

ಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿರುವುದು ಹೋರಾಟಗಾರರಿಗೆ ತಂದ ಜಯವಾಗಿದೆ. ಇದರಿಂದ ಕೆಂಪೇಗೌಡರ ನಾಡಿನ ಅಖಂಡ ಮಾಗಡಿ ತಾಲೂಕಿನ ಅಸ್ತಿತ್ವ ಉಳಿಯಲಿದೆ. ಈ ದೇಶದ ಕಾನೂನು ವ್ಯವಸ್ಥೆ ಉಳಿದಿದೆ ಎನ್ನುವುದಕ್ಕೆ ಇದು ಜೀವಂತ ಉದಾಹರಣೆಯಾಗಿದೆ.
ನಮ್ಮ ನಿರಂತರ ಹೋರಾಟಕ್ಕೆ ತಂದ ಜಯವಾಗಿದೆ. ಸೋಲೂರು ಹೋಬಳಿ ಮಾಗಡಿ ತಾಲೂಕಿನ ಪ್ರಮುಖ ಅಂಗವಾಗಿದೆ. ಅಲ್ಲಿನ ಕಟ್ಟಡ ಕಾರ್ಮಿಕರು, ಆಸಂಟಿತ ಕಾರ್ಮಿಕರು, ರೈತರು, ಸಾರ್ವಜನಿಕರಿಗೆ ಅನುಕೂಲವಾಗಲಿದೆ, ತಾಲೂಕಿನ ಹಲವಾರು ಮಠಾಧ್ಯಕ್ಷರ ನೇತೃತ್ವದಲ್ಲಿ ಹೋರಾಟ ನಡೆಸಿದ ಪ್ರತಿಫಲ ಇದಾಗಿದೆ.