ಕುಸ್ತಿಯಲ್ಲಿ ಮಾಗಡಿ ಹುಡುಗರ ಸಾಧನೆ Magadi Boys' Achievements in Wrestling

ಮಾಗಡಿ ಪಟ್ಟಣದ ಸರಸ್ವತಿ ವಿದ್ಯಾಮಂದಿರ ಶಾಲೆಯ ಕಿಶನ್​.ವಿ.ಎನ್​ ಹಾಗೂ ಜೀವನ್​ ಗೌಡ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಕರ್ನಾಟಕ ಕುಸ್ತಿ ಸಂದ ಪ್ರಧಾನ ಕಾರ್ಯದರ್ಶಿ ಜೆ.ಶ್ರೀನಿವಾಸ್​, ತಾಂತ್ರಿಕ ತರಬೇತಿ ಅಧ್ಯಕ್ಷ ವಿನೋದ್​, ಸಿಇಒ ನಾಗೇಶ್​.ಎಸ್​ ಇದ್ದರು.

Published on
ಮಾಗಡಿ: ಪಟ್ಟಣದ ಸರಸ್ವತಿ ವಿದ್ಯಾಮಂದಿರ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಕಿಶನ್​.ವಿ.ಎನ್​. ಹಾಗೂ ಜೀವನ್​ ಗೌಡ 2025ರ ಮಿನಿ ಒಲಿಂಪಿಕ್ಸ್​ನ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಒಲಿಂಪಿಕ್​ ಸಂಸ್ಥೆ ಹಾಗೂ ಕರ್ನಾಟಕ ಕುಸ್ತಿ ಸಂದ ಸಯುಂಕ್ತಾಶ್ರಯದಲ್ಲಿ ನ.2ರಿಂದ 9ರವರೆಗೆ 15 ವರ್ಷದೊಳಗಿನ ವಿದ್ಯಾರ್ಥಿಗಳ 2025ರ 4ನೇ ಮಿನಿ ಒಲಿಂಪಿಕ್ಸ್​ ಆಯೋಜಿಸಲಾಗಿದ್ದು, ಕುಸ್ತಿಯಲ್ಲಿ ಗ್ರೀಕೋ ರೋಮನ್​ ಶೈಲಿಯ 85ಕೆಜಿ ವಿಭಾಗದಿಂದ ಕಿಶನ್​.ವಿ.ಎನ್​ ಹಾಗೂ 57ಕೆಜಿ ವಿಭಾಗದಿಂದ ಜೀವನ್​ ಗೌಡ ಭಾಗವಹಿಸಿ, ಕಂಚಿನ ಪದಕ ಗಳಿಸಿದ್ದಾರೆ ಎಂದು ಜಿಲ್ಲಾ ಕುಸ್ತಿ ಸಂದ ಅಧ್ಯ ನಾಗೇಶ್​.ಎಸ್​ ತಿಳಿಸಿದ್ದಾರೆ. ಭಾರತೀಯ ಕುಸ್ತಿ ಸಂದ ಜಂಟಿ ಕಾರ್ಯದರ್ಶಿಗಳೂ ಆದ ರಾಜ್ಯ ಕುಸ್ತಿ ಸಂದ ಅಧ್ಯ ಬೆಳ್ಳಿಪ್ಪಾಡಿ ಗುಣರಂಜನ್​ ಶೆಟ್ಟಿ, ಕರ್ನಾಟಕ ಒಲಿಂಪಿಕ್ಸ್​ ಅಸೋಸಿಯೇಷನ್​ ಮಹಾ ಕಾರ್ಯದರ್ಶಿ ಅನಂತರಾಜು ಇದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net