ರಾಜ್ಯದಲ್ಲಿ ದಲಿತರನ್ನೇಮುಖ್ಯಮಂತ್ರ ಮಾಡಿ

ಮಾಗಡಿ ಪ್ರವಾಸಿಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬೆಸ್ಕಾಂ ಮಾಜಿ ನಿರ್ದೇಶಕ ಬಿ.ವಿ.ಜಯರಾಮ್​ ಮಾತನಾಡಿದರು. ಸಮೃದ್ಧಿ ಜನ ಸೇವಾ ಟ್ರಸ್ಟ್​ ಅಧ್ಯಕ್ಷ ಡಿ.ಶಿವಶಂಕರ್​, ಯುವಕವಿ ತೋವಿ ಗಿರೀಶ್​,, ಕುದೂರು ಬ್ಲಾಕ್​ ಎಸ್ಸಿ&ಎಸ್ಟಿ ಅಧ್ಯಕ್ಷ ರವಿಕುಮಾರ್​, ರಾಮನಗರದ ಚೆಲುವರಾಜು, ನರಸಿಂಹಮೂರ್ತಿ, ಸುರೇಶ್​, ಸುಗ್ಗನಹಳ್ಳಿ ಕೃಷ್ಣಮೂರ್ತಿ, ಬೀಚನಹಳ್ಳಿ ಸುರೇಶ್​, ನಾಗರಾಜು, ರವಿಶಂಕರ್​ ಇತರರು ಇದ್ದರು.
ಮಾಗಡಿ ಪ್ರವಾಸಿಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬೆಸ್ಕಾಂ ಮಾಜಿ ನಿರ್ದೇಶಕ ಬಿ.ವಿ.ಜಯರಾಮ್​ ಮಾತನಾಡಿದರು. ಸಮೃದ್ಧಿ ಜನ ಸೇವಾ ಟ್ರಸ್ಟ್​ ಅಧ್ಯಕ್ಷ ಡಿ.ಶಿವಶಂಕರ್​, ಯುವಕವಿ ತೋವಿ ಗಿರೀಶ್​,, ಕುದೂರು ಬ್ಲಾಕ್​ ಎಸ್ಸಿ&ಎಸ್ಟಿ ಅಧ್ಯಕ್ಷ ರವಿಕುಮಾರ್​, ರಾಮನಗರದ ಚೆಲುವರಾಜು, ನರಸಿಂಹಮೂರ್ತಿ, ಸುರೇಶ್​, ಸುಗ್ಗನಹಳ್ಳಿ ಕೃಷ್ಣಮೂರ್ತಿ, ಬೀಚನಹಳ್ಳಿ ಸುರೇಶ್​, ನಾಗರಾಜು, ರವಿಶಂಕರ್​ ಇತರರು ಇದ್ದರು.
Published on
ಮಾಗಡಿ: ಮುಖ್ಯಮಂತ್ರಿಗಳನ್ನು ಬದಲಾಯಿಸುವುದಾದರೆ ದಲಿತ ನಾಯಕರಿಗೆ ಅವಕಾಶ ಕಲ್ಪಿಸಬೇಕು ಎಂದು ಬೆಸ್ಕಾಂ ಮಾಜಿ ನಿರ್ದೇಶಕ ಬಿ.ವಿ.ಜಯರಾಮ್​ ತಿಳಿಸಿದರು.
ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಸ್ವಾತಂತ್ರ$್ ಬಂದು 78 ವರ್ಷಗಳು ಕಳೆದರೂ ದಲಿತ ನಾಯಕರಿಗೆ ರಾಜಕೀಯವಾಗಿ ಅನ್ಯಾಯವಾಗುತ್ತಲೇ ಇದೆ. 2013ರಿಂದ 2023ರವರೆಗೂ ದಲಿತ ಸಿಎಂ ಕೂಗು ಜೋರಾಗಿ ಕೇಳಿಬರುತ್ತಿದೆ. ಈ ಬಗ್ಗೆ ಹೈಕಮಾಂಡ್​ಗೂ ಒತ್ತಾಯಿಸಲಾಗಿದೆ.
ಈಗ ಸಿಎಂ ಬದಲಾದರೆ ಕಾಂಗ್ರೆಸ್​ನ ದಲಿತ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ, ಸಚಿವರಾದ ಡಾ.ಜಿ.ಪರಮೇಶ್ವರ್​, ಎಚ್​.ಸಿ.ಮಹದೇವಪ್ಪ, ಕೆ.ಎಚ್​.ಮುನಿಯಪ್ಪ, ಸತೀಶ್​ ಜಾರಕಿಹೊಳಿ ಈ ಐವರಲ್ಲಿ ಯಾರಿಗಾದರೂ ಸಿಎಂ ಸ್ಥಾನ ಕಲ್ಪಿಸಿಕೊಡಬೇಕು. ಅದರಲ್ಲೂ ಕಾಂಗ್ರೆಸ್​ ನೆಲಕಚ್ಚಿದ್ದಾಗ ಕೆಪಿಸಿಸಿ ಅಧ್ಯಾಗಿ, ಪಕ್ಷವನ್ನು ಅಧಿಕಾರಕ್ಕೆ ತಂದ ಜಿ.ಪರಮೇಶ್ವರ ಅವರನ್ನು ಸಿಎಂ ಮಾಡಬಹುದು ಎಂದು ಒತ್ತಾಯಿಸಿದರಲ್ಲದೇ, ದಲಿತರನ್ನು ಕಡೆಗಣಿಸಿದರೆ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯಾದ್ಯಂತ ದಲಿತರನ್ನು ಸಂಟಿಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಸಮೃದ್ಧಿ ಜನ ಸೇವಾ ಟ್ರಸ್ಟ್​ ಅಧ್ಯಕ್ಷ ಡಿ.ಶಿವಶಂಕರ್​ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ಬದಲಾವಣೆ ನಮ್ಮ ಉದ್ದೇಶವಲ್ಲ.
ಒಂದು ವೇಳೆ ಸಿಎಂ ಬದಲಾದರೆ ನಾಡಿನ ಬಹುಸಂಖ್ಯಾತ ಮೂಲ ನಿವಾಸಿಗಳಾದ ಪರಿಶಿಷ್ಟರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು ನಮ್ಮ ಆಗ್ರಹ. ಹಾಗಾಗಿ ಕಾಂಗ್ರೆಸ್​ ಹೈಕಮಾಂಡ್​ ದೂರ ದೃಷ್ಟಿಯಿಂದ ದಲಿತ ನಾಯಕರನ್ನು ಸಿಎಂ ಗಾದಿಗೆ ಕೂರಿಸಬೇಕು ಎಂದರು.
ರಾಜ್ಯದಲ್ಲಿ ಕೋಮುವಾದಿಗಳ ಅಟ್ಟಹಾಸ ಹೆಚ್ಚಿದೆ. ಸಂವಿಧಾನಕ್ಕೆ ಕೊಳ್ಳಿ ಇಡುವುದು ಕೃತ್ಯಗಳು ತೆರೆಮರೆಯಲ್ಲಿವೆ. ಸಂವಿಧಾನ ಉಳಿಸುವ ನಿಟ್ಟಿನಲ್ಲಿ ದಲಿತರನ್ನು ಸಿಎಂ ಮಾಡಲೇಬೇಕು. ದಲಿತರು ಬ್ಯಾನರ್​ ಕಟ್ಟುವುದಕ್ಕೆ, ಸಂಟನೆಗೆ, ಶಿಳ್ಳೆ ಹೊಡೆಯುವುದಕ್ಕೆ ಮಾತ್ರವಲ್ಲ, ರಾಜ್ಯವನ್ನು ಮುನ್ನಡೆಸುವ ಅರ್ಹತೆಯನ್ನೂ ಹೊಂದಿದ್ದಾರೆ ಎಂದರು.
"

ಡಾ.ಜಿ.ಪರಮೇಶ್ವರ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ "ಕಾಂಗ್ರೆಸ್​ ನಡಿಗೆ ಜನರ ಕಡೆಗೆ' ಎಂಬ ವಿನೂತನ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರು. 2023ರ ಚಿತ್ರದುರ್ಗ ಸಮಾವೇಶದಲ್ಲಿಯೂ ಡಾ.ಜಿ.ಪರಮೇಶ್ವರ ಹಾಗೂ ಸಾಮೂಹಿಕ ನಾಯಕತ್ವದಲ್ಲಿ 6 ಲಕ್ಷ ಜನ ಸೇರಿದ್ದರು. ಪರಮೇಶ್ವರ ಅವರ 35 ವರ್ಷಗಳ ರಾಜಕೀಯ ಜೀವನ ಆದರ್ಶವಾಗಿದೆ. ಅವರಿಗೊಂದು ಅವಕಾಶ ಕೊಡುವುದು ಕಾಂಗ್ರೆಸ್​ ಹೈಕಮಾಂಡ್​ನ ಗುರುತರ ಜವಾಬ್ದಾರಿ.

— > ಡಿ.ಶಿವಶಂಕರ್​ ಸಮೃದ್ಧಿ ಜನ ಸೇವಾ ಟ್ರಸ್ಟ್​ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net