ಕೆಂಪೇಗೌಡರ ಫ್ಲೆಕ್ಸ್​ಗೆ ಬೆಂಕಿ ಹಚ್ಚಿದವನ ಸೆರೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಚನ್ನಪಟ್ಟಣ: ದೇವರಹಳ್ಳಿಯಲ್ಲಿ ನಾಡಪ್ರಭು ಕೆಂಪೇಗೌಡರ ್ಲೆಕ್ಸ್​ಗೆ ಬೆಂಕಿ ಹಚ್ಚಿದ್ದವರ ಪೈಕಿ ಒಬ್ಬನನ್ನು ಎಂಕೆ ದೊಡ್ಡಿ ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಗ್ರಾಮದ ಡಿ.ಪಿ.ಶಶಾಂಕ್​ (20) ಬಂಧಿತ. ಪ್ರಕರಣದಲ್ಲಿ ಪಾಲ್ಗೊಂಡಿದ್ದ ಇನ್ನಿಬ್ಬರ ಮಾಹಿತಿ ಲಭ್ಯವಾಗಿದ್ದು, ಅವರ ಬಂಧನಕ್ಕೂ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜೂ.27ರಂದು ಕೆಂಪೇಗೌಡರ ಜಯಂತಿ ಅಂಗವಾಗಿ ಗ್ರಾಮದಲ್ಲಿ ಅಳವಡಿಸಿದ್ದ ಕೆಂಪೇಗೌಡರ ಬೃಹತ್​ ಬ್ಯಾನರ್​ಗೆ ಭಾನುವಾರ ಮಧ್ಯರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಈ ಪ್ರಕರಣ ಬೆಳಕಿಗೆ ಬರುತ್ತಲ್ಲೆ ಗ್ರಾಮಸ್ಥರು ಪ್ರತಿಭಟನೆಯ ಹಾದಿ ಹಿಡಿದಿದ್ದರು.

24 ತಾಸಿನಲ್ಲಿ ಯಶಸ್ವಿ!:

ಗ್ರಾಮಕ್ಕೆ ಪಾತೀತವಾಗಿ ಆಗಮಿಸಿದ ಒಕ್ಕಲಿಗ ಸಮಾಜ ಮುಖಂಡರು ಟನೆಯನ್ನು ತೀವ್ರವಾಗಿ ಖಂಡಿಸುವ ಜೊತೆಗೆ, ಈ ಕೃತ್ಯ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಲು ಆಗ್ರಹಿಸಿದ್ದರು. ಪ್ರತಿಭಟನಾಕಾರರ ಮನವೊಲಿಸಿದ ಡಿವೈಎಸ್ಪಿ ಕೆ.ಸಿ.ಗಿರಿ, ಸಿಪಿಐ ಪ್ರಕಾಶ್​, ಪಿಎಸ್​ಐಗಳಾದ ಸಹನಾ ಪಾಟೀಲ್​, ಮನೋಹರ್​ ಸೇರಿ ಇನ್ನಿತರ ಅಧಿಕಾರಿಗಳು ಮೂರು ದಿನದೊಳಗೆ ಆರೋಪಿಗಳನ್ನು ಪತ್ತೆಹಚ್ಚುವುದಾಗಿ ಭರವಸೆ ನೀಡಿ ಪ್ರತಿಭಟನಾಕಾರರ ಮನವೊಲಿಸಿದ್ದರು. ಭರವಸೆ ನೀಡಿದ 24 ಗಂಟೆಯಲ್ಲೇ ಖಚಿತ ಮಾಹಿತಿ ಮೇರೆಗೆ ಡಿ.ಪಿ.ಶಶಾಂಕ್​ ಎಂಬಾತನನ್ನು ಬಂಧಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net