ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಅಭಿರುಚಿ ಇರಲಿ

ಕುದೂರು ಪಬ್ಲಿಕ್​ ಶಾಲೆಯ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಮೊಟ್ಟ ಮೊದಲ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ತಮಟೆ ಬಾರಿಸುವ ಮೂಲಕ ಶಾಸಕ ಬಾಲಕೃಷ್ಣ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯ ಬಿ.ಟಿ.ನಾಗೇಶ್​, ತಾಲೂಕು ಅಧ್ಯ ಪದ್ಮನಾಭ ತಿಪ್ಪಸಂದ್ರ, ಆಧ್ಯಾತ್ಮ ಗುರು ಶ್ರೀಧರ್​ ಗುರೂಜಿ, ಹಾಸ್ಯ ಸಾಹಿತಿ ಅಣಕು ರಾಮದಾಸ್​, ಸಮ್ಮೇಳನದ ಅಧ್ಯಕ್ಷ ವಿಷ್ಣುವಲ್ಲಭ, ತನ್ಯಶ್ರೀ, ಚರ್ಚಾಗೋಷ್ಠಿ ಅಧ್ಯೆ ಛಾಯಾ ಇತರರಿದ್ದರು.
ಕುದೂರು ಪಬ್ಲಿಕ್​ ಶಾಲೆಯ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಮೊಟ್ಟ ಮೊದಲ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ತಮಟೆ ಬಾರಿಸುವ ಮೂಲಕ ಶಾಸಕ ಬಾಲಕೃಷ್ಣ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯ ಬಿ.ಟಿ.ನಾಗೇಶ್​, ತಾಲೂಕು ಅಧ್ಯ ಪದ್ಮನಾಭ ತಿಪ್ಪಸಂದ್ರ, ಆಧ್ಯಾತ್ಮ ಗುರು ಶ್ರೀಧರ್​ ಗುರೂಜಿ, ಹಾಸ್ಯ ಸಾಹಿತಿ ಅಣಕು ರಾಮದಾಸ್​, ಸಮ್ಮೇಳನದ ಅಧ್ಯಕ್ಷ ವಿಷ್ಣುವಲ್ಲಭ, ತನ್ಯಶ್ರೀ, ಚರ್ಚಾಗೋಷ್ಠಿ ಅಧ್ಯೆ ಛಾಯಾ ಇತರರಿದ್ದರು.
Published on
ಮಾಗಡಿ/ಕುದೂರು: ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸುವ ಜತೆಗೆ ನಾಡಿನ ಶ್ರೇಷ್ಠ ಸಾಹಿತ್ಯ ಪರಂಪರೆ ಮುಂದುವರಿಸಲು ಮಕ್ಕಳ ಸಾಹಿತ್ಯ ಸಮ್ಮೇಳನ ವೇದಿಕೆಯಾಗಿದ್ದು, ಬೆಂಗಳೂರು ದಣ ಜಿಲ್ಲೆಯಲ್ಲೇ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಕುದೂರಿನಲ್ಲಿ ಆಯೋಜಿಸಿರುವುದು ಉತ್ತಮ ಕಾರ್ಯ ಎಂದು ಶಾಸಕ ಎಚ್​.ಸಿ.ಬಾಲಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಕುದೂರಿನ ಕೆಪಿಎಸ್​ ಶಾಲೆ ಆವರಣದ ನಾಡಪ್ರಭು ಕೆಂಪೇಗೌಡರ ವೇದಿಕೆಯಲ್ಲಿ ತಾಲೂಕು ಕಸಾಪದಿಂದ ಹಮ್ಮಿಕೊಂಡಿದ್ದ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಅವರು, ನಾಡಿನ ಸಂಸತಿ ಮತ್ತು ಭಾಷೆ ಕನ್ನಡಿಗರ ಮಿಡಿತ. ನಾವು ಕನ್ನಡಿಗರು ಎಂದು ಎದೆ ಉಬ್ಬಿಸಿ ಹೇಳಿಕೊಳ್ಳುತ್ತೇವೆ. ಆದರೂ ಸರ್ಕಾರಿ ಕನ್ನಡ ಶಾಲೆ ಎಂದರೆ ಕೆಲ ಪಾಲಕರಲ್ಲಿ ಅಸಡ್ಡೆ ಇದೆ. ಶಿಕರು ಮಕ್ಕಳಿಗೆ ಗುಣಮಟ್ಟದ ಶಿಣ ನೀಡುವ ಮೂಲಕ ಈ ಅಸಡ್ಡೆಯನ್ನು ಹೋಗಲಾಡಿಸಬೇಕು ಎಂದು ನಿರ್ದೇಶನ ನೀಡಿದರು.
ಕಸಾಪ ಗೌರವ ಕಾರ್ಯದರ್ಶಿಗಳಾದ ಜಿ.ನಾರಾಯಣ, ಮಂಜುನಾಥ್​, ಕೋಶಾಧ್ಯ ಎಂ.ಎಸ್​.ಅಭಿಷೇಕ್​, ಕುದೂರು ಹೋಬಳಿ ಟಕದ ಅಧ್ಯ ಕೆ.ಆರ್​.ಪದ್ಮನಾಭ್​, ಜಿಲ್ಲಾ ನಿರ್ದೇಶಕರಾದ ಚಂದ್ರಶೇಖರ್​, ಸಿದ್ದಲಿಂಗೇಶ್ವರ, ಕಸ್ತೂರಿ ಕಿರಣ್​, ಸರ್ಕಾರಿ ನೌಕರರ ಸಂದ ಅಧ್ಯ ಜಯರಾಮಯ್ಯ, ಪುಟ್ಟರಾಜು, ಇಒ ಜೈಪಾಲ್​, ಬಿಇಒ ಚಂದ್ರಶೇಖರಯ್ಯ, ಬಮುಲ್​ ಉಪಾಧ್ಯ ರಾಜಣ್ಣ, ಮುಖಂಡರಾದ ಕೆ.ಎಂ.ರಾವೇಂದ್ರ, ಮಂಜೇಶ್​ಕುಮಾರ್​, ಪಂಚಾಯಿತಿ ಆಡಳಿತಾಧಿಕಾರಿ ಸುರೇಂದ್ರ, ಪಿಡಿಒ ಸತೀಶ್​, ಕಸಾಪ ಮಾಜಿ ಅಧ್ಯ ಎಂ.ಆರ್​.ರಾಮಸ್ವಾಮಿ, ನಿವೃತ್ತ ಶಿಕರಾದ ಪಿ.ನಾಗರಾಜು, ಕೆಪಿಎಸ್​ ಉಪಪ್ರಾಂಶುಪಾಲೆ ಶ್ರೀದೇವಿ, ದೈಹಿಕ ಶಿಣ ಇಲಾಖೆಯ ಮುನಿಯಪ್ಪ, ಹನುಮಂತರಾಯಪ್ಪ, ಕಾಗಿಮಡು ದೀಪು, ಶ್ರೀಗಿರಿಪುರ ಪ್ರಕಾಶ್​, ಯತೀಶ್​ ಇತರರಿದ್ದರು.
ಇನ್ಮುಂದೆ ಡಿಸೆಂಬರ್​ನಲ್ಲೇ ಆಯೋಜನೆ
ಮಾಗಡಿ ತಾಲೂಕಿನಲ್ಲಿ ಹಿರಿಯರ ಕನ್ನಡ ಸಾಹಿತ್ಯ ಸಮ್ಮೇಳನಗಳಂತೆ ಇನ್ಮುಂದೆ ಪ್ರತಿ ವರ್ಷ ಡಿಸೆಂಬರ್​ನಲ್ಲೇ ಮಕ್ಕಳ ಸಮ್ಮೇಳನ ಆಯೋಜಿಸಲಾಗುವುದು. ಕರ್ನಾಟಕ ಪಬ್ಲಿಕ್​ ಶಾಲೆಗಳ ಬಲವರ್ಧನೆಗೆ ಒತ್ತು ನೀಡಲಾಗಿದೆ. ಹಾಗೆಯೇ ಪ್ರತಿ ವರ್ಷ ಕನ್ನಡ ಭಾಷೆಯಲ್ಲಿ ಪೂರ್ಣಾಂಕ ಗಳಿಸುವ ವಿದ್ಯಾರ್ಥಿಯನ್ನು ತಾಲೂಕು ಆಡಳಿತದಿಂದ ಗೌರವಿಸಲಾಗುತ್ತಿದೆ ಎಂದು ಬಾಲಕೃಷ್ಣ ಹೇಳಿದರು.
ಸಂಗೀತ ಗೋಷ್ಠಿ
ತಾಲೂಕಿನ ವಿವಿಧ ಹೋಬಳಿಯ 13 ವಿದ್ಯಾರ್ಥಿಗಳು ಸಂಗೀತ ವಾದನಗಳಿಂದ ಶಿವಕುಮಾರ ಸ್ವಾಮೀಜಿ, ಪಾಲಕರು, ಕನ್ನಡ ಶಾಲೆಗಳನ್ನು ಉಳಿಸಿ, ಬಾಬಾ ಸಾಹೇಬ್​ ಅಂಬೇಡ್ಕರ್​, ಮಾನವೀಯತೆ, ಪರಿಸರ ಪ್ರೇಮ ಸೇರಿ ಕನ್ನಡದ ಗೀತೆಗಳು ಮತ್ತು ದಾಸರ ಕೀರ್ತನೆಗಳಿಗೆ ವಾದ್ಯ ನುಡಿಸಿ ಎಲ್ಲರ ಗಮನ ಸೆಳೆದರು.
ಶಾಸಕರೊಂದಿಗೆ ಸಂವಾದ
ಮಾಗಡಿ ತಾಲೂಕಿನ ವಿವಿಧ ಹೋಬಳಿಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಶಾಸಕರೊಂದಿಗೆ ಶೈಣಿಕ ವಿಚಾರಗಳ ಬಗ್ಗೆ ನಡೆಸಿದ ಸಂವಾದ ಸಮ್ಮೇಳನದ ವಿಶೇಷವಾಗಿತ್ತು. ಕುದೂರು ಪಬ್ಲಿಲ್​ ಶಾಲೆಯ ವಿದ್ಯಾರ್ಥಿನಿ ಅಹಲ್ಯಾ, ಸೈಕಲ್​ ಭಾಗ್ಯ ನಿಂತು ಹೋಗಿದೆ, ಸದನದಲ್ಲಿ ಮಾತನಾಡಿ ಎಂದು ಶಾಸಕರಿಗೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಅಧಿವೇಶನದಲ್ಲಿ ಚರ್ಚಿಸಿ, ಕ್ರಮವಹಿಸುವ ಭರವಸೆ ನೀಡಿದರು. ಇನ್ನು ವಿದ್ಯಾರ್ಥಿ ಭುವನ, ಶಾಸಕರೇ ನೀವು ವಿದ್ಯಾರ್ಥಿ ಜೀವನದಲ್ಲಿ ಯಾವಾಗಲಾದರೂ ಫೇಲ್​ ಆಗಿದ್ದೀರಾ? ಎಂಬ ಪ್ರಶ್ನೆಗೆ ಇಲ್ಲ ನಾನು ಎಲ್ಲದರಲ್ಲೂ ಮುಂದಿದ್ದೆ. ವೈದ್ಯನಾಗಬೇಕೆಂದಿದ್ದೆ, ಅನಿವಾರ್ಯವಾಗಿ ರಾಜಕೀಯಕ್ಕೆ ಬಂದೆ ಎಂದರು.
ಧನುಷ್​, ಗೀತಾ, ಅನಿತಾ ಲಕ್ಷಿ$್ಮ, ಯಶವಂತ ಸೇರಿದಂತೆ ಹಲವು ಮಕ್ಕಳು ಕೇಂದ್ರೀಯ ಶಿಣ ನೀತಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ, ಸರ್ಕಾರಿ ಶಾಲೆಗಳಲ್ಲಿ ಮನಶಾಸ ವಿಭಾಗದ ತರನ್ನು ಕರೆದು ಉಪನ್ಯಾಸ ಕೊಡಿಸುವುದು ಹೀಗೆ ವಿವಿಧ ವಿಷಯಗಳ ಕುರಿತು ನಾನಾ ಪ್ರಶ್ನೆಗಳನ್ನು ಶಾಸಕರಿಗೆ ಕೇಳಿ, ಉತ್ತರ ಪಡೆದರು.
ಭವಿಷ್ಯ ಕಲ್ಪಿಸುವ ಜವಾಬ್ದಾರಿ
ಶ್ರೀಧರ್​ ಗುರೂಜಿ ಮಾತನಾಡಿ, ಮಕ್ಕಳ ಸಾಹಿತ್ಯ ಸಮ್ಮೇಳನಗಳು ಇಂದು ಅನಿವಾರ್ಯವಾಗಿವೆ. ನಾವು ಏನೇ ಮಾಡಿದರೂ ಮಕ್ಕಳಿಗಾಗಿ ಮಾಡುತ್ತೇವೆ. ಭವಿಷ್ಯವನ್ನು ರೂಪಿಸುವ ಮತ್ತು ಭವಿಷ್ಯವನ್ನು ಕಟ್ಟುವ ಜವಾಬ್ದಾರಿ ಹೆಚ್ಚಿದೆ. ಮಕ್ಕಳಿಗೆ ಪೋತ್ಸಾಹ ನೀಡೋಣ ಎಂದರು. ಹಾಸ್ಯ ಸಾಹಿತಿ ಅಣಕು ರಾಮನಾಥ ಮಾತನಾಡಿ, ಆಧುನಿಕತೆಯಲ್ಲಿ ಸಾಮಾಜಿಕ ಜಾಲತಾಣಗಳ ಹಾವಳಿ ಹೆಚ್ಚಿದೆ. ಇದನ್ನು ಹೋಗಲಾಡಿಸಲು ಮಕ್ಕಳಲ್ಲಿ ಹಾಸ್ಯ ಗೋಷ್ಠಿಗಳು, ಹಾಸ್ಯ ಅಂಕಣವನ್ನು ಬರೆಯುವ ಮತ್ತು ಕಾರ್ಯಗಾರಗಳನ್ನು ರೂಪಿಸುವ ಅಗತ್ಯವಿದೆ ಎಂದರು.
ವಿಚಾರಗೋಷ್ಠಿ
ವಿಚಾರಗೋಷ್ಠಿಯ ಅಧ್ಯತೆ ವಹಿಸಿದ್ದ 8ನೇ ತರಗತಿ ವಿದ್ಯಾರ್ಥಿನಿ ಛಾಯಾ ಮಾತನಾಡಿ, ಹೆಣ್ಣು ಮಕ್ಕಳ ಶಿಣದ ಅನಿವಾರ್ಯತೆ ಮತ್ತು ಶೋಷಣೆ ತೊಡೆದು ಹಾಕಿ ಹೆಣ್ಣು ಮಕ್ಕಳಿಗೆ ನಾಗರಿಕ ಸಮಾನತೆ ಹಾಗೂ ಎಲ್ಲ ೇತ್ರಗಳಲ್ಲೂ ಗಣನೀಯ ಸ್ಥಾನಮಾನ ನೀಡುವ ಕುರಿತು ವಿಚಾರ ಮಂಡಿಸಿದರು. ಗಾಂಧಾರಿ ವಿದ್ಯೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ 4ನೇ ತರಗತಿ ವಿದ್ಯಾರ್ಥಿನಿ ರಚನಾ, ಕಣ್ಣಿಗೆ ಬಟ್ಟೆ ಕಟ್ಟಿಸಿಕೊಂಡು ಹಲವು ವಸ್ತುಗಳನ್ನು ಗುರುತಿಸುವ ಜತೆಗೆ ಪುಸ್ತಕ ಓದಿ ಎಲ್ಲರನ್ನೂ ಆಚ್ಚರಿಗೊಳಿಸಿದಳು. ಪಟ್ಟಣದ ರಾಜಬೀದಿಗಳಲ್ಲಿ ವಿದ್ಯಾರ್ಥಿಗಳ ಬ್ಯಾಂಡ್​ ಸೆಟ್​, ಜಾನಪದ ಕಲಾತಂಡಗಳು ಹಾಗೂ ಕನ್ನಡ ೂಷವಾಕ್ಯಗಳೊಂದಿಗೆ ಸಮ್ಮೇಳನ ಅಧ್ಯರು ಮತ್ತು ಭುವನೇಶ್ವರಿ ದೇವಿ ಮೆರವಣಿಗೆ ನಡೆಯಿತು.
ಗಮನಸೆಳೆದ ಮಳಿಗೆಗಳು
ವಿದ್ಯಾರ್ಥಿಗಳು ತರಕಾರಿಗಳನ್ನು ಮಾರಿ, ಮೆಟ್ರಿಕ್​ ಮೇಳ ನಡೆಸಿದರು. ಅಗಸ ವಿಾನ ಸಂಸ್ಥೆಯ ಸಹಕಾರದೊಂದಿಗೆ ನೂರಕ್ಕೂ ಹೆಚ್ಚು ವಿಾನ ಆವಿಷ್ಕಾರ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಇದರ ಜತೆಗೆ ಅಗ್ನಿಶಾಮಕ ಮಾಗಡಿ ತಂಡದವರಿಂದ ಕಲ್ಪಿತ ಪ್ರದರ್ಶನ, ಆರೋಗ್ಯ ಇಲಾಖೆ, ಆಯುರ್ವೇದ ಮತ್ತು ಸಾವಯುವ ಉತ್ಪನ್ನಗಳ ಮಳಿಗೆಗಳು, ಪುಸ್ತಕ ಮಳಿಗೆಗಳು ಹೆಚ್ಚಿನ ಗಮನಸೆಳೆದವು.
"

ಜಾನಪದ ಕಲೆ ಉಳಿಯಲು ಮತ್ತು ಮಾಗಡಿ ತಾಲೂಕಿನ ಮುಂದಿನ ಭವಿಷ್ಯ ಬೆಳಗಲು ವಿದ್ಯಾರ್ಥಿಗಳೇ ಭವಿಷ್ಯದ ನಾಗರಿಕರು. ಅವರನ್ನು ಭವ್ಯ ಭಾರತದ ಸತಜೆಗಳಾಗಿ ರೂಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರೋತ್ಸಾಹ ನೀಡೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net