ರಾಜ್ಯದ ಮುಖ್ಯಮಂತ್ರಿಯೇ ಆಗಿರಲಿ, ದೇಶದ ಪ್ರಧಾನಿ, ರಾಷ್ಟ್ರಪತಿಯೇ ಆಗಿರಲಿ, ವಿದೇಶೀ ಗಣ್ಯ ವ್ಯಕ್ತಿಗಳೇ ದೇಶಕ್ಕೆ ಬರಲಿ, ಇವರ ಭದ್ರತೆಯ ಭಾಗವಾಗಿ ಲಕ್ಕಿ ಕರ್ತವ್ಯ ನಿರ್ವಹಿಸಿದೆ. ಇನ್ನು ಪ್ರಮುಖ ಸ್ಥಳಗಳಿಗೆ ಅಪಾಯವಿದೆ ಎನ್ನುವ ಸೂಚನೆ ದೊರೆಯುತ್ತಿದ್ದಂತೆ ಲಕ್ಕಿಯ ಮುಂದಾಳತ್ವದಲ್ಲಿಯೇ ಪರಿಶೀಲನೆ ನಡೆಯುತಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೂ ಆಯೋಜನೆಗೊಳ್ಳುತ್ತಿದ್ದ ಕ್ರಿಕೆಟ್ ಪಂದ್ಯಗಳಿಗೂ ಲಕ್ಕಿ ಅಭಯ ನೀಡಿದೆ. ಹೀಗೆ ಜಿಲ್ಲೆ ಮಾತ್ರವಲ್ಲದೆ, ಹೊರ ಜಿಲ್ಲೆಗಳಲ್ಲಿಯೂ ಲಕ್ಕಿ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಡಾನ್ ಆಗಿ ಮೆರೆದಿದೆ. ಹಲವಾರು ಬಾರಿ ಪ್ರಶಸ್ತಿ ಮತ್ತು ಪ್ರಶಂಸೆಗಳನ್ನೂ ಬಾಚಿಕೊಂಡಿದೆ.