ಪಟ್ಟಣದ ಹೃದಯಭಾಗದಲ್ಲಿರುವ ಜಿಜಿಎಂಎಸ್ ಶಾಲೆಯ ಕಾಂಪೌಂಡ್ ಶಿಥಿಲಗೊಂಡು, ರಸ್ತೆಗೆ ವಾಲಿದೆ. ಅದಕ್ಕೆ ಆಸರೆಯಾಗಿ ಮರಗಳು ನಿಂತಿದ್ದು, ಮರಗಳಿಲ್ಲದಿದ್ದರೆ ಗೋಡೆ ಎಂದೋ ಬೀಳುತ್ತಿತ್ತು. ಇನ್ನು ಮರಗಳ ಕೆಲ ಬೇರುಗಳು ಗೋಡೆಯನ್ನು ಬುಡಮೇಲು ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಶಿಥಿಲ ಗೋಡೆಯನ್ನು ತೆರವುಗೊಳಿಸಿ, ಹೊಸದಾಗಿ ನಿರ್ಮಾಣಕ್ಕೆ ಇಲಾಖೆ ಕ್ರಮವಹಿಸುತ್ತಿಲ್ಲ. ಕಾಂಪೌಂಡ್ ಬಿದ್ದು ಯಾರಾದರೂ ಹೆಣವಾದ ಮೇಲೆ ಅನುದಾನ ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿ ಅಧಿಕಾರಿಗಳು ಇದ್ದಂತಿದೆ ಎಂದು ಮಕ್ಕಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.