗಿಲು ಮುರಿದು 4 ಗ್ರಾಂ ಚಿನ್ನದ ಗುಂಡು, 4 ಗ್ರಾಂನ ಚಿನ್ನದ ಲಕ್ಷಿ$್ಮ ಕಾಸು ಹಾಗೂ 50 ಗ್ರಾಂ ಬೆಳ್ಳಿ ಸಾಮಗ್ರಿಗಳನ್ನು ಕದ್ದು ಪರಾರಿಯಾಗಿದ್ದ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಗರ ಠಾನೆ ಪೊಲೀಸರು ತನಿಖೆ ಕೈಗೊಂಡು, ಆರೋಪಿ ಮೈಸೂರಿನಲ್ಲಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ವಶಕ್ಕೆ ಪಡೆದುಕೊಂಡಿದ್ದಾರೆ. ಜಿಲ್ಲಾ ಪೋಲಿಸ್​ ವರಿಷ್ಠಾಧಿಕಾರಿ ಶ್ರೀನಿವಾಸ್​ಗೌಡ ನೇತೃತ್ವದಲ್ಲಿ ಸರ್ಕಲ್​ ಇನ್​ಸ್ಪೆಕ್ಟರ್​ ಅನಂತರಾಮು, ಪಿಎಸ್​ಐ ರತ್ನಮ್ಮ, ಸಿಬ್ಬಂದಿ ಶಿವಶಂಕರ್​, ರಮೇಶ್​, ರವಿ, ವಿಶ್ವಾಸ್​, ಮನು, ತ್ರಿವೇಣ್​, ಚಾಲಕ ಶಂಕರಲಿಂಗಯ್ಯ ಕಾರ್ಯಾಚಣೆ ನಡೆಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net